ಸೇವೆ ಸಲ್ಲಿಸುವಲ್ಲಿ ಲಯನ್ಸ್ ಕ್ಲಬ್‌ಗೆ ಅಗ್ರಗಣ್ಯ ಸ್ಥಾನ

| Published : Jan 12 2025, 01:16 AM IST

ಸೇವೆ ಸಲ್ಲಿಸುವಲ್ಲಿ ಲಯನ್ಸ್ ಕ್ಲಬ್‌ಗೆ ಅಗ್ರಗಣ್ಯ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಈ ಭೂಮಿ ಮೇಲೆ ಬಹಳಷ್ಟು ಸಂಘಸಂಸ್ಥೆಗಳಿವೆ. ಆದರೆ ಶಿಸ್ತಿನ, ಸುಸಂಸ್ಕೃತಿಯಿಂದ ಇಡೀ ಸಮುದಾಯಕ್ಕೆ ಸೇವೆಯನ್ನು ಸಲ್ಲಿಸುವಲ್ಲಿ ಲಯನ್ಸ್ ಕ್ಲಬ್ ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ಅರಕಲಗೂಡಿನ ವಿಶ್ವ ಬ್ರಹ್ಮ ಮಹಾಸಂಸ್ಥಾನ ಅರೆಮಾದನಹಳ್ಳಿ ಮಠದ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ತಿಳಿಸಿದರು. ಇಡೀ ಪ್ರಕೃತಿಯೇ ಪರೋಪಕಾರಕ್ಕಾಗಿ ಇದೆ, ಹರಿಯುತ್ತಿರುವ ನದಿ, ಫಲ ಕೊಡುತ್ತಿರುವ ವೃಕ್ಷ, ಹಾಲನ್ನು ಕೊಡುವ ಹಸು ಇವೆಲ್ಲಾವನ್ನು ತೋರಿಸಿ ಹೇಳುವಾಗ ಕೂಡ ಪರೋಪಕಾರಕ್ಕಾಗಿಯೇ ಇರುವುದು ಎನ್ನುವ ಮಾತನ್ನು ವಾಲ್ಮೀಕಿ ಮಹರ್ಷಿಯು ಅಂದಿನ ಕಾಲದಲ್ಲಿಯೇ ಲವಕುಶರಿಗೆ ಹೇಳಿದ ಮಾತು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಈ ಭೂಮಿ ಮೇಲೆ ಬಹಳಷ್ಟು ಸಂಘಸಂಸ್ಥೆಗಳಿವೆ. ಆದರೆ ಶಿಸ್ತಿನ, ಸುಸಂಸ್ಕೃತಿಯಿಂದ ಇಡೀ ಸಮುದಾಯಕ್ಕೆ ಸೇವೆಯನ್ನು ಸಲ್ಲಿಸುವಲ್ಲಿ ಲಯನ್ಸ್ ಕ್ಲಬ್ ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ಅರಕಲಗೂಡಿನ ವಿಶ್ವ ಬ್ರಹ್ಮ ಮಹಾಸಂಸ್ಥಾನ ಅರೆಮಾದನಹಳ್ಳಿ ಮಠದ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ತಿಳಿಸಿದರು.

ನಗರದ ಚನ್ನಪಟ್ಟಣದಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಲಯನ್ಸ್ ಮತ್ತು ಲಿಯೋ ಕ್ಲಬ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಾದೇಶಿಕ ಸಮ್ಮೇಳನದ ಪೂಜಾ ಹೆಸರಿನ ಕಾರ್ಯಕ್ರಮವನ್ನು ಲಯನ್ಸ್ ಪ್ರಾದೇಶಿಕ ಛೇರ್ ಪರ‍್ಸನ್ ಕೆ.ಜೆ. ನಾಗರಾಜು, ಪತ್ನಿ ಎಂ.ಟಿ. ನೀಲಾವತಿ ಉದ್ಘಾಟಿಸಿದರು. ಇದೇ ವೇಳೆ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಸ್ವಾಮೀಜಿ ಅವರು, ಸೇವೆ ಸಲ್ಲಿಸುವಾಗ ಎಲ್ಲಾ ರೀತಿಯ ಸೇವೆ ಮಾಡಬೇಕು ಎಂಬುದು ಲಯನ್ಸ್ ಕ್ಲಬ್‌ನ ಉದ್ದೇಶವಾಗಿದೆ. ಮನುಷ್ಯನ ಜೀವನವು ಪರೋಪಕಾರಕ್ಕಾಗಿಯೇ ಇದೆ ಎಂಬುದು ನಮ್ಮ ಹಿರಿಯರು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಪರೋಪಕಾರ ಮಾಡದಿದ್ದರೇ ನಮ್ಮ ಜೀವನ ಸಾರ್ಥಕತೆ ಆಗುವುದಿಲ್ಲ. ಇಡೀ ಪ್ರಕೃತಿಯೇ ಪರೋಪಕಾರಕ್ಕಾಗಿ ಇದೆ, ಹರಿಯುತ್ತಿರುವ ನದಿ, ಫಲ ಕೊಡುತ್ತಿರುವ ವೃಕ್ಷ, ಹಾಲನ್ನು ಕೊಡುವ ಹಸು ಇವೆಲ್ಲಾವನ್ನು ತೋರಿಸಿ ಹೇಳುವಾಗ ಕೂಡ ಪರೋಪಕಾರಕ್ಕಾಗಿಯೇ ಇರುವುದು ಎನ್ನುವ ಮಾತನ್ನು ವಾಲ್ಮೀಕಿ ಮಹರ್ಷಿಯು ಅಂದಿನ ಕಾಲದಲ್ಲಿಯೇ ಲವಕುಶರಿಗೆ ಹೇಳಿದ ಮಾತು ಎಂದರು.

ಪರೋಪಕಾರ ನಮ್ಮೆಲ್ಲರ ಕರ್ತವ್ಯ ಎಂಬುದನ್ನು ನಮ್ಮ ಹಿರಿಯರು ತೋರಿಸಿಕೊಟ್ಟಿದ್ದು, ಅದನ್ನೇ ನಾವು ಮುಂದುವರಿಸಿಕೊಂಡು ಬರುತ್ತಿದೆ. ಇಡೀ ಜಗತ್ತಿನಲ್ಲೆಯೇ ಈ ಲಯನ್ಸ್ ಸೇವೆ ಕಾಯಕದಲ್ಲಿ ತೊಡಗಿದೆ. ಲಯನ್ಸ್ ಎಂದರೇ ಸಿಂಹ ಒಕ್ಕೂಟ ಅನಿಸುತ್ತದೆ. ಸಿಂಹ ಹೇಗೆ ಅರಣ್ಯದಲ್ಲಿ ಅಗ್ರಸ್ಥಾನ ಹೊಂದಿರುತ್ತದೆ, ಅದರಂತೆ ಜಗತ್ತಿನಲ್ಲಿ ಪರೋಪಕಾರ ಮಾಡುವ ನಿಟ್ಟಿನಲ್ಲಿ ಅಂತ ಅಗ್ರ ಸ್ಥಾನ ಈ ಲಯನ್ಸ್ ಸೇವಾ ಸಂಸ್ಥೆಗೆ ಇದೆ ಎನ್ನುವುದಕ್ಕೆ ಸಂತೋಷವಾಗುತ್ತದೆ ಎಂದು ಹೇಳಿದರು.

ಮೈಸೂರಿನ ರಾಮಕೃಷ್ಣ ವಿದ್ಯಾ ಶಾಲಾ ನಿವೃತ್ತ ಕನ್ನಡ ಉಪನ್ಯಾಸಕ ಎಸ್.ಎಸ್. ರಮೇಶ್ ಮಾತನಾಡಿ, ಲಯನ್ಸ್ ಎಂದರೇ ನಿಶ್ವಾರ್ಥ ಗುರು ಸಂಸ್ಕಾರಯುತ ನಡಿಗೆ ಸಮಾಜದಲ್ಲಿ ಉತ್ತಮ ಪರಿಣಾಮ ಬೀರಲಿದೆ. ಅರ್ಥಪೂರ್ಣ ಜೀವನ ಮತ್ತು ಸಾರ್ಥಕ ಜೀವನ ನಡೆಸುತ್ತಿದ್ದು, ಸೇವೆ ಮಾಡುವುದಕ್ಕೆ ಇನ್ನಷ್ಟು ಶಕ್ತಿ ಕೊಡಲಿ ಎಂದು ಶುಭ ಹಾರೈಸುತ್ತೇನೆ ಎಂದರು. ಯಾರನ್ನು ಕೇವಲವಾಗಿ ಕಾಣಬಾರದು. ನನ್ನ ಉದ್ಧಾರ ಮತ್ತು ನನ್ನ ಅವನತಿಗೆ ಶೇಕಡ ನೂರರಷ್ಟು ಅವನೇ ಕಾರಣನಾಗಿರುತ್ತಾನೆ ಎಂದು ಶ್ರೀ ಕೃಷ್ಣ ಹೇಳಿರುವುದು. ನನ್ನ ಸೋಲಿಗೆ ಇನ್ನೊಬ್ಬರ ಮೇಲೆ ಕೈ ತೋರಿಸುತ್ತೇವೆ. ನನ್ನ ಉದ್ಧಾರ, ನನ್ನ ನಾಶಕ್ಕೆ ನಾವೇ ಕಾರಣರಾಗುತ್ತೇವೆ ಎಂದು ಹೇಳಿದರು.

ಇದೇ ವೇಳೆ ಲಯನ್ಸ್ ಗೌರ‍್ನರ್ ಬಿ.ಎಂ. ಭಾರತೀ, ಛೇರ್ ಪರ‍್ಸನ್ ಕೆ.ಜೆ. ನಾಗರಾಜು, ಪತ್ನಿ ಎಂ.ಟಿ. ನೀಲಾವತಿ, ಸಮ್ಮೇಳಾನಧ್ಯಕ್ಷ ಬಿ.ಈ. ನಟೇಶ್ ಕುಮಾರ್, ಕಾರ್ಯದರ್ಶಿ ಎಚ್.ಕೆ. ನಾಗೇಶ್, ಖಜಾಂಚಿ ಎಚ್.ಸಿ. ಕುಮಾರ್, ಪ್ರಾಂತೀಯ ರಾಯಭಾರಿ ವಿಶಾಲಾಕ್ಷಿ, ವಲಯಾಧ್ಯಕ್ಷೆ ರೂಪ ಆನಂದ್, ಎಚ್.ಎಸ್. ಶಿವಸ್ವಾಮಿ, ಸೈಯದ್ ನಹೀದ್, ಕೆ.ಸಿ. ಅಕ್ಷಯ್, ಕೆ.ಎಸ್. ಲಕ್ಷ್ಮೀಶ್, ಅರವಿಂದ್ ಶಣೈ, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಐ.ಜಿ. ರಮೇಶ್, ಕಾರ್ಯದರ್ಶಿ ಬಿ.ಎಂ. ರವಿಕುಮಾರ್‌, ಖಜಾಂಚಿ ಸಿ.ಬಿ. ನಾಗರಾಜು, ಲಿಯೋ ಅಧ್ಯಕ್ಷೆ ಬಿ.ಎಲ್. ಸುವರ್ಚಲ, ಕೆ.ಆರ್‌. ಮಮತೇಶ್, ಮಾಜಿ ಗೌರ‍್ನರ್ ಮಂಜುನಾಥ್, ಬಿ.ವಿ. ಹೆಗಡೆ, ಕೆ.ಆರ್‌. ಮಲ್ಲೇಶ್ ಗೌಡ (ದೇವರು), ಎಸ್.ಕೆ. ಸತ್ಯನಾರಾಯಣ್, ಎಚ್.ಆರ್. ಚಂದ್ರೇಗೌಡ, ಮಾಲತಿ ಹೆಗಡೆ, ಸಿ. ಶಿವಸ್ವಾಮಿ, ಬಿ.ವಿ. ಲೋಕೇಶ್, ಪ್ರಕಾಶ್ ಎಸ್. ಯಾಜಿ, ತಿಮ್ಮರಾಯಶೆಟ್ಟಿ, ಬೋರಣ್ಣಗೌಡ, ಇತರರು ಉಪಸ್ಥಿತರಿದ್ದರು.