ಸಾರಾಂಶ
ಸರ್ಕಾರದ ಅಭಿವೃದ್ಧಿ ಕೆಲಸಗಳು ಹಾಗೂ ಗ್ಯಾರಂಟಿ ಯೋಜನೆ ಗಳು ಹಾಗೂ ಸಿಎಂ ಡಿಸಿಎಂ ಜೋಡಿಗಳು ಒಂದಾಗಿ ಮಾಡಿದ ತಂತ್ರಗಾರಿಕೆಯಲ್ಲಿ ಈ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಪಡೆದಿರುವುದಕ್ಕೆ ಸಂತೋಷವಾಗಿದೆ ಎಂದು ಗ್ರಾನೈಟ್ ಎಚ್.ಎಸ್. ರಾಜಶೇಖರ್ ಹೇಳಿದರು.
ಹಳೇಬೀಡು: ಕರ್ನಾಟಕ ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ನೋಡಿದರೆ ಮುಂದೆ ಬರುವ ಎಲ್ಲಾ ಚುನಾವಣೆಗಳಿಗೆ ರಾಜ್ಯದ ಕಾಂಗ್ರೆಸ್ ಭದ್ರಕೋಟೆ ಆಗಿದೆ ಎಂದು ಗ್ರಾನೈಟ್ ಎಚ್.ಎಸ್. ರಾಜಶೇಖರ್ ತಿಳಿಸಿದರು.
ಹಳೇಬೀಡಿನ ಹೊಯ್ಸಳೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರದೊಂದಿಗೆ ಪಟಾಕಿ ಹೊಡೆಯುವ ಮೂಲಕ ಸಿಹಿ ಹಂಚಿ ಮಾತನಾಡಿದರು. ಸರ್ಕಾರದ ಅಭಿವೃದ್ಧಿ ಕೆಲಸಗಳು ಹಾಗೂ ಗ್ಯಾರಂಟಿ ಯೋಜನೆ ಗಳು ಹಾಗೂ ಸಿಎಂ ಡಿಸಿಎಂ ಜೋಡಿಗಳು ಒಂದಾಗಿ ಮಾಡಿದ ತಂತ್ರಗಾರಿಕೆಯಲ್ಲಿ ಈ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಪಡೆದಿರುವುದಕ್ಕೆ ಸಂತೋಷವಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಕಾರ್ಯಕರ್ತರಾದ ಅಪ್ಪಿಹಳ್ಳಿ ವಿರೂಪಾಕ್ಷ ಮಾತನಾಡುತ್ತಾ, ಮೈತ್ರಿಕೂಟದ ಕನಸು ಮೂಲಗುಂಪಾಗಿದೆ. ಜೆಡಿಎಸ್, ಬಿಜೆಪಿ ಮೈತ್ರಿಕೂಟದು ಸುಳ್ಳಿನ ಸುರಿ ಮಳೆ ನಡೆಯಲಿಲ್ಲ ಹಾಗೂ ಸಿದ್ದರಾಮಯ್ಯ ಅವರ ವೈಯಕ್ತಿಕ ಬಗ್ಗೆ ಅಪಪ್ರಚಾರ ಮಾಡಿದ್ದರೂ ಜನರು ನಂಬಲಿಲ್ಲ, ಅವರ ಆಪರೇಷನ್ ಕಮಲದ ಯೋಜನೆಗೆ ಜನರು ತಕ್ಕ ಪಾಠವನ್ನು ಕಲಿಸಿ ಅದರ ಜೊತೆಗೆ ಕರ್ನಾಟಕದ ಮಾಜಿ ಮುಖ್ಯಮುಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಪುತ್ರ, ಎಚ್.ಡಿ ಕುಮಾರಸ್ವಾಮಿ ಪುತ್ರ ನಿಜವಾಗಲೂ ಹೀನಾಯವಾಗಿ ಸೋತಿದ್ದಾರೆ. ಇದು ನೋಡಿದರೆ ಕರ್ನಾಟಕದ ರಾಜ್ಯದ ಜನತೆ ಕಾಂಗ್ರೆಸ್ಸನ್ನು ಕೈ ಹಿಡಿದಿರುವುದು ಸಂಭ್ರಮ ಹಾಗೂ ಸಂತೋಷವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಳೇಬೀಡಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು ಹಾಗೂ ಪಕ್ಷದ ಕಾರ್ಯಕರ್ತರಾದ ದರ್ಶನ್, ಕುಮಾರಸ್ವಾಮಿ, ರಮೇಶ್, ಪೃಥ್ವಿ, ಭೈರೇಗೌಡ, ದರ್ಶನ್ ಪಾಟೇಲ್ ಹಾಗೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.