೨೭ರಂದು ‘ಕೇದಾರ್ ನಾಥ್ ಕುರಿ ಫಾರಂ’ ಸಿನಿಮಾ ಬಿಡುಗಡೆ

| Published : Sep 20 2024, 01:43 AM IST

೨೭ರಂದು ‘ಕೇದಾರ್ ನಾಥ್ ಕುರಿ ಫಾರಂ’ ಸಿನಿಮಾ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಶೇ.80 ರಷ್ಟು ಹಾಸ್ಯದಿಂದ ಕೂಡಿರುವ ಮತ್ತು ಕುಟುಂಬ ಸಮೇತ ವೀಕ್ಷಣೆ ಮಾಡಬಹುದಾದ ಹಾಗೂ ಹಾಸನದ ನಿವಾಸಿ ಮಡೆನೂರು ಮನು ನಾಯಕನಾಗಿ ಅಭಿನಯಿಸಿರುವ ‘ಕೇದಾರ್ ನಾಥ್ ಕುರಿ ಫಾರಂ’ ಕನ್ನಡ ಚಲನಚಿತ್ರವು ಸೆ.೨೭ ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಲನಚಿತ್ರದ ನಿರ್ದೇಶಕ ಶ್ರೀನಿವಾಸ್ ತಿಳಿಸಿದರು.

ಹಾಸನ : ಶೇ.80 ರಷ್ಟು ಹಾಸ್ಯದಿಂದ ಕೂಡಿರುವ ಮತ್ತು ಕುಟುಂಬ ಸಮೇತ ವೀಕ್ಷಣೆ ಮಾಡಬಹುದಾದ ಹಾಗೂ ಹಾಸನದ ನಿವಾಸಿ ಮಡೆನೂರು ಮನು ನಾಯಕನಾಗಿ ಅಭಿನಯಿಸಿರುವ ‘ಕೇದಾರ್ ನಾಥ್ ಕುರಿ ಫಾರಂ’ ಕನ್ನಡ ಚಲನಚಿತ್ರವು ಸೆ.೨೭ ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಲನಚಿತ್ರದ ನಿರ್ದೇಶಕ ಶ್ರೀನಿವಾಸ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಈ ಚಿತ್ರಕ್ಕೆ ಭರ್ಜರಿ ಚಿತ್ರದ ಚೇತನ್ ಸಾಹಿತ್ಯ ನೀಡಿದ್ದು, ಸಂತೋಷ್ ವೆಂಕಿ ಗಾಯಕರಾಗಿದ್ದಾರೆ. ಛಾಯಾಗ್ರಹಣ ರಾಕೇಶ್ ನಿರ್ವಹಿಸಿದ್ದು, ಕ್ಯಾಮರ ಮೆನ್ ಏಳು ಕೋಟೆ ಚಂದ್ರು, ಕಥೆ, ಡೈಲಾಗ್, ಸಹ ನಿರ್ದೇಶನವನ್ನು ರಾಜೇಶ್ ಸಾಲುಂಡಿ ನಿರ್ವಹಿಸಿದ್ದಾರೆ ಎಂದು ವಿವರಿಸಿದರು.

ಹಾಸ್ಯ ಕಲಾವಿದರಾದ ಟೆನ್ನಿಸ್ ಕೃಷ್ಣ ಚಿತ್ರದ ನಾಯಕಿಯ ತಂದೆಯ ಪಾತ್ರ ನಿರ್ವಹಿಸಿದ್ದು, ಎಲ್ಲರ ಮನ ಗೆಲ್ಲುವ ಸೆಂಟಿಮೆಂಟ್ ಪಾತ್ರ ನಿರ್ವಹಿಸಿದ್ದಾರೆ. ಶಿಬಾನಿ ಮೊದಲ ಬಾರಿಗೆ ನಾಯಕಿಯಾಗಿ ಪಾತ್ರ ನಿರ್ವಹಿಸಿದ್ದಾರೆ ಎಂದರು.

ಗ್ರಾಮೀಣ ಭಾಗದ ಹಿನ್ನೆಲೆ ಹೊಂದಿರುವ ಚಿತ್ರವು ಉತ್ತಮವಾಗಿ ಮೂಡಿ ಬಂದಿದೆ. ನಾಯಕ ನಟನು ಒಂದು ಕುರಿ ಫಾರಂನಲ್ಲಿದ್ದು, ನಂತರ ನಡೆಯುವ ಹಾಸ್ಯಮಯ ಘಟನೆಗಳು ಸಂಭವಿಸುತ್ತದೆ. ಈ ಚಿತ್ರದಲ್ಲಿ ಒಂದು ಹಾಡು ಮತ್ತು ಒಂದು ಫೈಟ್ ಇದೆ. ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಚಿತ್ರದ ಪ್ರಾರಂಭದಿಂದ ಕೊನೆಯವರೆಗೂ ಬೇಸರ ತರದೆ ಕೊಟ್ಟ ಹಣಕ್ಕೆ ಮನರಂಜನೆ ನೀಡಲಿದೆ ಎಂದು ತಿಳಿಸಿದರು.

ನಾಯಕ ನಟ ಮಡೆನೂರು ಮನು ಮಾತನಾಡಿ, ‘ಕೇದಾರ್ ನಾಥ್ ಕುರಿ ಫಾರಂ’ ಚಿತ್ರದಲ್ಲಿ ಶೇಕಡ ೮೦ ಭಾಗ ಹಾಸ್ಯ ಕಂಡು ಬಂದರೆ ಉಳಿದ ೨೦ ಭಾಗ ಕಥೆಯನ್ನು ಹೇಳುತ್ತದೆ. ಈ ಚಿತ್ರದಲ್ಲಿ ಉತ್ತಮವಾದ ಕಥೆಯಿದ್ದು, ಇದರಲ್ಲಿ ಮುಖ್ಯವಾಗಿ ಹಾಸ್ಯಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ ಎಂದು ತಿಳಿಸಿದರು.

ಹಿರಿಯ ನಟ ಹಾಗೂ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಮಾತನಾಡಿ, ಇದುವರೆಗೂ ನೀವು ಸಿನಿಮಾದಲ್ಲಿ ನನ್ನನ್ನು ಹಾಸ್ಯ ನಟನಾಗಿ ನೋಡಿದ್ದು, ‘ಕೇದಾರ್ ನಾಥ್ ಕುರಿ ಫಾರಂ’ ಚಿತ್ರದಲ್ಲಿ ವಿಭಿನ್ನ ಪಾತ್ರವಹಿಸಿದ್ದೇನೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು, ಎಲ್ಲಾರು ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಣೆ ಮಾಡುವಂತೆ ಮನವಿ ಮಾಡಿದರು.

ನಿರ್ಮಾಪಕ ಕೆ.ಎಮ್.ನಟರಾಜು, ಸಿದ್ದು ಮಂಡ್ಯ, ನಟಿ ಶಿವಾನಿ ಅಮರ್, ಹರಿಣಿ ಇತರರು ಹಾಜರಿದ್ದರು.