ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಹಿಪ್ಪರಗಿ ಜಲಾಶಯದ ಗೇಟ್ ನಂ.21 ಮುರಿದ ಕಾರಣ ಜಲಾಶಯದಿಂದ 4 ಟಿಎಂಸಿ ನೀರು ಪೋಲಾಗಿದ್ದರಿಂದ ರಬಕವಿ-ಮಹಿಷವಾಡಗಿ ಸೇತುವೆ ಬಳಿಯಲ್ಲಿ ಈ ಬಾರಿ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾದ ಕಾರಣ ಸೇತುವೆಯ ಪಿಲ್ಲರ್ ನಂ.8 ಹಾಗೂ 7ರ ಕಾಮಗಾರಿ ಪೂರ್ಣಗೊಂಡ ಬಳಿಕ ಬುಧವಾರದಿಂದ ಮಹಾರಾಷ್ಟ್ರದ ರಾಜಾಪೂರ ಜಲಾಶಯದಿಂದ ಕೃಷ್ಣಾ ನದಿ ಪಾತ್ರಕ್ಕೆ ನಿತ್ಯ 4ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಹಿಪ್ಪರಗಿ ಜಲಾಶಯದ ಗೇಟ್ ನಂ.21 ಮುರಿದ ಕಾರಣ ಜಲಾಶಯದಿಂದ 4 ಟಿಎಂಸಿ ನೀರು ಪೋಲಾಗಿದ್ದರಿಂದ ರಬಕವಿ-ಮಹಿಷವಾಡಗಿ ಸೇತುವೆ ಬಳಿಯಲ್ಲಿ ಈ ಬಾರಿ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾದ ಕಾರಣ ಸೇತುವೆಯ ಪಿಲ್ಲರ್ ನಂ.8 ಹಾಗೂ 7ರ ಕಾಮಗಾರಿ ಪೂರ್ಣಗೊಂಡ ಬಳಿಕ ಬುಧವಾರದಿಂದ ಮಹಾರಾಷ್ಟ್ರದ ರಾಜಾಪೂರ ಜಲಾಶಯದಿಂದ ಕೃಷ್ಣಾ ನದಿ ಪಾತ್ರಕ್ಕೆ ನಿತ್ಯ 4ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.ಗುರುವಾರ ರಬಕವಿಯ ಕೃಷ್ಣಾ ನದಿಪಾತ್ರಕ್ಕೆ ನೀರು ತಲುಪಿದೆ. ಹಿಪ್ಪರಗಿ ಜಲಾಶಯದ ಡೆಡ್ ಸ್ಟೋರೇಜ್ ತುಂಬಿಕೊಂಡು ನೀರು ಮುಂದಿನ ಪ್ರದೇಶಗಳಾದ ಚಿಕ್ಕಪಡಸಲಗಿ, ಸಾವಳಗಿ ಮೊದಲಾದ ಪ್ರದೇಶಗಳ ರೈತರ, ಜನ-ಜಾನುವಾರುಗಳ ಬಳಕೆಗೆ ಹರಿಯಬೇಕಿದೆ.
ರಬಕವಿ-ಮಹಿಷವಾಡಗಿ ಸೇತುವೆ ಪಿಲ್ಲರ್ ಕಾಮಗಾರಿಗಳ ಸಂದರ್ಭದಲ್ಲಿ ನದಿಪಾತ್ರಕ್ಕೆ ಮಹಾನೀರು ಹರಿದುಬರುವ ಆತಂಕ ಇಲ್ಲಿನ ಜನತೆಯಲ್ಲಿತ್ತು. ಸುದೈವಶಾತ್ ಪಿಲ್ಲರ್ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಕಾಮಗಾರಿಗೆ ಯಾವುದೇ ಅಡಚಣೆ ಇಲ್ಲದ ಕಾರಣ ಯಾವುದೇ ಸಬೂಬು ನೀಡದೇ ಸೇತುವೆ ಮೇಲ್ಬಾಗದ ಮತ್ತು ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಗುತ್ತಿಗೆದಾರ ಮುಂದಾಗಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.ನೀರಿನ ಬಳಕೆಯಲ್ಲಿ ಜಾಗೃತಿಯಿರಲಿ: ಕೃಷ್ಣಾ ನದಿಗೆ ರಾಜಾಪೂರ ಬ್ಯಾರೇಜ್‌ನಲ್ಲಿ ಸಂಗ್ರಹಿತ ಹಿನ್ನೀರು ಬಂದಿದ್ದು, ಸಾರ್ವಜನಿಕರಲ್ಲಿ ನೀರನ್ನು ಕುದಿಸಿ, ಸೋಸಿ ಆರಿಸಿ ಕುಡಿಯಕೆಂದು ಪೌರಾಯುಕ್ತ ಬೀಳಗಿ, ಹಿರಿಯ ಆರೋಗ್ಯ ನಿರೀಕ್ಷಕಿ ಶೋಭಾ ಹೊಸಮನಿ ತಿಳಿಸಿದ್ದಾರೆ.