ಗಂಗಾಮತಸ್ಥರ ಪರಂಪರೆ ಮುಂದಿನ ಪೀಳಿಗೆಗೆ ತಿಳಿಸಬೇಕು

| Published : Jul 01 2024, 01:45 AM IST

ಗಂಗಾಮತಸ್ಥರ ಪರಂಪರೆ ಮುಂದಿನ ಪೀಳಿಗೆಗೆ ತಿಳಿಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಗಂಗಾಮತಸ್ಥ ಸಮಾಜ ಸಂಘಟಿತವಾಗಬೇಕು. ಸಮಾಜದ ತಾಯಂದಿರು ಸಮಾಜದ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಕಾರ್ಯ ಪ್ರವೃತ್ತರಾಗಬೇಕು ಎಂದು ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧಿಪತಿ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ದಾವಣಗೆರೆಯಲ್ಲಿ ನುಡಿದರು.

- ಶ್ರೀ ಗಂಗಾಪರಮೇಶ್ವರಿ ಜಯಂತ್ಯುತ್ಸವಲ್ಲಿ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀ ಸಲಹೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಗಂಗಾಮತಸ್ಥ ಸಮಾಜ ಸಂಘಟಿತವಾಗಬೇಕು. ಸಮಾಜದ ತಾಯಂದಿರು ಸಮಾಜದ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಕಾರ್ಯ ಪ್ರವೃತ್ತರಾಗಬೇಕು ಎಂದು ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧಿಪತಿ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ನುಡಿದರು.

ಜಿಲ್ಲಾ ಗಂಗಾಮತಸ್ಥರ ಸಂಘ ಮತ್ತು ಶ್ರೀ ಗಂಗಾಪರಮೇಶ್ವರಿ ಜಯಂತ್ಯುತ್ಸವ ಸಮಿತಿ ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನ ಸಮೀಪದ ನಿಮಿಷಾಂಬ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರೀ ಗಂಗಾಪರಮೇಶ್ವರಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಮ್ಮ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಸಮಾಜದ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಸಂತೋಷದಾಯಕ ವಿಷಯ. ಇದೇ ರೀತಿ ಗಂಗಾಮತಸ್ಥ ಸಮಾಜ ಸಂಘಟಿತವಾಗುವ ನಿಟ್ಟಿನಲ್ಲಿ ಸಾಗಬೇಕು ಎಂದರು.

ಹಾವೇರಿ ಜಿಲ್ಲೆಯ ನರಸೀಪುರದ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ಮೂಲೆ ಮೂಲೆಯಲ್ಲಿರುವ ಸಮಾಜದ ಬಾಂಧವರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಗುರುಪೀಠದಲ್ಲಿ ಅಂಬಿಗರ ಚೌಡಯ್ಯ ಜಯಂತಿ, ರಥೋತ್ಸವ, ಸಾಂಸ್ಕೃತಿಕ ಉತ್ಸವದಂತಹ ಕಾರ್ಯಕ್ರಮಗಳನ್ನ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಲ್ಲಿ ಸಮಾಜದ ಬಾಂಧವರು ಪಾಲ್ಗೊಂಡು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕು ಎಂದು ತಿಳಿಸಿದರು.

ಸಮಾಜದ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ ಮಾತನಾಡಿ, ಸಮಾಜದಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸಮಾಜದ ಬಾಂಧವರು ಪಾಲ್ಗೊಳ್ಳಬೇಕು. ಹೀಗೆ ಪಾಲ್ಗೊಳ್ಳುವುದರಿಂದ ಕಾರ್ಯಕ್ರಮಗಳು ಯಶಸ್ವಿಯಾಗಲಿದ್ದು, ಕಾರ್ಯಕ್ರಮಗಳನ್ನು ಮಾಡಿದ್ದು ಅರ್ಥ ಬರಲಿದೆ. ಸಮಾಜದ ಸಂಘದಿಂದ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿವೆ. ಸಮಾಜದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸಮಾಜದ ಬಡಮಕ್ಕಳಿಗೆ ಸಹಾಯ ಮಾಡಲಾಗುತ್ತಿದೆ. ಇವೆಲ್ಲದರ ಬಗ್ಗೆ ಸಮಾಜದ ಬಾಂಧವರು ತಿಳಿದುಕೊಂಡು ಪ್ರೋತ್ಸಾಹಿಸಿದಾಗ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸಗಳನ್ನು ಮಾಡಲು ಉತ್ಸಾಹ ಬರಲಿದೆ ಎಂದರು.

ಪೂರ್ಣಕುಂಭ ಮೆರವಣಿಗೆ:

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗಂಗಾಪರಮೇಶ್ವರಿ ಜಯಂತ್ಯುತ್ಸವ ಪ್ರಯುಕ್ತ 108 ಪೂರ್ಣ ಕುಂಭಗಳು, ಕಲಾ ತಂಡಗಳು, ವಾದ್ಯಮೇಳಗಳ ಮೂಲಕ ಗಂಗಾಪರಮೇಶ್ವರಿ ಮೂರ್ತಿ ಮೆರವಣಿಗೆ ನಡೆಯಿತು. ಶಿವಾಜಿ ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನ ಪಕ್ಕದ ಪಾದಗಟ್ಟೆಯಿಂದ ಪ್ರಾರಂಭವಾದ ಶ್ರೀ ಗಂಗಾಪರಮೇಶ್ವರಿ ಮೂರ್ತಿ ಮೆರವಣಿಗೆ ಕನ್ನಿಕಾ ಪರಮೇಶ್ವರಿ ದೇವಸ್ಥಾನ ರಸ್ತೆ, ದೊಡ್ಡ ಪೇಟೆ ರಸ್ತೆ, ಹೊಂಡದ ಸರ್ಕಲ್ ಮುಖಾಂತರ ನಿಮಿಷಾಂಬ ಕಲ್ಯಾಣ ಮಂಟಪವನ್ನು ತಲುಪಿತು.

ಸಮಿತಿ ಉಪಾಧ್ಯಕ್ಷ ಪುಟಗನಾಳ್ ಮಂಜುನಾಥ, ಪಾಲಿಕೆ ಸದಸ್ಯ ಅಜಯ ಕುಮಾರ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಟಿ.ಮಂಜುನಾಥ್, ಕಾರ್ಯದರ್ಶಿ ಉಮೇಶ್ (ವಕೀಲ), ಸಮಿತಿ ಅಧ್ಯಕ್ಷ ಲಿಂಗರಾಜ, ರವಿ ಕುಮಾರ, ಅಶೋಕ ಕೋಲ್ಕುಂಟೆ, ಬಾತಿ ಕೆಂಚಪ್ಪ, ಚಂದ್ರಪ್ಪ, ವಾಗೀಶ್, ಗಣೇಶ್, ಗಂಗಪ್ಪ, ಕೆಂಚನಹಳ್ಳಿ ಮಹಾಂತಪ್ಪ, ಕೆಂಚನಹಳ್ಳಿ ಮಹಾಂತಪ್ಪ ಯೋಗರಾಜ ಇತರರು ಇದ್ದರು.

- - - -28ಕೆಡಿವಿಜಿ32, 33ಃ:

ಶ್ರೀ ಗಂಗಾಪರಮೇಶ್ವರಿ ಜಯಂತ್ಯುತ್ಸವ ಅಂಗವಾಗಿ ದಾವಣಗೆರೆ ನಗರದಲ್ಲಿ ಜಿಲ್ಲಾ ಗಂಗಾಮತಸ್ಥರ ಸಂಘ ಮತ್ತು ಶ್ರೀ ಗಂಗಾಪರಮೇಶ್ವರಿ ಜಯಂತ್ಯುತ್ಸವ ಸಮಿತಿ ವತಿಯಿಂದ ಪೂರ್ಣಕುಂಭ ಮೆರವಣಿಗೆ ನಡೆಯಿತು.