ಸಾರಾಂಶ
ದಾಬಸ್‌ಪೇಟೆ: ಪ್ರತಿದಿನವೂ ನಾಡಪ್ರಭು ಶ್ರೀ ಕೆಂಪೇಗೌಡರನ್ನು ಸ್ಮರಿಸಿ ಮತ್ತು ಅವರ ಸಾಮಾಜಮುಖಿ ಕಾರ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಆಚರಣೆಗೆ ಅರ್ಥ ಬರುತ್ತದೆ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಲಕ್ಕೇನಹಳ್ಳಿ ಹನುಮಂತಯ್ಯ ಅಭಿಪ್ರಾಯಪಟ್ಟರು.

ಲಕ್ಕೇನಹಳ್ಳಿಯಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 515ನೇ ಜಯಂತಿ ಅಂಗವಾಗಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಮಾಜದಲ್ಲಿ ನೀರಿನ ಮೂಲಗಳಾದ ಕೆರೆ, ಕುಂಟೆ, ಗೋಮಾಳ, ತನ್ನದೇ ಆದ ಸ್ಥಾನ ಮೀಸಲಿಟ್ಟಿದ್ದು ನಾಡಪ್ರಭುಗಳ ಆಳ್ವಿಕೆಯಲ್ಲಿ, ನಾವೆಲ್ಲರು ಸೇರಿ ನೀರಿನ ಮೂಲಗಳನ್ನು ಉಳಿಸಬೇಕು. ಕೆಂಪೇಗೌಡರ ಆಡಳಿತ ಪ್ರದೇಶದಲ್ಲಿದ್ದ ಬಯಲು ಸೀಮೆ ಪ್ರಾಂತ್ಯದಲ್ಲಿ ಮಾಗಡಿ, ಶಿವಗಂಗೆ ಭಾಗದಲ್ಲಿ ಅವಿನಾಭಾವ ಸಂಬಂಧ ಇಂದಿಗೂ ಮುಂದುವರೆದಿದೆ. ಪ್ರತಿಯೊಬ್ಬರು ಕೆಂಪೇಗೌಡರ ಸಮಾಜಮುಖಿ ಕಾರ್ಯ ಸ್ಮರಿಸಿ ಅಳವಡಿಸಿಕೊಳ್ಳಬೇಕು ಎಂದರು.ಗ್ರಾಮಸ್ಥ ರವಿಕುಮಾರ್ ಮಾತನಾಡಿ, ಈ ವರ್ಷ ಸಾಂಕೇತಿಕವಾಗಿ ಆಂಜನೇಯನ ದೇವಾಲಯದಲ್ಲಿ ನಾಡಪ್ರಭುಗಳ ಜಯಂತ್ಯುತ್ಸವ ಆಚರಿಸಿದೆವು. ಮುಂದಿನ ವರ್ಷ ಇನ್ನೂ ಹೆಚ್ಚು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸುತ್ತೇವೆ ಎಂದರು.
ಸಮಾರಂಭದಲ್ಲಿ ಗ್ರಾಮದ ಹಿರಿಯರಾದ ಡಾ.ವಿ.ಆಂಜಿನಪ್ಪ, ಗ್ರಾಪಂ ಸದಸ್ಯ ಯೋಗಣ್ಣ, ಸೀನಪ್ಪ, ರಮೇಶ್, ಲೋಕೇಶ್, ಮಂಜುನಾಥ್, ಕಿರಣ್, ಉಮೇಶ್, ಕೆ.ರಾಜಣ್ಣ, ಚಿಕ್ಕರಾಜು, ಗ್ರಾಪಂ ಮಾಜಿ ಸದಸ್ಯೆ ಸುಮಾ ಹನುಮಂತರಾಜು, ರಂಗನಾಥ್, ಸಾಯಿಕುಮಾರ್, ಎಲ್.ಸಿ.ಕೃಷ್ಣಪ್ಪ, ಅರ್ಚಕ ನರಸಿಂಹಮೂರ್ತಿ, ಇತರರಿದ್ದರು.ಫೋಟೋ 9:
ಲಕ್ಕೇನಹಳ್ಳಿ ಗ್ರಾಮದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 515ನೇ ಜಯಂತಿ ಅಂಗವಾಗಿ ಕೆಂಪೇಗೌಡರ ಭಾವಚಿತ್ರಕ್ಕೆ ಗ್ರಾಮಸ್ಥರು ಪುಷ್ಪ ನಮನ ಸಲ್ಲಿಸಿದರು.