ಆಧುನಿಕ ಯುಗದಲ್ಲಿ ಮೊಬೈಲ್‌ ಗೀಳು ಹೆಚ್ಚಾಗಿದ್ದು, ಮನೆ, ಮನ, ಮಕ್ಕಳಲ್ಲಿ ವಚನ ಸಾಹಿತ್ಯ ಹಾಗೂ ಶಿವಶರಣರ ವಚನಗಳ ಬಗ್ಗೆ ಅರಿವು ಮೂಡಿಸಬೇಕಿದೆ.

ನರಗುಂದ: ಬಸವಾದಿ ಶರಣರ ವಚನಗಳಲ್ಲಿ ಮಾನವೀಯ ಮೌಲ್ಯಗಳು, ಶಾಂತಿ, ಸೌಹಾರ್ದತೆ, ಸಮಾನತೆ ಸಾರುವ ಸಂದೇಶಗಳಿವೆ ಎಂದು ಭೈರನಹಟ್ಟಿ- ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ತಿಳಿಸಿದರು.ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ಜಾತ್ರೆ ಮಹೋತ್ಸವ ಅಂಗವಾಗಿ ನಡೆದ ವಚನ ಓದು ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನಿಕ ಯುಗದಲ್ಲಿ ಮೊಬೈಲ್‌ ಗೀಳು ಹೆಚ್ಚಾಗಿದ್ದು, ಮನೆ, ಮನ, ಮಕ್ಕಳಲ್ಲಿ ವಚನ ಸಾಹಿತ್ಯ ಹಾಗೂ ಶಿವಶರಣರ ವಚನಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮೀಜಿಯವರು ಜಾತ್ರೆಯನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ. ಕೃಷಿ, ಆರೋಗ್ಯ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ. ವಚನಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಜಾತ್ರೆಗೆ ಮತ್ತಷ್ಟು ಮೆರುಗು ಬಂದಿದೆ ಎಂದರು.

ಧಾರವಾಡ ಉಚ್ಚ ನ್ಯಾಯಾಲಯದ ನ್ಯಾಯವಾದಿ ಸಂಕೇತ ಅಂಬಲಿ ಮಾತನಾಡಿ, ಬಣಜಿಗ ಕ್ಷೇಮಾಭಿವೃದ್ಧಿ ಸಂಘದವರು ವಚನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಮಾಜಿ ಅಧ್ಯಕ್ಷ ಶಿವಾನಂದ ಶೇಬಣ್ಣವರ, ಜಾತ್ರಾ ಸಮಿತಿ ಅಧ್ಯಕ್ಷ ರವೀಂದ್ರ ಹಿರೇಮಠ ಮಾತನಾಡಿದರು. ವಚನ ಓದು ಸ್ಪರ್ಧೆಯಲ್ಲಿ 130 ವಿದ್ಯಾರ್ಥಿಳು ಭಾಗವಹಿಸಿದ್ದರು. ಪ್ರಥಮ ಸಮೃದ್ಧಿ ಕತ್ತಿಕೈ, ದ್ವಿತೀಯ ಆದ್ಯಾ ಶೆಲ್ಲಿಕೇರಿ, ತೃತೀಯ ಅನಿತಾ ಕೊಡಬಳ್ಳಿ, ಚತುರ್ಥ ಸುನೀತಾ ಹೂಗಾರ, ಪಂಚಮ ಶ್ರೇಯಾ ಕಲಹಾಳ ಬಹುಮಾನಗಳನ್ನು ಪಡೆದರು.

ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಗ್ರಾಮ ಘಟಕದ ಅಧ್ಯಕ್ಷ ಚಂದ್ರಶೇಖರ ಸೊಬರದ, ಎಲ್ಐಸಿ ಪ್ರತಿನಿಧಿ ಶಿವಪ್ಪ ಉಣಚಗಿ, ಎಸ್.ವಿ. ಕುಪ್ಪಸ್ತ, ದ್ಯಾಮಣ್ಣ ಕಾಡಪ್ಪನವರ, ರಂಜಾನಸಾಬ್ ನದಾಫ, ಈರಯ್ಯ ಮಠದ, ಮಹಾಂತೇಶ ಮರಿಗುದ್ದಿ, ಶಂಕರಗೌಡ ಗಿರಿಯಪ್ಪಗೌಡ್ರ, ವೀರನಗೌಡ್ರ, ಶರಣಪ್ಪ ಪೂಜಾರ, ರಮೇಶ ಐನಾಪೂರ, ಸುರೇಶ ಬನ್ನಿಗಿಡದ, ಪ್ರವೀಣ ಶೆಲ್ಲಿಕೇರಿ, ಶರಣಪ್ಪ ಮೆಣಸ, ಕುಮಾರ ಮರಿಗುದ್ದಿ, ಉಮೇಶ ಮರಿಗುದ್ದಿ, ಶಿದ್ದಲಿಂಗೇಶ ಶೆಟ್ಟರ, ಪ್ರವೀಣ ಸಂಗಳದಶೆಟ್ಟರ, ನಂದನ ಸೊಬರದ, ದ್ಯಾಮಣ್ಣ ತೆಗ್ಗಿ, ಸತ್ಯಾನಂದ ಚಿಕ್ಕನರಗುಂದ ಇದ್ದರು. ಪ್ರಶಾಂತ ಶೆಲ್ಲಿಕೇರಿ ಸ್ವಾಗತಿಸಿದರು. ಶಿದ್ದು ಅಂಗಡಿ ನಿರೂಪಿಸಿ, ವಂದಿಸಿದರು.