ನರಗುಂದ ಬಾಬಾಸಾಹೇಬ ಅರಮನೆ ಕಟ್ಟಡ ಶಿಥಿಲ!

| Published : Apr 02 2025, 01:02 AM IST

ನರಗುಂದ ಬಾಬಾಸಾಹೇಬ ಅರಮನೆ ಕಟ್ಟಡ ಶಿಥಿಲ!
Share this Article
  • FB
  • TW
  • Linkdin
  • Email

ಸಾರಾಂಶ

ನರಗುಂದ ಅರಸ ಬಾಬಾಸಾಹೇಬ ಭಾವೆ ಅವರ ಅರಮನೆ ಕಟ್ಟಡವು ಅವಸಾನದ ಹಂತಕ್ಕೆ ತಲುಪಿದೆ. ಅರಮನೆ ಕಟ್ಟಡದ ಸುತ್ತಲಿನ ಗೋಡೆಯಲ್ಲಿ ಆಲದ ಮರ ಮತ್ತು ಅತ್ತಿ ಗಿಡಗಳು ಬೆಳೆದು ಎಲ್ಲೆಂದರಲ್ಲಿ ದೊಡ್ಡ ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ. ಸಂರಕ್ಷಿಸಬೇಕೆಂಬ ಇಚ್ಛಿ ಯಾರಲ್ಲೂ ಕಾಣದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.

ಎಸ್.ಜಿ. ತೆಗ್ಗಿನಮನಿಕನ್ನಡಪ್ರಭ ವಾರ್ತೆ ನರಗುಂದನರಗುಂದ ಅರಸ ಬಾಬಾಸಾಹೇಬ ಭಾವೆ ಅವರ ಅರಮನೆ ಕಟ್ಟಡವು ಅವಸಾನದ ಹಂತಕ್ಕೆ ತಲುಪಿದೆ. ಅರಮನೆ ಕಟ್ಟಡದ ಸುತ್ತಲಿನ ಗೋಡೆಯಲ್ಲಿ ಆಲದ ಮರ ಮತ್ತು ಅತ್ತಿ ಗಿಡಗಳು ಬೆಳೆದು ಎಲ್ಲೆಂದರಲ್ಲಿ ದೊಡ್ಡ ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ. ಸಂರಕ್ಷಿಸಬೇಕೆಂಬ ಇಚ್ಛಿ ಯಾರಲ್ಲೂ ಕಾಣದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.

ಅರಮನೆ ಕಟ್ಟಡದಲ್ಲಿ ಬಾಬಾಸಾಹೇಬ ಅವರ ಆಡಳಿತದಲ್ಲಿನ ವರ್ಣರಂಜಿತ ಚಿತ್ರಗಳಿವೆ. ಎರಡು ಶತಮಾನಗಳ ಹಿಂದಿನ ಕತ್ತಿ, ಖಡ್ಗಗಳು ಸೇರಿದಂತೆ ಅನೇಕ ಶಸ್ತ್ರಗಳಿವೆ. ಈ ಐತಿಹಾಸಿಕ ಕುರುಹುಗಳನ್ನು ಪುರಸಭೆ ಅಧಿಕಾರಿಗಳೇ ಸಂರಕ್ಷಣೆ ಮಾಡುತ್ತಿದ್ದಾರೆ. ಈಗಾಗಲೇ ಅರಮನೆಯ ಅರ್ಧ ಕಟ್ಟಡವನ್ನು ಕೆಲವು ದಶಕಗಳಿಂದ ಪುರಸಭೆಯ ಕಾರ್ಯಾಲಯವನ್ನಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಪುರಸಭೆಯು ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ ಈ ಅರಮನೆಯ ಸಂರಕ್ಷಣಾ ಹೊಣೆಗಾರಿಕೆ ಯಾರದ್ದು ಎಂಬ ಪ್ರಶ್ನೆ ಮೂಡುತ್ತಿದೆ.ಅರಮನೆ ಅನೇಕ ಸಂಸ್ಥೆಗಳಿಗೆ ಅನುಕೂಲ:ಅವಸಾನದ ಅಂಚಿನಲ್ಲಿರುವ ಸದ್ಯದ ಇನ್ನುಳಿದರ್ಧ ಕಟ್ಟಡದಲ್ಲಿ ನಿರ್ಗತಿಕರ ವೃದ್ಧಾಶ್ರಮ ಇದೆ. ಇದಲ್ಲದೇ ಅನೇಕ ಸಂಸ್ಥೆಗಳಿಗೆ ಅರಮನೆ ಕಟ್ಟಡವು ಆಶ್ರಯವನ್ನು ನೀಡಿದೆ. 1980ರ ನರಗುಂದ ರೈತ ಬಂಡಾಯ ಸಂದರ್ಭದಲ್ಲಿ ಪೊಲೀಸ್ ಠಾಣೆ ಇದೇ ಕಟ್ಟಡದಲ್ಲಿತ್ತು. ನಂತರ ಪೊಲೀಸ್ ಠಾಣೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡ ಮೇಲೆ ಸರಕಾರಿ ಬಾಲಕಿಯರ ಪ್ರೌಢಶಾಲೆಗೆ ಆಶ್ರಯ ನೀಡಿತು. ಅದೇ ರೀತಿಯಾಗಿ ಸರಕಾರಿ ಹೆಣ್ಣುಮಕ್ಕಳ ಶಾಲೆ, ಮೊರಾರ್ಜಿ ವಸತಿ ಶಾಲೆ, ಗ್ರಾಮ ಲೆಕ್ಕಾಧಿಕಾರಿ ಕಚೇರಿ ಮತ್ತು ಚುನಾವಣಾ ಸಂದರ್ಭದಲ್ಲಿಯೂ ಸದ್ಬಳಕೆಯಾಗಿದೆ. ಅರಮನೆ ಆವರಣದ ಮುಂಭಾಗದಲ್ಲಿ ಬಾಬಾಸಾಹೇಬ ಭಾವೆ ಅವರ ಪುತ್ಥಳಿ ಇದೆ.ಸೋರುತ್ತಿದೆ ಅರಮನೆ: ಇಷ್ಟೆಲ್ಲ ಸಂಸ್ಥೆಗಳಿಗೆ ಆಶ್ರಯ ನೀಡಿದ ಈ ಅರಮನೆ ಇವತ್ತು ಅವಸಾನದ ಅಂಚಿನಲ್ಲಿದೆ. ಮಳೆಗಾಲದಲ್ಲಿ ಸಂಪೂರ್ಣ ಸೋರುತ್ತಿದೆ. ಅರಮನೆ ಸುತ್ತಲಿನ ಗೋಡೆಯೊಳಗೆ ಆಲದ ಗಿಡ ಹಾಗೂ ಅತ್ತಿ ಮರಗಳು ಗೋಡೆಯನ್ನು ಸೀಳಿಕೊಂಡು ಬೆಳೆಯುತ್ತಿವೆ. ಗೋಡೆಗಳು ಬಿರುಕು ಬಿಡುತ್ತಿವೆ. ಅರಮನೆ ಕಟ್ಟಡವನ್ನು ಸಂರಕ್ಷಿಸಬೇಕೆಂಬ ಜವಾಬ್ದಾರಿ ಯಾವ ಇಲಾಖೆಗೂ ಇಲ್ಲದಂತಾಗಿದೆ. ಅರಮನೆ ಆಸ್ತಿಪಾಸ್ತಿಯೂ ಸಹ ಯಾರ್ಯಾರದೋ ಪಾಲು ಆಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇಷ್ಟೊಂದು ನಿರ್ಲಕ್ಷ್ಯತನ ಸಾಮಾಜಿಕ ಚಿಂತಕರನ್ನು ಆಕ್ರೋಶ ವ್ಯಕ್ತಪಡಿಸಿದೆ.ಈಗ ಸದ್ಯ ಆ ಕಟ್ಟಡದ ಅರ್ಧ ಭಾಗದಲ್ಲಿ ಅನೇಕ ದಶಕಗಳಿಂದ ಪುರಸಭೆ ಕಾರ್ಯಾಲಯವಿದೆ. ಮತ್ತು ಈಗ ಸದ್ಯ ಸ್ನೇಹ ಸಂಜೀವಿನಿ ಸಹಯೋಗದಲ್ಲಿ ನಿರ್ಗತಿಕರ ವೃದ್ಧಾಶ್ರಮ ನಡೆಯುತ್ತಿದೆ. ಈ ವೃದ್ಧಾಶ್ರಮದವರಿಗೆ ಈ ಅರಮನೆ ಕಟ್ಟಡದ ಸಂರಕ್ಷಣೆ ಅಸಾಧ್ಯವಾದ ಮಾತಾಗಿದೆ. ಆದ್ದರಿಂದ ಇದರ ಸಂರಕ್ಷಣೆಯನ್ನು ಪುರಸಭೆಯವರೇ ಮಾಡಬೇಕಾಗಿದೆ ಎಂದು ಪಟ್ಟಣದ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಆದರೆ ಪುರಸಭೆ ಅವರು ಸಂಬಂಧವಿಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ.

1857ರ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾಪುರುಷರಲ್ಲಿ ಬಾಬಾಸಾಹೇಬರು ಒಬ್ಬರಾಗಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಿಗೆ ಆಸರೆ ನೀಡಿದ್ದ ಅರಸ ಬಾಬಾಸಾಹೇಬ ಭಾವೆ ಅವರ ಸಂಸ್ಥಾನದ ಕಟ್ಟಡಗಳ ಮೇಲೆ ಗಿಡಗಂಟಿ ಬೆಳೆದು ಕಟ್ಟಡವನ್ನೇ ನಾಶ ಮಾಡುತ್ತಿವೆ. ಐತಿಹಾಸಿಕ ಕಟ್ಟಡಗಳನ್ನು ನಿರ್ಲಕ್ಷ್ಯ ಮಾಡದೇ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಮೀನಾಜಿ ಜೋರಾಪೂರ ಹೇಳಿದರು.

ಅರಮನೆ ಕಟ್ಟಡವನ್ನು ವೃದ್ಧಾಶ್ರಮದ ಎನ್‌ಜಿಓ ಸಂಸ್ಥೆಯವರಿಗೆ ನೀಡಲಾಗಿದೆ. ಅವರೇ ಅದರ ಸಂರಕ್ಷಣಾದಾರರು ಆಗಿದ್ದಾರೆ. ಅಲ್ಲಿ ಯಾರು ಇರುತ್ತಾರೋ ಅವರೇ ಅದರ ಸಂರಕ್ಷಣೆ ಮಾಡಬೇಕು. ಈ ಹಿಂದಿನ ವ್ಯವಸ್ಥೆ ಇದೇ ರೀತಿ ಆಗಿತ್ತು ಎಂದು ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದರಿ ಹೇಳಿದರು.