ಸಾರಾಂಶ
- ಸುಜ್ಞಾನನಿಧಿ ಶಿಷ್ಯವೇತನ ವಿತರಿಸಿ ನಿರ್ದೇಶಕ ಲಕ್ಷ್ಮಣ್ - - - ಮಲೇಬೆನ್ನೂರು: ಬಡವರ ಬದುಕು ಪರಿವರ್ತನೆ ಹಾಗೂ ಸಮಗ್ರ ಅಭಿವೃದ್ಧಿಯೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಉದ್ದೇಶವಾಗಿದೆ ಎಂದು ಯೋಜನೆ ನಿರ್ದೇಶಕ ಲಕ್ಷ್ಮಣ್ ಹೇಳಿದರು.
ಇಲ್ಲಿಗೆ ಸಮೀಪದ ಕೊಮಾರನಹಳ್ಳಿ ಸಮುದಾಯ ಭವನದಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸುಜ್ಞಾನನಿಧಿ ಶಿಷ್ಯವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ನಾಗರೀಕರಿಗೆ ಉಳಿತಾಯ, ಸರ್ಕಾರದ ಹಲವು ಇ-ಶ್ರಮ, ಆಯುಷ್ಮಾನ್ ಭಾರತ್ ಕಾರ್ಡ್, ಶುದ್ಧ ನೀರು, ವಿದ್ಯಾರ್ಥಿಗಳಿಗೆ ದುಶ್ಚಟಗಳ ವಿರುದ್ಧ ಜಾಗೃತಿ, ಶಾಲೆಗಳಿಗೆ ಡೆಸ್ಕ್‌ಗಳ ಕೊಡುಗೆ ಹಾಗೂ ಉಪಾಧ್ಯಾಯರ ನಿಯೋಜನೆ, ಸಂಘದ ಸದಸ್ಯರ ವೃತ್ತಿಪರ ಕೋರ್ಸ್‌ಗಳ ೧೬ ಗ್ರಾಮಗಳ ೧೪೦ ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು, ಕೆರೆಗಳ ಹೂಳು ಎತ್ತುವುದು ಇನ್ನಿತರೆ ಸಮಾಜಮುಖಿ ಕಾರ್ಯಗಳನ್ನು ಜಾರಿ ಮಾಡಲಾಗಿದೆ ಎಂದರು.
ಸಮಾರಂಭ ಉದ್ಘಾಟಿಸಿದ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಮಂಜುನಾಥ್, ಸಮಾಜವನ್ನು ಮುನ್ನಡೆಸುವಲ್ಲಿ ಯುವಜನರ ಪಾತ್ರ ಹಿರಿದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಕೃತಿ ಸ್ವರೂಪಶಕ್ತಿ ಕಾಣಬಹುದಾಗಿದೆ. ಹಿರಿಯರು ಮತ್ತು ಗುರುಗಳಿಗೆ ಗೌರವ ನೀಡುತ್ತ ಪರಿಶ್ರಮ ಹಾಕಿದಲ್ಲಿ ಯಶಸ್ಸು ಖಂಡಿತಾ ದೊರೆಯಲಿದೆ ಎಂದರು.ಜನಜಾಗೃತಿ ವೇದಿಕೆ ಸದಸ್ಯ ವೆಂಕಟರಾಮಾಂಜನೇಯ ಮಾತನಾಡಿ, ರೈತರೇ ದೇಶದ ಅಡಿಪಾಯವಾಗಿದ್ದಾರೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಜನರು ಶಕ್ತಿಮೀರಿ ಸೇವೆಯಲ್ಲಿ ತೊಡಬೇಕು. ಜನ್ಮ ದಿನಾಚರಣೆ, ವಿವಾಹ ವಾರ್ಷಿಕೋತ್ಸವಕ್ಕೆ ಸಸಿ ವಿತರಿಸಿ, ಬೇರೆಯವರಿಗೆ ಉದ್ಯೋಗ ನೀಡುವಲ್ಲಿ ಗಮನಹರಿಸಬೇಕು ಎಂದರು.
ಎ.ಎಸ್.ಐ. ಶ್ರೀನಿವಾಸ್ ಮಾತನಾಡಿ, ಜನತೆ ಸಾಮಾಜಿಕ ಜಾಲತಾಣಗಳಿಂದ ವಂಚನೆಗೆ ಒಳಗಾದ ಭೀತಿಯನ್ನು ವಿವರಿಸಿ ದುಶ್ಚಟಗಳಿಂದ ದೂರವಿರುವಂತೆ ತಿಳಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಜನಜಾಗೃತಿ ವೇದಿಕೆ ಸದಸ್ಯರಾದ ಹನುಮಂತರಾಯ, ಎನ್.ಎಲ್. ಪ್ರಕಾಶ್, ಜಿ.ಮಂಜುನಾಥ ಪಟೇಲ್, ಯೋಜನಾಧಿಕಾರಿ ವಸಂತ ದೇವಾಡಿಗ,ಸಂಪನ್ಮೂಲ ವ್ಯಕ್ತಿ ಸದಾನಂದ, ಲೆಕ್ಕಪರಿಶೋಧಕ ಚಿನ್ಮಯಿ, ಪ್ರಭಂಧಕಿ ಐಶ್ವರ್ಯ, ಮೇಲ್ವಿಚಾರಕರು, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.
- - - -ಫೋಟೋ:ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಯೋಜನೆ ನಿರ್ದೇಶಕ ಲಕ್ಷ್ಮಣ್ ಸುಜ್ಞಾನನಿಧಿ ಶಿಷ್ಯವೇತನ ವಿತರಿಸಿದರು.