ಸಾರಾಂಶ
ಭಾರತೀಯ ಸಂಸ್ಕೃತಿಯ ಪ್ರಕಾರ ಮಕ್ಕಳು ದೇವರಂತೆ. ಆದರಿಂದ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ಕೊಡಿಸುವ ಮೂಲಕ ಸುಭದ್ರ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಿಸಬೇಕು.
ಕುಷ್ಟಗಿ:
ಮನಸ್ಸು ಶುದ್ಧವಾಗಿರಿಸಿಕೊಳ್ಳಲು ಪುರಾಣ ಪ್ರವಚನ ಆಲಿಸಬೇಕು ಎಂದು ಗುರುಗುಂಟಾ ಶ್ರೀಅಮರೇಶ್ವರದ ಗುರು ಗಜದಂಡ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಬಳೂಟಗಿ ಗ್ರಾಮದ ದ್ಯಾಮಮ್ಮ ದೇವಿ ದೇವಸ್ಥಾನದಲ್ಲಿ ಶ್ರೀಕಾಶಿ ವಿಶ್ವನಾಥನ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿರುವ ಗುರುಗುಂಟಾ ಶ್ರೀಅಮರೇಶ್ವರ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯ ಪ್ರಕಾರ ಮಕ್ಕಳು ದೇವರಂತೆ. ಆದರಿಂದ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ಕೊಡಿಸುವ ಮೂಲಕ ಸುಭದ್ರ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಿಸಬೇಕೆಂದು ಕರೆ ನೀಡಿದರು.ತಾಯಂದಿರು ಮಕ್ಕಳಿಗೆ ಸಾಮರಸ್ಯ, ಸ್ನೇಹ, ಹೊಂದಾಣಿಕೆ, ಪ್ರಾಮಾಣಿಕತೆಯನ್ನು ಚಿಕ್ಕಂದಿನಿಂದಲೇ ಕಲಿಸಬೇಕು. ಮೂರು ವರ್ಷದ ಬುದ್ಧಿ ನೂರು ವರ್ಷ ಎಂಬಂತೆ ಬಾಲ್ಯದಲ್ಲಿ ಪಡೆದ ಸಂಸ್ಕಾರ ಜೀವನ ಪರ್ಯಂತ ಉಳಿಯುತ್ತದೆ. ಉತ್ತಮ ವ್ಯಕ್ತಿಯಾಗಲು ದಾರಿ ತೋರುತ್ತದೆ ಎಂದರು.
ಈ ವೇಳೆ ಪ್ರವಚನಕಾರ ರೇವಣಸಿದ್ದಯ್ಯ ತಾತನವರು, ಸಂಗೀತ ಸೇವೆ ಶರಣಪ್ಪ ಬಳ್ಳೊಳ್ಳಿ, ತಬಲವಾದಕ ಶರಣಪ್ಪ ಹಂದ್ರಾಳ, ಬಸಲಿಂಗಯ್ಯ ಹಿರೇಮಠ, ಪ್ರಮುಖರಾದ ಶರಣಪ್ಪ ಮೇಟಿ, ಶೇಖರಗೌಡ ಪಾಟೀಲ್, ರಮೇಶ ಮದ್ನಾಳ, ಶ್ರೀಶೈಲಪ್ಪ ಮೇಟಿ, ರಮೇಶ ಎಲಿಗಾರ, ಬಾಳಪ್ಪ ಮೇಟಿ, ಪಂಪಣ್ಣ ಮದ್ನಾಳ, ಶಂಕ್ರಪ್ಪ ರಾಮತ್ನಾಳ, ರಾಮನಗೌಡ ಪಾಟೀಲ್ ಇದ್ದರು.