ಪರಿಸರ ಸಂರಕ್ಷಣೆಯ ಅಗತ್ಯತೆ ಈಗ ಹೆಚ್ಚಿದೆ: ನ್ಯಾಯಾಧೀಶೆ ಆಯಿಷಾಬಿ

| Published : Jun 06 2024, 12:32 AM IST

ಪರಿಸರ ಸಂರಕ್ಷಣೆಯ ಅಗತ್ಯತೆ ಈಗ ಹೆಚ್ಚಿದೆ: ನ್ಯಾಯಾಧೀಶೆ ಆಯಿಷಾಬಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರು ಪರಿಸರ ಉಳಿಸಿ, ಬೆಳೆಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಕುಕನೂರು

ಪ್ರತಿಯೊಬ್ಬರು ಪರಿಸರ ಉಳಿಸಿ, ಬೆಳೆಸಬೇಕಾಗಿದೆ ಎಂದು ಸಿವಿಲ್ ನ್ಯಾಯಾಧೀಶೆ ಆಯಿಷಾಬಿ ಪಿ. ಮಜೀದ್ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಪರಿಸರ ಸಂರಕ್ಷಣೆ ನಮ್ಮೇಲ್ಲರ ಹೊಣೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ತಮ್ಮ ತಮ್ಮ ಮನೆಯ ಮುಂದೆ ಸಸಿ ನೆಟ್ಟಾಗ ಮಾತ್ರ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮಾಡುವ ಅಗತ್ಯತೆ ಈಗ ಹೆಚ್ಚಿದೆ ಎಂದರು.

ಅರಣ್ಯ ಇಲಾಖೆಯ ಆರ್‌ಎಫ್‌ಓ ಬಸವರಾಜ, ಯಲಬುರ್ಗಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಈರಣ್ಣ ಕೋಳೂರು, ಮಲ್ಲನಗೌಡ, ರವಿ ಹುಣಸಿಮರದ, ಎಸ್.ಎಸ್. ಮಾದಿನೂರ, ಎಸ್.ಸಿ. ಗದಗ, ಸಂಗಮೇಶ ಅಂಗಡಿ, ಬಸವರಾಜ ಜಂಗಲಿ, ಆರ್.ಜಿ. ಕುಷ್ಟಗಿ, ಎ.ಬಿ. ಬೊರಣ್ಣನವರ, ಐ.ಆರ್. ಕೆಂಚಮ್ಮನವರ, ಎಂ.ಎಸ್. ಪಾಟೀಲ, ಎ.ಎಂ. ಪಾಟೀಲ, ರಮೇಶ ಗಜಕೋಶ, ಜಿ.ವಿ. ಬಳಗೇರಿ, ವಿಜಯಲಕ್ಷ್ಮೀ ಎನ್., ಶಶಿಧರ ಶ್ಯಾಗೋಟಿ, ಎಚ್.ಎ. ನದಾಫ್, ನ್ಯಾಯಾಲಯದ ಸಿಬ್ಬಂದಿ ನಾಗನಗೌಡ ಪಾಟೀಲ, ಉಮೇಶ, ವಿಮಲಾ, ಶಶಿಕಲಾ, ರಾಘವೇಂದ್ರ ಕೋಳಿಹಾಳ, ವಿನಾಯಕ ಇದ್ದರು.

ಕುಕನೂರು, ಯಲಬುರ್ಗಾ ತಾಲೂಕಿನಲ್ಲಿ 7 ಜನ ಕಾವಲುಗಾರರ ಶ್ರಮ ಅನನ್ಯ:

ರಸ್ತೆ ಬದಿ ಅರಣ್ಯ ಇಲಾಖೆ ನೆಡುವ ಗಿಡಗಳ ಸಂರಕ್ಷಣೆಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೆಡುತೋಪು ಅರಣ್ಯ ಕಾವಲುಗಾರರು ಕಾಳಜಿ ವಹಿಸಿದ ಪರಿಣಾಮ ಗಿಡಗಳು ಬೆಳೆದು ಹೆಮ್ಮರವಾಗುತ್ತಿವೆ.

ಕುಕನೂರು, ಯಲಬುರ್ಗಾ ತಾಲೂಕಿನಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ 7 ಜನ ಅರಣ್ಯ ಕಾವಲುಗಾರರು ನಿತ್ಯ ರಸ್ತೆ ಬದಿಯ ಇರುವ ಗಿಡಗಳನ್ನು ಸಂರಕ್ಷಣೆ ಮಾಡುವಲ್ಲಿ ನಿರತರಾಗಿರುತ್ತಾರೆ. ಕುಕನೂರು ಹಾಗು ಯಲಬುರ್ಗಾ ತಾಲೂಕಿನ ರಸ್ತೆಗಳೆಲ್ಲ ಹಸಿರಾಗಿದ್ದು, ಇದರಲ್ಲಿ ಅರಣ್ಯ ಕಾವಲುಗಾರರು ಶ್ರಮವೇ ಹೆಚ್ಚಿದೆ. ಕುರಿ, ಮೇಕೆ, ದನಗಳು ಗಿಡಗಳನ್ನು ತಿನ್ನದಂತೆ ಗಿಡಗಳಿಗೆ ಮುಳ್ಳು ಕಡಿದುಕೊಂಡು ಬಂದು ಕಟ್ಟಿ, ಆ ಮುಳ್ಳನ್ನು ಬೀಗಿಯಾಗಿ ಕಟ್ಟಿ ಗಿಡಗಳ ರಕ್ಷಣೆಗೆ ಮುಂದಾಗುತ್ತಾರೆ. ಇದರಿಂದ ಗಿಡಗಳ ಬೆಳವಣಿಗೆ ಆಗುತ್ತಿದೆ. ಕುಕನೂರು, ಯಲಬುರ್ಗಾ ತಾಲೂಕಿನ ಬಹುತೇಕ ರಸ್ತೆಗಳ ಬದಿಯಲ್ಲಿ ಅನತಿ ಎತ್ತರಕ್ಕೆ ಬೆಳೆದು ನಿಂತಿರುವ ಗಿಡಗಳು ಪಾದಾಚಾರಿಗಳು, ದ್ವಿಚಕ್ರವಾಹನ ಚಾಲಕರಿಗೆ ತಂಪು ನೀಡುತ್ತಿವೆ. ರೈತರ ವಿರೋಧ, ಕುರಿಗಾಹಿಗಳ ಕಾಟ ಸೇರಿ ಹಲವು ಸಮಸ್ಯೆಗಳ ಮಧ್ಯೆಯೂ ಗ್ರಾಮೀಣದ ವಿವಿಧ ರಸ್ತೆ ಬದಿಯಲ್ಲಿ ಆರ್‌ಎಸ್‌ಪಿ(ರೋಡ್ ಸೈಡ್ ಪ್ಲಾಂಟೇಶನ್) ಮತ್ತು ಜಿಯುಎ(ಗ್ರೀನಿಂಗ್ ಅರ್ಬನ್ ಏರಿಯಾ) ಯೋಜನೆಯಡಿಯಲ್ಲಿ ಅರಣ್ಯ ಇಲಾಖೆಯ ಕಾವಲುಗಾರರ ಮುತುವರ್ಜಿಯಿಂದ ಸಾವಿರಾರು ಗಿಡಗಳು ಮೈದೆಳೆದು ಬೆಳೆದು ನಿಂತಿರುವ ದೃಶ್ಯ ಕಾಣಬಹುದು.