ರಾಮನಗರ: ಜಿಲ್ಲಾ ಕೇಂದ್ರ ರಾಮನಗರದ ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ನಗರಸಭೆ ಬದ್ಧವಾಗಿದ್ದು, ಹಂತ, ಹಂತವಾಗಿ ಎಲ್ಲಾ ಅನುಕೂಲಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತಿದ್ದೇವೆ. ಇದೀಗ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ನಗರಸಭೆಗೆ ಮಂಜೂರಾಗಿರುವ 12.31 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ನಗರದ ವಿವಿಧ ವಾರ್ಡುಗಳಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು, ಯಾರಬ್ ನಗರ ದೊಡ್ಡ ಪ್ರದೇಶ ಅಲ್ಲಿ ಸಾಕಷ್ಟು ಅಭಿವೃದ್ದಿಯಾಗಬೇಕಾಗಿದೆ. ಆದರೂ ತೀರಾ ಅವಶ್ಯಕವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ ಎಂದರು.ದೊಡ್ಡ ವಾರ್ಡುಳಾದ ಟಿಪ್ಪುನಗರ, ಮೆಹಬೂಬನಗರ ಹಾಗೂ 1, 2, 27 ಮತ್ತು 31ನೇ ವಾರ್ಡುಗಳಲ್ಲೂ ಮೂಲ ಸೌಕರ್ಯಗಳ ಕೊರತೆ ಇದೆ. ಮೂಲ ಸೌಕರ್ಯಗಳನ್ನು ಕಲ್ಪಿಸಲು ನಗರಸಭೆ ಬದ್ಧವಾಗಿದೆ. ಹಂತ, ಹಂತವಾಗಿ ಎಲ್ಲಾ ಅನುಕೂಲಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತಿದ್ದೇವೆ ಎಂದು ಹೇಳಿದರು.
ನಗರಸಭೆ ಮುಂಭಾಗದಿಂದ ಹಾದು ಹೋಗಿರುವ ರೈಲು ನಿಲ್ದಾಣದ ರಸ್ತೆ ಅಭಿವೃದ್ದಿಗೆ ಅಮೃತ ನಗರೋತ್ಥಾನ ನಿಧಿಯಿಂದ 220 ಲಕ್ಷ ರು. ವೆಚ್ಚದಲ್ಲಿ ಅಭಿವೃದ್ದಿ ಮಾಡಲು ನಿರ್ಧರಿಸಲಾಗಿದೆ. ಶೇ 17.15 ಎಸ್.ಸಿ.ಎಸ್.ಪಿ ಯೋಜನೆಯಡಿ 60.76 ಲಕ್ಷ ರು ವೆಚ್ಚದಲ್ಲಿ ಅಂಬೇಡ್ಕರ್ ನಗರದ 3ನೇ ಕ್ರಾಸ್ ನಲ್ಲಿ ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಎಸ್.ಸಿ.ಎಸ್.ಪಿ ಸಮುದಾಯ ಸಂಬಂಧಿತ ಕಾರ್ಯಕ್ರಮ ಮೂಲಕ 124.62 ಲಕ್ಷ ರು.ವೆಚ್ಚದಲ್ಲಿ ವಾರ್ಡ್ 3, 4, 5, 31, ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಎಸ್.ಸಿ.ಎಸ್.ಪಿ ಯೋಜನೆಯಡಿ ಒಟ್ಟು 185.38 ಲಕ್ಷ ರು. ವೆಚ್ಚವಾಗುತ್ತಿದೆ ಎಂದರು.ಟಿಎಸ್‌ಪಿಯೋಜನೆಯಡಿ ಪೌರಕಾರ್ಮಿಕರ ಕಲ್ಯಾಣ ಕಾಮಗಾರಿಗಾಗಿ ಕಾಯಿಸೊಪ್ಪಿನ ಬೀದಿಯ ಸ್ಲಂ ಬೋರ್ಡಿನಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ 30.81 ಲಕ್ಷ ರು. , 26ನೇ ವಾರ್ಡಿನಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 33.80 ಲಕ್ಷ ಸೇರಿ ಒಟ್ಟು 64.61 ಲಕ್ಷ ರೂ ಬಳಕೆಯಾಗಲಿದೆ ಎಂದು ತಿಳಿಸಿದರು.
ಇತರ ಬಡಜನರ ಕಲ್ಯಾಣಕ್ಕಾಗಿ ಶೇ7.25 ಯೋಜನೆಯಡಿ 19.76 ಲಕ್ಷ, ವಿಕಲಚೇತನರ ಕಲ್ಯಾಣಕ್ಕಾಗಿ ಶೇ 5 ಯೋಜನೆಯಡಿ 70 ಲಕ್ಷ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು. ವಿಕಲಚೇತನರಿಗಾಗಿ ಅಂಬೇಡ್ಕರ್ ಭವನದಲ್ಲಿ ಲಿಫ್ಟ್ ಅಳವಡಿಸುವುದು ಮತ್ತು ವಿಕಲಚೇತನ ಸ್ನೇಹಿ ಶೌಚಾಲಯ ನಿಮರ್ಾಣ ಮತ್ತು ಎರಡನೇ ಮಹಡಿಯಲ್ಲಿ ವಿಕಲಚೇತನರೇ ನಡೆಸಲು ಕಫೆಟೇರಿಯಾ ನಿಮರ್ಿಸುವ ಕಾಮಗಾರಿ ಒಳಗೊಂಡಿದೆ ಎಂದು ಅಧ್ಯಕ್ಷ ಕೆ.ಶೇಷಾದ್ರಿ ವಿವರಿಸಿದರು.
ಅಮೃತ ನಿಧಿ ಯೋಜನೆಯಡಿ ಮಂಜೂರಾಗಿರುವ ಅನುದಾನದಲ್ಲಿ ಸಾಮಾನ್ಯ (ಇತರೆ) ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಿಗೆ 892.11 ಲಕ್ಷ ರು.ಗಳು ವೆಚ್ಚವಾಗುತ್ತಿದೆ. ಪ್ರಮುಖ ರಸ್ತೆಗಳಾದ ವಾಟರ್ ಟ್ಯಾಂಕ್ ವೃತ್ತದಿಂದ ಕಾಮಣ್ಣನಗುಡಿ ವೃತ್ತದವರೆಗಿನ ಎಂ.ಜಿ.ರಸ್ತೆ, ಬೆಂಗಳೂರು ಮೈಸೂರು ರಸ್ತೆಯ ಶ್ರೀ ಆಂಜನೇಯಸ್ವಾಮಿ ಆರ್ಚ್ ಬಳಿಯಿಂದ ಶ್ರೀರಾಮ ದೇವರ ಬೆಟ್ಟದ ರಸ್ತೆ, 30ನೇ ವಾರ್ಡಿನಲ್ಲಿ ಪೂರ್ವಿಕಾ ಮೊಬೈಲ್ ಬಳಿಯಿಂದ ಐಜೂರು ಗುಡ್ಡೆಯವರೆಗಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಕೆ.ಶೇಷಾದ್ರಿ ಹೇಳಿದರು.
ಈ ವೇಳೆ ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಆರಿಫ್, ಸದಸ್ಯರಾದ ಅಜ್ಮತ್, ಪಾರ್ವತಮ್ಮ, ಮಹಾಲಕ್ಷ್ಮಿ, ಪವಿತ್ರ, ವಿಜಯಕುಮಾರಿ, ಮಂಜುನಾಥ್, ಸಮದ್, ಗ್ಯಾಬ್ರಿಯಲ್, ನಿಜಾಂ ಷರೀಫ್, ಪದ್ಮಶ್ರೀ, ನಾಗಮ್ಮ, ಮಂಜುಳಾ, ಆಯಿಷಾ ಖಾನಂ, ಮುತ್ತುರಾಜ್, ಗೋವಿಂದರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್, ಮುಖಂಡರಾದ ಷಫಿ, ಆರ್.ದೇವರಾಜ್, ಪೌರಾಯುಕ್ತ ಡಾ.ಜಯಣ್ಣ, ಎಇಇ ವಿಶ್ವನಾಥ್, ಎಂಜಿನಿಯರ್ ಗಳಾದ ನಿರ್ಮಲಾ, ಪವಿತ್ರ ಮುಂತಾದವರು ಹಾಜರಿದ್ದರು.18ಕೆಆರ್ ಎಂಎನ್ 1.ಜೆಪಿಜಿ
ರಾಮನಗರದಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ ಅಭಿವೃದ್ದಿ ಕಾಮಗಾರಿಗಳಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಭೂಮಿ ಪೂಜೆ ನೆರವೇರಿಸಿದರು.