ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ದಾಸಶ್ರೇಷ್ಠ ಕನಕದಾಸರು ಜೀವನದ ಮೌಲ್ಯಗಳನ್ನು ತಿಳಿಸಿಕೊಡುವ ಜತೆಗೆ ಶ್ರೀಯುತರ ಮೌಲ್ಯಯುತ ಕೃತಿಗಳು ಇಂದಿಗೂ ಉತ್ತಮ ಜೀವನ ರೂಪಿಸಿಕೊಳ್ಳುವ ಹಾಗೂ ಉತ್ತಮ ರಾಷ್ಟ್ರ ನಿರ್ಮಾಣಕ್ಕೂ ಮಾರ್ಗದರ್ಶನ ನೀಡುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಅಭಿಪ್ರಾಯಪಟ್ಟರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ಆಯೋಜನೆ ಮಾಡಿದ್ದ ವಕೀಲರ ದಿನಾಚರಣೆ ಹಾಗೂ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ನೊಬೆಲ್ ವೃತ್ತಿ ಎಂದು ಗುರುತಿಸಿ ಕೊಂಡಿರುವ ವಕೀಲ ವೃತ್ತಿಯೂ ಬಹಳ ಗೌರವಯುತವಾಗಿದೆ. ವಕೀಲ ವೃತ್ತಿಯ ಕಲಿಕೆಯ ಅಭಿರುಚಿಯೂ ಉತ್ತಮವಾಗಿದ್ದು, ಸಮಾಜದಲ್ಲಿ ನಾನಾ ಸ್ತರದಲ್ಲಿ ಜೀವನ ರೂಪಿಸಿಕೊಳ್ಳಲು ಉತ್ತಮ ವೃತ್ತಿಯಾಗಿದೆ ಎಂದು ತಿಳಿಸಿ, ವಕೀಲರಿಗೆ ವಕೀಲರ ದಿನಾಚರಣೆಯ ಶುಭಾಶಯ ಕೋರಿದರು.ಲೇಖಕರು ಹಾಗೂ ಶಿಕ್ಷಕರಾದ ಎಂ.ಜಿ.ಪರಮೇಶ್ ಮಡಬಲು ಮುಖ್ಯ ಭಾಷಣಕಾರರಾಗಿ ಆಗಮಿಸಿ ಕನಕದಾಸರ ನಾಲ್ಕು ಕೃತಿಗಳು ಹಾಗೂ ಕನಕದಾಸರ ಜೀವನ ಚರಿತ್ರೆ ಕುರಿತು ಸುದೀರ್ಘವಾಗಿ ಮಾತನಾಡಿ, ಕೆಲವು ಕೀರ್ತನೆಗಳನ್ನು ಹಾಡಿದರು. ವಕೀಲರಾದ ಲಾವಣ್ಯ ಪ್ರಾರ್ಥಿಸಿದರು, ರಾಜಶೇಖರ್ ಸ್ವಾಗತಿಸಿದರು ಹಾಗೂ ಶ್ವೇತ ನಿರೂಪಿಸಿದರು.ಸಿವಿಲ್ ನ್ಯಾಯಾಧೀಶರಾದ ಚೇತನಾ, ಸಹಾಯಕ ಸರ್ಕಾರಿ ಅಭಿಯೋಜಕರಾದ ಶಿವಕುಮಾರ್ ಹಾಗೂ ಶಿರೀನ್, ತಾ. ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ಉಪಾಧ್ಯಕ್ಷ ಸಿ.ಎಂ.ಅಶೋಕ್, ಕಾರ್ಯದರ್ಶಿ ಯು.ಆರ್.ಸತೀಶ್, ಜಂಟಿ ಕಾರ್ಯದರ್ಶಿ ಮೈತ್ರಿ ಕೆ.ಎನ್., ಖಜಾಂಚಿ ಕೆ.ಎಸ್.ಪ್ರಕಾಶ್, ಹಿರಿಯ ಸದಸ್ಯರಾದ ಬಾಷ್ಯಂ, ರಾಮಪ್ರಸನ್ನ, ಪುರುಷೋತಮ್, ರವೀಶ್, ಅರುಣ್ ಕುಮಾರ್, ಹರೀಶ್, ಎ.ಶ್ರೀಧರ್, ಕೆ.ಆರ್.ಸುನೀಲ್, ಜಯಪ್ರಕಾಶ್, ಸುನೀಲ್, ಶಿವಕುಮಾರ್, ಮಂಜುನಾಥ್, ನವೀನ್, ಶಿವಣ್ಣ, ಶಶಿಕುಮಾರ್, ಇತರರು ಇದ್ದರು.