ರಟ್ಟೀಹಳ್ಳಿಯಲ್ಲಿ ಡಿ. 15ರಂದು ನೂತನ ಸಂಚಾರಿ ಕೋರ್ಟ್‌ ಉದ್ಘಾಟನೆ

| Published : Dec 05 2024, 12:30 AM IST

ರಟ್ಟೀಹಳ್ಳಿಯಲ್ಲಿ ಡಿ. 15ರಂದು ನೂತನ ಸಂಚಾರಿ ಕೋರ್ಟ್‌ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಟ್ಟೀಹಳ್ಳಿ ಪಟ್ಟಣದ ಮಾಸೂರ ರಸ್ತೆಯಲ್ಲಿರುವ ಬಹು ನಿರೀಕ್ಷಿತ ನೂತನ ಸಂಚಾರಿ ದಿವಾಣಿ ಜೆಎಂಎಫ್‌ಸಿ ನ್ಯಾಯಾಲಯದ ಉದ್ಘಾಟನೆ ಡಿ. 15ರಂದು ಲೋಕಾರ್ಪಣೆಗೊಳಿಸಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ರಟ್ಟೀಹಳ್ಳಿ: ಪಟ್ಟಣದ ಮಾಸೂರ ರಸ್ತೆಯಲ್ಲಿರುವ ಬಹು ನಿರೀಕ್ಷಿತ ನೂತನ ಸಂಚಾರಿ ದಿವಾಣಿ ಜೆಎಂಎಫ್‌ಸಿ ನ್ಯಾಯಾಲಯದ ಉದ್ಘಾಟನೆ ಡಿ. 15ರಂದು ಲೋಕಾರ್ಪಣೆಗೊಳಿಸಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೆಯ ತೋಟಗಾರಿಕೆ ಕಟ್ಟಡದಲ್ಲಿ ₹30 ಲಕ್ಷ ವೆಚ್ಚ ಹಾಗೂ ₹10 ಲಕ್ಷ ಹೆಚ್ಚುವರಿ ಅನುದಾನದಲ್ಲಿ ಕಟ್ಟಡ ನವೀಕರಣದ ಕಾಮಗಾರಿ ಪೂರ್ಣಗೊಂಡಿದ್ದು, ಬಹುತೇಕ ಎಲ್ಲ ಕಾಮಗಾರಿ ಮುಗಿದಿದೆ. ಡಿ. 15ರಂದು ಲೋಕಾರ್ಪಣೆಗೋಳಿಸಲಾಗುವುದು. ಅಂದು ಹೈಕೋರ್ಟ್‌ ನ್ಯಾಯಾಧೀಶ ಕೃಷ್ಣ ದೀಕ್ಷಿತ್ ಹಾಗೂ ಹಾವೇರಿ ಜಿಲ್ಲಾ ನ್ಯಾಯಾಲಯದ ಉಸ್ತುವಾರಿ, ನ್ಯಾಯಾಧೀಶ ಹೇಮಂತ ಚಂದನಗೌಡ ಪಾಲ್ಗೊಳ್ಳುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಕಾನೂನು ಸಚಿವ ಎಚ್.ಕೆ. ಪಾಟೀಲ್, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಸ್ಥಳೀಯ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.

ನೂತನ ನ್ಯಾಯಾಲಯ ಹಾಗೂ ನವೀಕೃತ ಕಟ್ಟಡವನ್ನು ಹಾವೇರಿ ಜಿಲ್ಲಾ ನ್ಯಾಯಾಲಯಗಳ ಉಸ್ತುವಾರಿ ಹೇಮಂತ ಚಂದನಗೌಡ ಉದ್ಘಾಟಿಸಲಿದ್ದಾರೆ. ನೂತನ ನ್ಯಾಯವಾದಿಗಳ ಸಂಘವನ್ನು ಕೃಷ್ಣ ದೀಕ್ಷಿತ ಉದ್ಘಾಟಿಸುವರು ಹಾಗೂ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ವಕೀಲರ ಸಂಘದ ಅಧ್ಯಕ್ಷರು, ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಮಾಜಿ ಶಾಸಕ ಹಾಗೂ ವಕೀಲರ ಸಂಘದ ನೂತನ ಅಧ್ಯಕ್ಷ ಬಿ.ಎಚ್. ಬನ್ನಿಕೊಡ ಮಾತನಾಡಿ, ನೂತನ ತಾಲೂಕಿನಲ್ಲಿ ನೂತನ ಕೋರ್ಟ್‌ ಉದ್ಘಾಟನೆಯಾಗುತ್ತಿರುವುದು ಸಂತಸದ ವಿಷಯ. ಅನೇಕ ವರ್ಷಗಳ ಹೋರಾಟದ ಫಲವಾಗಿ ಡಿ. 15ರಂದು ನೂತನ ಕೋರ್ಟ್‌ ಉದ್ಘಾಟನೆಗೊಳ್ಳುತ್ತಿರುವುದು ತಾಲೂಕಿನ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.

ಅಂದು ಕೋರ್ಟ್‌ ಉದ್ಘಾಟನೆ ಬಳಿಕ ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.

ಹಿರೇಕೆರೂರು ಕೋರ್ಟ್‌ನಿಂದ ರಟ್ಟೀಹಳ್ಳಿ ನೂತನ ಕೋರ್ಟ್‌ಗೆ ಶೇ. 60ರಷ್ಟು ಪ್ರಕರಣಗಳು ವರ್ಗಾವಣೆಗೊಳ್ಳಲಿದೆ. ಪಟ್ಟಣದ ಕೆಇಬಿ ಎದುರಿನಲ್ಲಿ ಕೋರ್ಟ್‌ನ ಸ್ವಂತ ಕಟ್ಟಡಕ್ಕೆ 3 ಎಕರೆ 30 ಗುಂಟೆ ಜಾಗ ಮಂಜೂರಾಗಿದ್ದು, ಬಜೆಟ್‌ನಲ್ಲಿ ಅನುದಾನ ಮಂಜೂರಿಗಾಗಿ ಪ್ರಯತ್ನಿಸಲಾಗುವುದು ಎಂದರು.

ನೂತನ ವಕೀಲರದ ಸಂಘದ ಉಪಾಧ್ಯಕ್ಷ ಎಸ್.ವಿ. ತೊಗರ್ಸಿ, ಕಾರ್ಯದರ್ಶಿ ಮಾರುತಿ ಜೋಕನಾಳ, ಪಿ.ಡಿ ಬಸನಗೌಡ್ರ, ಎಸ್.ಎಸ್. ಪಾಟೀಲ್, ಬಿ.ಸಿ. ಪಾಟೀಲ್, ವಸಂತ ದ್ಯಾವಕ್ಕಳವರ, ಫಕೀರೇಶ ತುಮ್ಮಿನಕಟ್ಟಿ, ದೀಪಕ ತೊಗರ್ಸಿ, ಪ್ರಕಾಶ ಬಾರ್ಕಿ, ಸಂತೋಷ ಪಾಟೀಲ, ವಿ.ಆರ್. ದ್ರೌಪಕ್ಕನವರ, ಚಂದನಾ ಕಬ್ಬಿಣಕಂತಿಮಠ, ಪಿ.ಬಿ. ಗುಬ್ಬಿ, ತಹಸೀಲ್ದಾರ್‌ ಕೆ. ಗುರುಬಸವರಾಜ, ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ, ಪಿಡಬ್ಲ್ಯೂಡಿ ಅಧಿಕಾರಿ ಮಾಲತೇಶ ಕಲ್ಲಮ್ಮನವರ ಇದ್ದರು.