ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಎಸ್.ಎಸ್. ಕೇರ್ ಟ್ರಸ್ಟ್ ಸಹಯೋಗದೊಂದಿಗೆ ಶನಿವಾರ ನಗರದ ಜಿಲ್ಲಾ ಕ್ರೀಡಾಂಗಣದಿಂದ ನಶಾಮುಕ್ತ ಭಾರತ ಹಾಗೂ ಅಂಗದಾನದಿಂದ ಮತ್ತೊಬ್ಬರ ಜೀವನ (ಜೀವನ ಸಂಜೀವಿನಿ) ಎಂಬ ಶೀರ್ಷಿಕೆಯಡಿ ‘ವಾಕಥಾನ್’ ಮೂಲಕ ಅಭಿಯಾನ ನಡೆಯಿತು.
- ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಆಯೋಜನೆ । ಡಾ.ಪ್ರಭಾ ಚಾಲನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಎಸ್.ಎಸ್. ಕೇರ್ ಟ್ರಸ್ಟ್ ಸಹಯೋಗದೊಂದಿಗೆ ಶನಿವಾರ ನಗರದ ಜಿಲ್ಲಾ ಕ್ರೀಡಾಂಗಣದಿಂದ ನಶಾಮುಕ್ತ ಭಾರತ ಹಾಗೂ ಅಂಗದಾನದಿಂದ ಮತ್ತೊಬ್ಬರ ಜೀವನ (ಜೀವನ ಸಂಜೀವಿನಿ) ಎಂಬ ಶೀರ್ಷಿಕೆಯಡಿ ‘ವಾಕಥಾನ್’ ಮೂಲಕ ಅಭಿಯಾನ ನಡೆಯಿತು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ನಶಾಮುಕ್ತ ಭಾರತ, ನಶಾಮುಕ್ತ ಕರ್ನಾಟಕ ಹಾಗೂ ಅಂಗಾಂಗ ದಾನ ಅರಿವು ಕಾರ್ಯಕ್ರಮ ನಮ್ಮ ಮನೆಗಳಿಂದಲೇ ಆರಂಭವಾಗಬೇಕು ಎಂಬ ಉದ್ದೇಶ ಹೊಂದಿದೆ. ಈ ಹಿನ್ನೆಲೆ ವಾಕಥಾನ್ ಮೂಲಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದು ಬರೀ ನಡಿಗೆ ಅಲ್ಲ, ಆಂದೋಲನದ ರೀತಿಯಲ್ಲಿ ದಾವಣಗೆರೆಯಲ್ಲಿ ಶುರು ಆಗಬೇಕು ಎಂದರು.ಡಾ.ಶಾಮನೂರು ಶಿವಶಂಕರಪ್ಪ (ಎಸ್.ಎಸ್.) ಕೇರ್ ಟ್ರಸ್ಟ್‌ಗೆ ₹20 ಕೋಟಿಯನ್ನು ಉತ್ತಮ ಆರೋಗ್ಯದ ದೃಷ್ಠಿಯಿಂದ ಹೂಡಿಕೆ ಮಾಡಿದ್ದಾರೆ. ಇದರಿಂದ ಉಚಿತವಾಗಿ ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ತಿಂಗಳು 700 ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಮಾಡಲಾಗುತ್ತಿದೆ. ಎಸ್.ಎಸ್. ಕೇರ್ ಟ್ರಸ್ಟ್‌ನಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆರೋಗ್ಯ, ಚಿಕಿತ್ಸೆ, ಅರಿವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅಂಗಾಂಗ ದಾನದ ಕುರಿತು ಸಹಾ ಜಾಗೃತಿ ಮೂಡಿಸಲಾಗುತ್ತಿದೆ. ಯುವಜನರು, ವಿದ್ಯಾರ್ಥಿಗಳು ಕ್ರೀಡೆ, ನಿತ್ಯ ವ್ಯಾಯಾಮ, ಓಟ, ಯೋಗ, ಧ್ಯಾನ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್, ವಿವಿ ಕುಲಪತಿ ಅರ್ಜುನ್ ಒಡೆಯರ್, ರಿಜಿಸ್ಟ್ರಾರ್ (ಮೌಲ್ಯಮಾಪನ) ರಿಯಾಜ್ ಪಾಷಾ, ಹಣಕಾಸು ಅಧಿಕಾರಿ ಗಂಗಾಧರ, ಹರಿಹರ ಶಾಸಕ ಬಿ.ಪಿ.ಹರೀಶ, ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ.ಶುಕ್ಲ ಶೆಟ್ಟಿ, ಎಸ್‌ಎಸ್‌ಐಎಂಎಸ್‌ನ ಪ್ರಾಚಾರ್ಯ ಡಾ.ಪ್ರಸಾದ್, ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಪ್ರಾಚಾರ್ಯ ಡಾ.ಅಲಿ, ಬಿಡಿಸಿಎಚ್ ಪ್ರಾಚಾರ್ಯ ಡಾ.ಅಶೋಕ, ಡಾ.ರವೀಂದ್ರ ಬಣಕಾರ್, ಡಾ. ಎಲ್.ಡಿ.ಶ್ರೀನಿವಾಸ, ಡಾ.ಪ್ರಸನ್ನ ಅಣಬೇರು, ಡಾ.ಹಿರೇಮಠ, ಡಾ. ಬಿ.ಜಿ. ಸತೀಶ, ಡಾ.ಅಕ್ಬಲ್ ಖಾನ್ ಸೇರಿದಂತೆ ವಿವಿಧ ವೈದ್ಯಕೀಯ, ಆಯುರ್ವೇದ, ದಂತ, ನರ್ಸಿಂಗ್, ಫಾರ್ಮಸಿ, ಇತರೆ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.- - -
(ಬಾಕ್ಸ್) * ಅಂಗಾಂಗ ಹಾನಿಗೆ ಜೀವನಶೈಲಿ ಕಾರಣ: ಉಪ ಕುಲಪತಿ ರಾಜೀವ್ ಗಾಂಧಿ ಆರೋಗ್ಯ ವಿವಿ ಉಪ ಕುಲಪತಿ ಡಾ. ಬಿ.ಸಿ. ಭಗವಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯಡಿ 1500 ಇನ್‌ಸ್ಟಿಟ್ಯೂಷನ್ಸ್, 4 ಲಕ್ಷ ವಿದ್ಯಾರ್ಥಿಗಳು, 40 ಸಾವಿರ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಪರ, ಶಿಕ್ಷಕರ ಪರವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ದೇಶದಲ್ಲಿ 16 ಸಾವಿರ ಅಂಗಾಂಗ ದಾನ ಕಾರ್ಯ ಪ್ರತಿವರ್ಷ ನಡೆಯುತ್ತಿದೆ. ಜೀವನಶೈಲಿ, ಕೆಲಸದ ಒತ್ತಡ, ದುಶ್ಚಟಗಳು, ಪರಿಸರದ ವ್ಯತ್ಯಾಸದಿಂದ ಅಂಗಾಂಗಗಳು ಹಾನಿಯಾಗುತ್ತಿವೆ. ಯುವಜನತೆಯಲ್ಲಿ ಹೃದಯಾಘಾತ, ಮೆದುಳು ಆಘಾತ ಸೇರಿದಂತೆ ಹಲವಾರು ಒತ್ತಡಗಳಿಂದ ಅಂಗಾಂಗಳು ಹಾಳಾಗುತ್ತಿವೆ. ಈ ಹಿನ್ನೆಲೆ ಅರಿವು ಮುಡಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.- - -
-6ಕೆಡಿವಿಜಿ31: ದಾವಣಗೆರೆಯಲ್ಲಿ ನಡೆದ ವಾಕಥಾನ್‌ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು. ಡಿಸಿ, ಎಸ್‌ಪಿ, ಸಿಇಒ ಇತರರು ಇದ್ದರು. -6ಕೆಡಿವಿಜಿ32.ಜೆಪಿಜಿ: ದಾವಣಗೆರೆಯಲ್ಲಿ ನಡೆದ ವಾಕಥಾನ್‌ನಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಡಿಸಿ ಜಿ.ಎಂ. ಗಂಗಾಧರ ಸ್ವಾಮಿ, ಎಸ್‌ಪಿ ಉಮಾ ಪ್ರಶಾಂತ್, ಸಿಇಓ ಗಿತ್ತೆ ಮಾಧವ ವಿಠಲ ರಾವ್ ಇತರರು ಭಾಗವಹಿಸಿದ್ದರು.