ದಿ.ಎಂ.ಸಿ.ಮನಗೂಳಿ ಪುಣ್ಮ ಸ್ಮರಣೆ: ನಾಡಿದ್ದು ಬೃಹತ್‌ ಆರೋಗ್ಯ ಉಚಿತ ತಪಾಷಣೆ ಶಿಬಿರ

| Published : Jan 19 2024, 01:51 AM IST

ದಿ.ಎಂ.ಸಿ.ಮನಗೂಳಿ ಪುಣ್ಮ ಸ್ಮರಣೆ: ನಾಡಿದ್ದು ಬೃಹತ್‌ ಆರೋಗ್ಯ ಉಚಿತ ತಪಾಷಣೆ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರ 3ನೇ ಪುಣ್ಯ ಸ್ಮರಣೆಯ ನಿಮಿತ್ತ ಪಟ್ಟಣದ ಮನಗೂಳಿ ಆಸ್ಪತ್ರೆಯಲ್ಲಿ ಬೃಹತ್‌ ಆರೋಗ್ಯ ಉಚಿತ ತಪಾಷಣೆ ಶಿಬಿರವನ್ನು ಜ.21 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮನಗೂಳಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ಮನಗೂಳಿ ಆಸ್ಪತ್ರೆಯ ಡಾ.ಶಾಂತವೀರ ಮನಗೂಳಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಿಂದಗಿ

ದಿ.ಎಂ.ಸಿ.ಮನಗೂಳಿ ಅವರ ಸ್ಮರಣೆಗಾಗಿ ಶಾಸಕ ಅಶೋಕ ಮನಗೂಳಿ ನೇತೃತ್ವದಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಶಿಬಿರದಲ್ಲಿ ತಜ್ಞ ವೈದ್ಯರು ಆಗಮಿಸುವರು. ಹೃದಯ ಸಂಬಂಧಿಸಿದ ಕಾಯಿಲೆ, ನರರೋಗ, ಕ್ಯಾನ್ಸರ್, ಸ್ತ್ರೀರೋಗ, ಮೂತ್ರಪಿಂಡದಲ್ಲಿ ಕಲ್ಲು, ಚರ್ಮರೋಗ, ಇಸಿಜಿ, ರಕ್ತ ತಪಾಷಣೆ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ರೋಗಗಳ ತಪಾಷಣಾ ಕಾರ್ಯ ನಡೆಯುವುದು. ಶಿಬಿರದಲ್ಲಿ ಡಾ.ಶಾಂತವೀರ ಮನಗೂಳಿ, ಡಾ.ಸಂಧ್ಯಾ ಮನಗೂಳಿ, ಡಾ.ಕುಶಾಲ ತಾರಾಪುರ, ಡಾ.ವಿಜಯಲಕ್ಷ್ಮೀ ತಾರಾಪುರ, ಡಾ.ಮಲ್ಲಪ್ಪ ಹುಗ್ಗಿ, ಡಾ.ಗೌತಮ ವಗ್ಗರ, ಡಾ.ಸುನೀಲ ಸಜ್ಜನ, ಡಾ.ಸೌಮ್ಯಾ ಮನಗೂಳಿ ಸೇರಿದಂತೆ ಅನೇಕ ನುರಿತ ವೈದ್ಯರು ಭಾಗವಹಿಸುವರು. ಶಿಬಿರದಲ್ಲಿ ಪಾಲ್ಗೊಳ್ಳುವರು ಕೂಡಲೇ ಹೆಸರನ್ನು ನೋಂದಾಯಿಸಬೇಕು. ಮೊ.9141163387, 9740673613, 6366676400 ಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.