ಹಸುಗಳ ಕಾಲು ಕತ್ತರಿಸಿದ ವ್ಯಕ್ತಿ ಗಡಿಪಾರಿಗೆ ಆಗ್ರಹ

| Published : Mar 26 2024, 01:22 AM IST

ಸಾರಾಂಶ

ಮೂಕ ಪ್ರಾಣಿ ಜಾನುವಾರಗಳ ಕಾಲು ಕತ್ತರಿಸಿದವನನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಹನೂರು ತಾಲೂಕಿನ ಒಡೆಯರ್ ಪಾಳ್ಯ ಸಮೀಪದ ಗುಂಡಿಮಾಳ ಗ್ರಾಮದ ರೈತರ 16 ಜಾನುವಾರುಗಳಿಗೆ ಅನ್ಯಧರ್ಮಿಯ ವ್ಯಕ್ತಿಯೊಬ್ಬರು ಜಾನುವಾರುಗಳ ಕಾಲು ಕತ್ತರಿಸಿ ರೈತರಿಗೆ ಆತಂಕವನ್ನುಂಟು ಮಾಡಿದ್ದ ಪ್ರಕರಣ ಪೊಲೀಸರು ಠಾಣಾ ಜಮೀನಿನ ಮೇಲೆ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಒಡೆಯರ್ ಪಾಳ್ಯ ಗುಂಡಿಮಾಳ ಗ್ರಾಮಕ್ಕೆ ತೆರಳುವ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಹನೂರುಮೂಕ ಪ್ರಾಣಿ ಜಾನುವಾರಗಳ ಕಾಲು ಕತ್ತರಿಸಿದವನನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಹನೂರು ತಾಲೂಕಿನ ಒಡೆಯರ್ ಪಾಳ್ಯ ಸಮೀಪದ ಗುಂಡಿಮಾಳ ಗ್ರಾಮದ ರೈತರ 16 ಜಾನುವಾರುಗಳಿಗೆ ಅನ್ಯಧರ್ಮಿ ವ್ಯಕ್ತಿಯೊಬ್ಬರು ಜಾನುವಾರುಗಳ ಕಾಲು ಕತ್ತರಿಸಿ ರೈತರಿಗೆ ಆತಂಕವನ್ನುಂಟು ಮಾಡಿದ್ದ ಪ್ರಕರಣ ಪೊಲೀಸರು ಠಾಣಾ ಜಮೀನಿನ ಮೇಲೆ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಒಡೆಯರ್ ಪಾಳ್ಯ ಗುಂಡಿಮಾಳ ಗ್ರಾಮಕ್ಕೆ ತೆರಳುವ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಸೌದಾರ್ಹತೆಯಿಂದ ಇದ್ದಂತ ಗ್ರಾಮದ ರೈತರು ಮತ್ತು ಅನ್ಯ ಧರ್ಮದ ವ್ಯಕ್ತಿ ಜಾನುವಾರುಗಳ ಕಾಲು ಕತ್ತರಿಸಿ ಆತಂಕ ಉಂಟು ಮಾಡಿರುವ ವ್ಯಕ್ತಿಯನ್ನು ಗಡಿಪಾರು ಮಾಡಬೇಕು. ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು, ಜೊತೆಗೆ ಇಲ್ಲಿನ ಟಿಬೆಟಿಯನ್ ಕಾಲೋನಿಯಲ್ಲಿ ಎಲ್ಲಿ ನೋಡಿದರೂ ಬೇರೆ ಭಾಷೆಯ ನಾಮಫಲಕಗಳು ರಾರಾಜಿಸುತ್ತಿದೆ ಮೊದಲ ಸಾಲಿನಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು ಸಮುದಾಯ ಮುಖ್ಯಸ್ಥನ ಭರವಸೆ: ಟಿಬೆಟಿನ್‌ ಧರ್ಮದ ಮುಖ್ಯಸ್ಥ ಗೆಲೆಟ್ ಪ್ರತಿಭಟನಾ ಸ್ಥಳದಲ್ಲಿ ಆಗಮಿಸಿ ಜಾನುವಾರುಗಳ ಕಾಲು ಕತ್ತರಿಸಿರುವ ವ್ಯಕ್ತಿಯ ಮೇಲೆ ನಮ್ಮ ಸಂಸ್ಥೆ ವತಿಯಿಂದ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗುವುದು ಅದರಂತೆ ವ್ಯಕ್ತಿಯನ್ನು ಗಡಿಪಾರು ಮಾಡಲು ಕ್ರಮವಹಿಸಲಾಗುವುದು ಜೊತೆಗೆ ಇಲ್ಲಿನ ಗ್ರಾಮದ ಧರ್ಮದ ಹಾಗೂ ಆಚಾರ ವಿಚಾರಗಳ ಬಗ್ಗೆ ರೈತರ ಜೊತೆ ಅನ್ಯೋನ್ಯವಾಗಿ ಮುಂದಿನ ದಿನಗಳಲ್ಲಿ ಇರಲು ಇಲ್ಲಿನ ಸಮುದಾಯದವರಿಗೆ ಸೂಚನೆ ನೀಡಲಾಗುವುದು ಜೊತೆಗೆ ಇನ್ನು ಮುಂದೆ ಇಂತಹ ಘಟನೆಗಳು ಜರುಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು. ನೀಡಿರುವ ಜಾಮೀನು ರದ್ದುಗೊಳಿಸಿ ಒತ್ತಾಯ:

ಮೂಕ ಪ್ರಾಣಿಗಳ ಮೇಲೆ ಮಚ್ಚಿನಿಂದ ಹಲ್ಲೆಗೊಳಿಸಿ 16 ಪ್ರಾಣಿಗಳ ಕಾಲು ಕತ್ತರಿಸಿರುವ ವ್ಯಕ್ತಿಗೆ ಇಲ್ಲಿನ ನಮ್ಮ ಕನ್ನಡಿಗರೇ ಪೊಲೀಸ್ ಠಾಣೆಯಲ್ಲಿ ಜಾಮೀನು ನೀಡಿರುವುದು ಖಂಡನೀಯವಾಗಿದೆ. ಆದುದರಿಂದ ಸಂಬಂಧಪಟ್ಟವರು ನೀಡಿರುವ ಜಾಮೀನು ವಾಪಾಸ್ ಪಡೆದು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಇದೇ ವೇಳೆ ಒತ್ತಾಯಿಸಿದರು

ಈ ವೇಳೆ ಉಪ ತಹಿಸೀಲ್ದಾರ್ ವೆಂಕಟೇಶ್ ರಾಜಸ್ವ ನಿರೀಕ್ಷಕ ಮಾದೇಶ್ ಪೊಲೀಸ್ ಸಿಬ್ಬಂದಿ ವರ್ಗ ಹಾಗೂ ರೈತ ಮುಖಂಡರಾದ ಗುಂಡ್ಲುಪೇಟೆ ಶ್ರೀನಿವಾಸ್ ಹುತ್ತಿಗೆರೆ ಮಹೇಶ್ ಹಾಗೂ ಪುಟ್ಟೇಗೌಡ ಶಿವಾನಂದ ಮಂಜುನಾಥ್ ಶಿವು ಹಾಗೂ ಒಡೆಯರ್ ಪಾಳ್ಯ ಗುಂಡಿ ಮಾಳ ಸುತ್ತಮುತ್ತಲಿನ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.