ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಕಿರುಚಿತ್ರಗಳ ಪೈಕಿ ದಿ ಲಾಸ್ಟ್ ಬ್ರೆಥ್ ಚಿತ್ರವು ಪ್ರಥಮ ಸ್ಥಾನ ಗಳಿಸುವ ಮೂಲಕ ತನ್ನ ಸೃಜನಶೀಲತೆಯನ್ನು ಮೆರೆದಿದೆ.
ಸಿದ್ದಾಪುರ: ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸತ್ಯ ಹೆಗಡೆ ಅವರು ಆಯೋಜಿಸಿದ್ದ 26ನೇ ಸಿನಿ ಮಿನಿ ಕನ್ನಡ ಕಿರುಚಿತ್ರೋತ್ಸವದಲ್ಲಿ ಸಿದ್ದಾಪುರದ ವಡ್ಡಿನಗದ್ದೆಯ ಪೂರ್ಣಚಂದ್ರ ಹೆಗಡೆ ಹುಲಿಮನೆ ಕಥೆ ಬರೆದು ನಿರ್ದೇಶಿಸಿದ ದಿ ಲಾಸ್ಟ್ ಬ್ರೆಥ್ ಕಿರುಚಿತ್ರ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ.ಬೆಂಗಳೂರಿನ ಡಾ. ಪುನೀತ್ ರಾಜಕುಮಾರ್ ಆಡಿಟೋರಿಯಂನಲ್ಲಿ ನಡೆದ ಸಿನಿ ಮಿನಿ ಕನ್ನಡ ಕಿರು ಚಿತ್ರೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕಿರುಚಿತ್ರಗಳು ಭಾಗವಹಿಸಿದ್ದು, ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಕಿರುಚಿತ್ರಗಳ ಪೈಕಿ ದಿ ಲಾಸ್ಟ್ ಬ್ರೆಥ್ ಚಿತ್ರವು ಪ್ರಥಮ ಸ್ಥಾನ ಗಳಿಸುವ ಮೂಲಕ ತನ್ನ ಸೃಜನಶೀಲತೆಯನ್ನು ಮೆರೆದಿದೆ. ಯುವ ನಿರ್ದೇಶಕ ಪೂರ್ಣಚಂದ್ರ ಹೆಗಡೆ ಹುಲಿಮನೆ ಅವರ ಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಈ ಗೌರವಕ್ಕೆ ಭಾಜನವಾಗಿದೆ.ಕಾರ್ಯಕ್ರಮದಲ್ಲಿ ಪ್ರೇಮದ ಊರಲಿ ಚಲನಚಿತ್ರದ ನಿರ್ದೇಶಕ ಮನೋಜ್ ಕುಮಾರ್ ಅವರು ದಿ ಲಾಸ್ಟ್ ಬ್ರೆಥ್ ಚಿತ್ರದ ನಿರ್ದೇಶಕ ಪೂರ್ಣಚಂದ್ರ ಹೆಗಡೆ ಹುಲಿಮನೆ ಅವರಿಗೆ ಪ್ರಥಮ ಸ್ಥಾನದ ಪ್ರಶಸ್ತಿ ಪ್ರದಾನ ಮಾಡಿದರು.ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಧ್ರುವ ಸರ್ಜಾ, ನಿರ್ದೇಶಕರಾದ ತರುಣ್ ಸುಧೀರ್, ಶ್ರೀನಿಧಿ ಬೆಂಗಳೂರು, ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದರು.ಪೂರ್ಣಚಂದ್ರ ಹೆಗಡೆ ಪ್ರಸಿದ್ಧ ರಂಗನಿರ್ದೇಶಕ ಗಣಪತಿ ಹೆಗಡೆ ವಡ್ಡಿನಗದ್ದೆ, ರಂಗ ಕಲಾವಿದೆ ಜಯಶ್ರೀ ಹೆಗಡೆಯವರ ಪುತ್ರ.