ತಾತಯ್ಯ ರಚಿಸಿದ ಕಾಲಜ್ಞಾನ ಎಂದೆಂದಿಗೂ ಅಜಾರಾಮರ

| Published : Mar 15 2025, 01:00 AM IST

ಸಾರಾಂಶ

ತಾತಯ್ಯನವರು ಮೂಲತಃ ಬಳೆ ವ್ಯಾಪರ ಮಾಡುವ ವ್ಯಾಪಾರಿ ಇವರು ಬಹಳ ಮೃದು ಸ್ವಬಾವದರು ಆಗಿದ್ದರು, ವ್ಯಾಪಾರದಲ್ಲಿ ಕಠಿಣವಾಗಿ ವರ್ತನೆ ಮಾಡಿ ಎಲ್ಲರಿಗೂ ಸಾಲ ನೀಡಿದರು ಅದು ನಷ್ಟ ಆಗಿ ಅವರು ಮನೆಯಲ್ಲಿ ನಿಂದೆನೆಗೆ ಒಳಗಾದವರು ಕೊನೆಗೆ ಅವರು ಸನ್ಯಾಸತ್ವಸ ಸ್ವೀಕರಿಸ ಸಂಸಾರ ಒಂದು ಕಷ್ಟದ ದಾರಿ ಎಂದು ಸಾರಿದರು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಕೈವಾರ ತಾತಯ್ಯನವರ ಬರೆದಿರುವ ಕಾಲಜ್ಞಾನದ ಪ್ರಕಾರ ಎಲ್ಲಾ ರೀತಿಯ ಪವಾಡಗಳು ನಡೆಯುತ್ತಿವೆ, ಈ ನಿಟ್ಟಿನಲ್ಲಿ ತಾತಯ್ಯನವರು ದೈವ ಪುರುಷ ಎಂದು ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ತಹಸೀಲ್ದಾರ್ ಮಹೇಶ್ ಪತ್ರಿ ತಿಳಿಸಿದರು.ನಗರದ ಹೊರವಲಯದಲ್ಲಿರುವ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶ್ರೀ ಯತಿಂದ್ರ ಯೋಗಿನಾರಾಯಣ ತಾತಯ್ಯನವರ ಜಯಂತಿಯಲ್ಲಿ ಮಾತನಾಡಿ ಕೈವಾರ ಪುಣ್ಯಕ್ಷೇತ್ರ ನಾಲ್ಕು ಯುಗದಲ್ಲಿ ಖ್ಯಾತಿ ಪಡೆದಿದೆ ಎಂದರು.

ಕಾಲಜ್ಞಾನ ರಚಿಸಿದ ತಾತಯ್ಯ

ರಾಮಯಣದಲ್ಲಿ ರಾಮ ಸೀತೆ ಲಕ್ಷ್ಮಣನ ಬಂದು ಇಲ್ಲಿ ನೆಲಸಿರುವ ಪುರಾವೆ ನಾವು ಕಾಣಬಹುದು, ಹಾಗೆ ಮಹಾಭಾರತದಲ್ಲಿ ಪಾಂಡವರು ಇಲ್ಲಿ ಬಂದು ನೆಲಸಿದ್ದರು. ಇಂತಹ ಕ್ಷೇತ್ರದಲ್ಲಿ ತಾತಯ್ಯನವರು ಜನಿಸಿದ್ದರು. ಇವರು ಮೂಲತಃ ಬಳೆಗಾರ ವ್ಯಾಪಾರ ಮಾಡಿಕೊಂಡಿದ್ದರು, ಸಂಸಾರದಲ್ಲಿ ವಿರಕ್ತಿಗೊಂಡು ಇವರು ಸನ್ಯಾಸ್ತವನ್ನು ಸ್ವೀಕರಿಸಿದರು. ಶ್ರೀಮನ್ನನಾರಾಯಣ ಅವರ ಕೃಪೆಯಿಂದ ಕಾಲಜ್ಞಾನ ಬರೆದರು. ಇವರು ಹೇಳಿರುವಂತೆ ಭಕ್ತಿ ಮಾರ್ಗಗಳ ಮೂಲಕ ಸಾಗಿದರೆ ಜೀವನ ಸಾರ್ಥಕವಾಗಲಿದೆ ಎಂದರು.ಮುಖ್ಯ ಭಾಷಣಕಾರ ವೆಂಕಟೇಶ್ ಮಾತನಾಡಿ ತಾತಯ್ಯನವರು ಮೂಲತಃ ಬಳೆ ವ್ಯಾಪರ ಮಾಡುವ ವ್ಯಾಪಾರಿ ಇವರು ಬಹಳ ಮೃದು ಸ್ವಬಾವದರು ಆಗಿದ್ದರು, ವ್ಯಾಪಾರದಲ್ಲಿ ಕಠಿಣವಾಗಿ ವರ್ತನೆ ಮಾಡಿ ಎಲ್ಲರಿಗೂ ಸಾಲ ನೀಡಿದರು ಅದು ನಷ್ಟ ಆಗಿ ಅವರು ಮನೆಯಲ್ಲಿ ನಿಂದೆನೆಗೆ ಒಳಗಾದವರು ಕೊನೆಗೆ ಅವರು ಸನ್ಯಾಸತ್ವಸ ಸ್ವೀಕರಿಸ ಸಂಸಾರ ಒಂದು ಕಷ್ಟದ ದಾರಿ ಎಂದು ಸಾರಿದರು.ಕಾರ್ಯಕ್ರಮದಲ್ಲಿ ಸಮುದಾಯದ ಸ್ವಾಮಿಜೀ ಮಾರುತಿ ಸ್ವಾಮಿ, ಮಾಜಿ ಅಧ್ಯಕ್ಷೆ ರೂಪ ಅನಂತರಾಜ್, ಮುಖಂಡರಾದ ಜಿ.ಎಲ್.ಅಶ್ವಥ್ತನಾರಾಯಣ, ನಗರಸಭೆ ಸದಸ್ಯರಾದ ಮಾರ್ಕಟ್ ಮೋಹನ್ , ರಾಜ್ ಕುಮಾರ್, ಪದ್ಮವತಿ ಹಿರಿಯ ಸದಸ್ಯ ವಿ.ರಮೇಶ್, ಅವುಲಪ್ಪ, ಜಿ.ಎ.ಪ್ರದೀಪ್, ಜಗ್ಗಿ, ವೆಂಕಟಾದ್ರಿ, ಅನಿಲ್, ಕೆ ವಿ ಪ್ರಕಾಶ್ ನದಿಗಡ್ಡೆ ಪರಮೇಶ್, ಮಾಳಪ್ಪ ಮುಂತಾದವರು ಹಾಜರಿದ್ದರು.