ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಗುರುವಾರ ಸಂಜೆ ಆಯೋಜಿಸಿದ ಎಕ್ಸಲೆಂಟ್ ಸಂಗೀತ ಸಂಜೆ ಕಾರ್‍ಯಕ್ರಮದಲ್ಲಿ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾ‌ರ್ ಸನ್ಮಾನ ಸ್ವೀಕರಿಸಿದರು.

ಮೂಡುಬಿದಿರೆ: ಸಂಗೀತವು ಕೇವಲ ಕಲೆಯಲ್ಲ, ಅದು ಮನಸ್ಸನ್ನು ಶುದ್ಧಗೊಳಿಸುವ ಅಪೂರ್ವ ಸಾಧನ ಹಾಗೂ ಹೃದಯದ ಭಾಷೆಯಾಗಿದೆ. ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡುತ್ತಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಇಂತಹ ಸಂಗೀತ ಆರಾಧನೆ ನಡೆಯುತ್ತಿರುವುದು ಕಲೆಯ ಭಾಗ್ಯ " ಎಂದು ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾ‌ರ್ ನುಡಿದರು.

ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಗುರುವಾರ ಸಂಜೆ ಆಯೋಜಿಸಿದ ಎಕ್ಸಲೆಂಟ್ ಸಂಗೀತ ಸಂಜೆ ಕಾರ್‍ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಾಂಸ್ಕೃತಿಕ ಮನಸ್ಸು ಮಾತ್ರ ಒಂದು ಸದೃಢ ಮತ್ತು ಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.

ಸಂಗೀತದಿಂದ ಮಾನಸಿಕ ಶಾಂತಿ, ಆತ್ಮಸ್ಥೆರ್ಯ: ಯುವರಾಜ್ ಜೈನ್ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್‌ ಮಾತನಾಡಿ, ಶಿಕ್ಷಣ ಸಂಸ್ಥೆಯು ಕೇವಲ ಪಠ್ಯಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಯಾಗಬೇಕು. ಪರೀಕ್ಷಾ ಒತ್ತಡ ಮತ್ತು ಸ್ಪರ್ಧಾತ್ಮಕ ವಾತಾವರಣದಲ್ಲಿರುವ ವಿದ್ಯಾರ್ಥಿಗಳಿಗೆ ಸಂಗೀತವು ಮಾನಸಿಕ ಶಾಂತಿ ಹಾಗೂ ಆತ್ಮಸ್ಥೆರ್ಯವನ್ನು ನೀಡುತ್ತದೆ. ಇದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ ಎಂದರು. ಸಹಕಲಾವಿದರಾದ ನರೇಂದ್ರ ನಾಯಕ, ಅಂಕುಶ್ ಎನ್. ನಾಯಕ್, ಕೇಶವ ಜೋಶಿ, ಶ್ರೀಧರ ಪ್ರಭು, ಬಸವರಾಜ್, ಸುಶಾಂತ್ ಸಾಲ್ಯಾನ್, ಹೇಮಂತ್ ಜೋಶಿ, ಧನಶ್ರೀ ಅವರನ್ನು ಗೌರವಿಸಲಾಯಿತು.ಉದ್ಯಮಿ ಶ್ರೀಪತಿ ಭಟ್, ವಾಸ್ತುತಜ್ಞ ರಾಮಚಂದ್ರ ಆಚಾರ್ಯ, ಎಕ್ಸಲೆಂಟ್ ಸಂಸ್ಥೆಯ ಕಾರ್‍ಯದರ್ಶಿ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್, ಸಿಬಿಎಸ್‌ಇ ಪ್ರಾಂಶುಪಾಲ ಶ್ರೀಪ್ರಸಾದ್ ಉಪಸ್ಥಿತರಿದ್ದರು.

ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.