ಸಮಾನತೆಗಾಗಿ ರಕ್ತ ಹರಿಸಿದ ಶರಣರು: ಪಟ್ಟದ್ದೇವರು

| Published : May 10 2024, 11:45 PM IST

ಸಮಾನತೆಗಾಗಿ ರಕ್ತ ಹರಿಸಿದ ಶರಣರು: ಪಟ್ಟದ್ದೇವರು
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ ವ್ಯವಸ್ಥೆ ತೊಲಗಿಸಲು ಬಸವಣ್ಣವರ ನೇತೃತ್ವದಲ್ಲಿ ಕ್ರಾಂತಿ ನಡೆಯಿತು. ಎಷ್ಟೇ ವಿರೋಧ ವ್ಯಕ್ತವಾದರೂ ಶರಣರು ತಮ್ಮ ತತ್ವ ಬಿಟ್ಟುಕೊಡಲಿಲ್ಲ. ಈ ಕಾರಣಕ್ಕಾಗಿಯೇ ಕಲ್ಯಾಣದಲ್ಲಿ ಕ್ರಾಂತಿ ನಡೆಯಿತು ಶರಣರು ತತ್ವಕ್ಕಾಗಿ ರಕ್ತದ ಕಣ ಹರಿಸಿದರು

ಕನ್ನಡಪ್ರಭ ವಾರ್ತೆ ಭಾಲ್ಕಿ

12ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾನತೆ ಮತ್ತು ಅಂಧಶ್ರದ್ಧೆ, ಮೂಡ ನಂಬಿಕೆ ನಿರ್ಮೂಲನೆಗಾಗಿ ರಕ್ತ ಹರಿಸಿದರು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

ಅವರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣವರ ಜಯಂತ್ಯುತ್ಸವ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಷಟಸ್ಥಲ ಧ್ವಜರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜಾತಿ ವ್ಯವಸ್ಥೆ ತೊಲಗಿಸಲು ಬಸವಣ್ಣವರ ನೇತೃತ್ವದಲ್ಲಿ ಕ್ರಾಂತಿ ನಡೆಯಿತು. ಎಷ್ಟೇ ವಿರೋಧ ವ್ಯಕ್ತವಾದರೂ ಶರಣರು ತಮ್ಮ ತತ್ವ ಬಿಟ್ಟುಕೊಡಲಿಲ್ಲ. ಈ ಕಾರಣಕ್ಕಾಗಿಯೇ ಕಲ್ಯಾಣದಲ್ಲಿ ಕ್ರಾಂತಿ ನಡೆಯಿತು ಶರಣರು ತತ್ವಕ್ಕಾಗಿ ರಕ್ತದ ಕಣ ಹರಿಸಿದರು ಎಂದರು.

ಹೀಗಾಗಿ ಇಂತಹ ಶರಣರು ನಡೆದಾಡಿದ ಪವಿತ್ರ ಭೂಮಿ ಮತ್ತೊಮ್ಮೆ ಜಗದಗಲ ಬೆಳಗಬೇಕಿದೆ. ಶರಣರ ವಿಚಾರಧಾರೆ ಜನಮಾನಸಕ್ಕೆ ತಲುಪಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಮುಖ್ಯವಾಗಿದೆ ಎಂದು ತಿಳಿಸಿದರು.

ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಾಗರ ಖಂಡ್ರೆ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಶಿವು ಲೋಖಂಡೆ, ಚಂದ್ರಕಾಂತ ಪಾಟೀಲ್‌, ಜೈರಾಜ ಪಾತ್ರೆ, ಕಿರಣ ಖಂಡ್ರೆ, ಜಗದೀಶ ಖಂಡ್ರೆ, ಹಣಮಂತರಾವ್‌ ಚವ್ಹಾಣ್‌, ಓಂಪ್ರಕಾಶ ರೊಟ್ಟೆ, ಡಾ. ಅಮಿತ ಅಷ್ಟೂರೆ, ಅಮರ ಜಲ್ದೆ, ಸುಭಾಷ ಕಾರಾಮುಂಗೆ, ಬಸವರಾಜ ವಂಕೆ, ವಿಜಯಕುಮಾರ ರಾಜಭವನ, ಅನೀಲ ಲೋಖಂಡೆ, ಅಶೋಕ ಬಾವುಗೆ, ಬಸವರಾಜ ಮರೆ, ವಿಶ್ವನಾಥ ಮೋರೆ, ವಿಲಾಸ ಮೋರೆ, ಟಿಂಕು ರಾಜಭವನ ಸೇರಿದಂತೆ ಹಲವರು ಇದ್ದರು.