ಮನುಷ್ಯರು ತಮ್ಮ ಸಾಮಾಜಿಕ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ತಮ್ಮ ಸಾಹಿತ್ಯ ಹಾಗೂ ಚಿಂತನೆಗಳ ಮೂಲಕ ತಿಳಿಸಿಕೊಟ್ಟ ಮಹಾಪುರುಷರು ದಾಸಶ್ರೇಷ್ಠ ಕನಕದಾಸರು
ಗದಗ: ಕನಕದಾಸರ ಸಂದೇಶ ಮತ್ತು ಮಾರ್ಗದರ್ಶನಗಳು ಸರ್ವಕಾಲಿಕವಾಗಿದ್ದು, ಇಂದಿನ ದಿನಗಳಿಗೆ ಹೆಚ್ಚು ಪ್ರಸ್ತುತವಾಗಿವೆ ಎಂದು ಗದಗ ಶಾಸಕ ಎಚ್.ಕೆ. ಪಾಟೀಲ ಹೇಳಿದರು. ಭಕ್ತ ಕನಕದಾಸರ ಜಯಂತಿ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಹಾತಲಗೇರಿ ನಾಕಾದಲ್ಲಿರುವ ಭಕ್ತ ಕನಕದಾಸರ ವೃತ್ತದಲ್ಲಿ ಶುಕ್ರವಾರ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು. ಕನಕದಾಸರು ನಾಡಿಗೆ ನೀಡಿದ ಸಂದೇಶ ಹಾಗೂ ಮಾರ್ಗದರ್ಶನ ಅಪಾರವಾದುದು. ಅವರ ವಚನಗಳು, ಕೀರ್ತನೆಗಳು ಮತ್ತು ಪದ್ಯಗಳು ಸಮಾಜಕ್ಕೆ ಉತ್ತಮ ದಾರಿ ತೋರಿಸಿವೆ. ಮನುಷ್ಯರು ತಮ್ಮ ಸಾಮಾಜಿಕ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ತಮ್ಮ ಸಾಹಿತ್ಯ ಹಾಗೂ ಚಿಂತನೆಗಳ ಮೂಲಕ ತಿಳಿಸಿಕೊಟ್ಟ ಮಹಾಪುರುಷರು ದಾಸಶ್ರೇಷ್ಠ ಕನಕದಾಸರು ಎಂದರು.
ಮುಖಂಡರಾದ ಜಿಪಂ ಮಾಜಿ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಾಸಣ್ಣ ಕುರಡಗಿ, ಫಕೀರಪ್ಪ ಹೆಬಸೂರ, ರುದ್ರಣ್ಣ ಗುಳಗುಳಿ, ರವಿ ದಂಡಿನ, ಕೃಷ್ಣಗೌಡ ಪಾಟೀಲ, ಡಾ. ಜಿ.ಬಿ. ಬಿಡನಾಳ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ರಮೇಶ ಸಜ್ಜನರ, ಸಿದ್ದು ಪಾಟೀಲ, ಪ್ರಕಾಶ ಕರಿ, ನಿಂಗಪ್ಪ ಬಿಚ್ಚಗತ್ತಿ, ಡಾ. ಎನ್.ಎಚ್. ನಾಗನೂರ, ವೆಂಕಟೇಶ ಇಮರಾಪುರ, ನಾಗರಾಜ ಮೆಣಸಗಿ, ಸೋಮನಗೌಡ ಪಾಟೀಲ, ಮುತ್ತು ಜಡಿ, ಹೇಮಂತ ಗಿಡ್ಡಹನಮಣ್ಣವರ, ಮಂಜುನಾಥ ಜಡಿ, ಸತೀಶ, ಆರ್.ಕೆ. ಗುಡಸಾಲಿ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್., ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ವಸಂತ ಮಡ್ಲೂರ, ಮಹಾಂತೇಶ ಸಜ್ಜನರ, ಡಾ. ಬಸವರಾಜ ಬಳ್ಳಾರಿ, ರಾಜು ಸೋಪಡ್ಲ, ರಾಜಣ್ಣ ಕಂಟಿಗೊಣ್ಣವರ ಹಾಗೂ ರಾಜಾರಾಮ ಪವಾರ ಹಾಜರಿದ್ದರು. ಗದಗ ಕೆವಿಎಸ್ಆರ್ ಶಾಲೆಯ ವಿದ್ಯಾರ್ಥಿಗಳು ಕನಕದಾಸರ ಭಕ್ತಿಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಸಾರ್ವಜನಿಕರ ಗಮನ ಸಳೆದರು.