ಸಾಲ ಕಟ್ಟಿಲ್ಲವೆಂದು ಕುಟುಂಬವನ್ನೇ ಹೊರ ಹಾಕಿದ ಮೈಕ್ರೋಫೈನಾನ್ಸ್‌ ಸಿಬ್ಬಂದಿ

| Published : Jan 29 2025, 01:31 AM IST

ಸಾಲ ಕಟ್ಟಿಲ್ಲವೆಂದು ಕುಟುಂಬವನ್ನೇ ಹೊರ ಹಾಕಿದ ಮೈಕ್ರೋಫೈನಾನ್ಸ್‌ ಸಿಬ್ಬಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂತೆಮರಹಳ್ಳಿ ಗ್ರಾಮದ ರಾಜೇಶ್ ಹಾಗೂ ಶ್ವೇತ ದಂಪತಿ ಕೆಲ ವರ್ಷಗಳ ಹಿಂದೆ ಚಾಮರಾಜನಗರದಲ್ಲಿರುವ ಮೈಕ್ರೋ ಫೈನಾನ್ಸ್ ಬ್ಯಾಂಕ್‌ವೊಂದರಲ್ಲಿ ಮನೆಯ ಮೇಲೆ 15 ಲಕ್ಷ ಸಾಲ ಪಡೆದಿದ್ದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಕಾಲದಲ್ಲಿ ಸಾಲ ಮರು ಪಾವತಿ ಮಾಡದ ಮನೆಯನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸೀಜ್ ಮಾಡಿದ ಹಿನ್ನೆಲೆ ವಾಸಿಸಲು ಮನೆ ಇಲ್ಲದೇ ಕುಟುಂಬವೊಂದು ಬೀದಿಗೆ ಬಿದ್ದಿರುವ ಘಟನೆ ಸಂತೇಮರಹಳ್ಳಿಯಲ್ಲಿ ನಡೆದಿದೆ.

ಸಂತೆಮರಹಳ್ಳಿ ಗ್ರಾಮದ ರಾಜೇಶ್ ಹಾಗೂ ಶ್ವೇತ ದಂಪತಿ ಕೆಲ ವರ್ಷಗಳ ಹಿಂದೆ ಚಾಮರಾಜನಗರದಲ್ಲಿರುವ ಮೈಕ್ರೋ ಫೈನಾನ್ಸ್ ಬ್ಯಾಂಕ್‌ವೊಂದರಲ್ಲಿ ಮನೆಯ ಮೇಲೆ 15 ಲಕ್ಷ ಸಾಲ ಪಡೆದಿದ್ದರು. ಸಕಾಲದಲ್ಲಿ ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ವಾರದ ಹಿಂದೆ ಬ್ಯಾಂಕ್‌ನವರು ಮನೆಯನ್ನು ಸೀಜ್ ಮಾಡಿದ್ದಾರೆ. ಮನೆಗೆ ಬೀಗ ಜಡಿದು ಹೋಗಿದ್ದಾರೆ.

ಇದರಿಂದ ರಾಜೇಶ್‌ ಕುಟುಂಬ ಮನೆಯ ಮುಂಭಾಗ ಜಗಲಿಯಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕ್‌ನವರ ಹತ್ತಿರ ರೈತ ಮುಖಂಡರನ್ನು ಕರೆದುಕೊಂಡು ಹೋಗಿ ಸ್ವಲ್ಪ ಹಣ ಪಾವತಿ ಮಾಡುವುದಾಗಿ ಹೇಳಿದರೂ ಸಹ ನಮಗೆ ಪೂರ್ಣ ಹಣ ಕಟ್ಟಬೇಕು ಎಂದು ನಮ್ಮ ಮನೆಯನ್ನು ಮುಟ್ಟುಗೋಲು ಮಾಡಿಕೊಂಡಿದ್ದಾರೆ. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಮನೆಯ ಹೊರಗಡೆ ಇರುವ ಶೌಚಾಲಯ ಹಾಗೂ ಸ್ನಾನದ ಕೊಠಡಿಗೂ ಬೀಗ ಜಡಿದಿದ್ದು ತೊಂದರೆಯಾಗಿದೆ. ಸಂಬಂಧಪಟ್ಟವರು ನಮಗೆ ನ್ಯಾಯ ಕೊಡಿಸಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

-------

28ಸಿಎಚ್ಎನ್‌11

ಸಂತೇಮರಹಳ್ಳಿ ರಾಜೇಶ್‌ ಕುಟುಂಬ