ಸಾರಾಂಶ
ಕನ್ನಪ್ರಭ ವರದಿ ವಿಜಯಪುರ: ದಲಿತ, ಅಹಿಂದ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ವಿಜಯಪುರ ಬಂದ್ ವೇಳೆ ಹೂ ಮಾರಾಟಕ್ಕೆಂದು ಬಂದಿದ್ದ ಉಮಾ ಸಿಂಗಾಡೆ ಎಂಬ ಮಹಿಳೆಯೊಬ್ಬಳು ಮಾರಾಟಕ್ಕೆ ತಂದಿದ್ದ ಹೂವನ್ನು ರಸ್ತೆ ಮೇಲೆ ಚೆಲ್ಲುವ ಮೂಲಕ ದಲಿತ ವ್ಯಕ್ತಿಯೊಬ್ಬರು ಅಟ್ಟಹಾಸ ಮರೆದಿದ್ದರು. ನಗರದ ಲಾಲ್ ಬಹದ್ದೂರ್ ಶಾಸ್ತ್ರೀ ಮಾರುಕಟ್ಟೆಯ ಬಳಿ ಘಟನೆ ನಡೆದಿದ್ದು, ಹೂ ರಸ್ತೆ ಪಾಲಾಗಿದ್ದರಿಂದ ಆ ಮಹಿಳೆ ಕಣ್ಣೀರಿಟ್ಟು ಅಸಹಾಯಕತೆ ವ್ಯಕ್ತಪಡಿಸಿದ್ದಳು. ಈ ಕುರಿತು ಕನ್ನಡಪ್ರಭ ವರದಿ ಪ್ರಕಟಿಸಿತ್ತು.
ಕನ್ನಪ್ರಭ ವರದಿ ವಿಜಯಪುರ:
ದಲಿತ, ಅಹಿಂದ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ವಿಜಯಪುರ ಬಂದ್ ವೇಳೆ ಹೂ ಮಾರಾಟಕ್ಕೆಂದು ಬಂದಿದ್ದ ಉಮಾ ಸಿಂಗಾಡೆ ಎಂಬ ಮಹಿಳೆಯೊಬ್ಬಳು ಮಾರಾಟಕ್ಕೆ ತಂದಿದ್ದ ಹೂವನ್ನು ರಸ್ತೆ ಮೇಲೆ ಚೆಲ್ಲುವ ಮೂಲಕ ದಲಿತ ವ್ಯಕ್ತಿಯೊಬ್ಬರು ಅಟ್ಟಹಾಸ ಮರೆದಿದ್ದರು. ನಗರದ ಲಾಲ್ ಬಹದ್ದೂರ್ ಶಾಸ್ತ್ರೀ ಮಾರುಕಟ್ಟೆಯ ಬಳಿ ಘಟನೆ ನಡೆದಿದ್ದು, ಹೂ ರಸ್ತೆ ಪಾಲಾಗಿದ್ದರಿಂದ ಆ ಮಹಿಳೆ ಕಣ್ಣೀರಿಟ್ಟು ಅಸಹಾಯಕತೆ ವ್ಯಕ್ತಪಡಿಸಿದ್ದಳು. ಈ ಕುರಿತು ಕನ್ನಡಪ್ರಭ ವರದಿ ಪ್ರಕಟಿಸಿತ್ತು.ಕನ್ನಡಪ್ರಭ ವರದಿಗೆ ಸ್ಪಂದಿಸಿದ ದಲಿತ ಮುಖಂಡರು ಮಂಗಳವಾರ ನಷ್ಟಕ್ಕೊಳಗಾಗಿದ್ದ ಹೂ ವ್ಯಾಪಾರಿ ಮಹಿಳೆಯ ಬಳಿ ಹೋಗಿ ಆಗಿರುವ ಅಚಾತುರ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಆಗಿದ್ದ ಹಾನಿಯನ್ನು ಭರಿಸಿದ್ದಾರೆ. ಬೀದಿ ಬದಿ ಹೂ ಮಾರುತ್ತಿದ್ದ ಸಹೋದರಿಯ ಹೂಗಳನ್ನು ಬೀದಿಗೆ ಚೆಲ್ಲಿ ಅವಳ ಆ ದಿನದ ಬಂಡವಾಳ ನಾಶಮಾಡಿದ್ದ ಮಹಾದೇವ ಕಾಂಬಳೆ ಅವರನ್ನು ಸಹ ಜೊತೆಯಲ್ಲಿ ಕರೆದುಕೊಂಡು ಕ್ಷೆಮೆ ಕೇಳಲು ದಲಿತ ವಿದ್ಯಾರ್ಥಿ ಪರಿಷತ್ತು ಕ್ರಮ ಕೈಗೊಂಡಿದೆ.
ಮಹಿಳೆಗೆ ನಗದು ಸಹಾಯ ಮಾಡಿ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಶ್ರೀನಾಥ ಪೂಜಾರಿ, ಮಹಿಳೆಗೆ ಆದ ನಷ್ಟವನ್ನು ನಾವೇ ಭರಿಸಿ ಅವಳ ದಿನದ ವ್ಯಾಪಾರಕ್ಕೆ ಧಕ್ಕೆ ಆಗದಂತೆ ನೊಡಿಕೊಳ್ಳುವ ಜವಾಬ್ದಾರಿ ನಮ್ಮದು. ನೀವು ನಗುಮೊಗದೊಂದಿಗೆ ವ್ಯಾಪಾರ ಮಾಡಿರಿ ಧೈರ್ಯ ಹೇಳಿದರು.ಕ್ಷಮೆ ಕೇಳಿದ ಕಾಂಬಳೆ:
ಬಂದ್ ವೇಳೆ ಆವೇಶದಲ್ಲಿ ನಾನು ಹಾಗೆ ಮಾಡಬಾರದಿತ್ತು. ಮಹಿಳೆಯ ಹೂ ಚೆಲ್ಲಿದ್ದು ನಂತರ ನನಗೆ ತುಂಬಾ ನೋವಾಯಿತು. ಹಾಗಾಗಿ ನಾನು ಸಹೋದರಿಯ ಕ್ಷಮೆ ಕೇಳುತ್ತೇನೆ ಎಂದು ಹೂ ಚೆಲ್ಲಿದ್ದ ಮಹಾದೇವ ಕಾಂಬಳೆ ಕ್ಷೆಮೆ ಯಾಚಿಸಿದರು. ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಅಕ್ಷಯಕುಮಾರ ಅಜಮನಿ, ಯಮನಪ್ಪ ಮಾದರ, ಪ್ರಭುಗೌಡ ಪಾಟೀಲ, ಚನ್ನು ಕಟ್ಟಿಮನಿ, ಜಕ್ಕಪ್ಪ ಯಡವೆ ಸೇರಿದಂತೆ ಇತರರು ಉಪಸ್ಥಿತರಿದ್ದರು.