ಸಾರಾಂಶ
ಅಸ್ವಸ್ಥಗೊಂಡ ಯುವತಿ । ಕಾಲು ಜಾರಿ ವ್ಯಕ್ತಿಗೆ ಪೆಟ್ಟು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ದೇವಿರಮ್ಮ ಬೆಟ್ಟಕ್ಕೆ 2ನೇ ದಿನವಾದ ಸೋಮವಾರವೂ ನಿರೀಕ್ಷೆಗೂ ಮೀರಿ ಭಕ್ತ ಸಮೂಹ ಸೇರಿತ್ತು.
ಈ ಬಾರಿ ದೇವಿರಮ್ಮ ಬೆಟ್ಟ ಏರಲು 2 ದಿನ ಅವಕಾಶ ನೀಡಿದ್ದು, ಮೊದಲ ದಿನ ಸುಮಾರು 50 ಸಾವಿರ ಭಕ್ತರು ಬೆಟ್ಟ ಹತ್ತಿದ್ದರು. 2ನೇ ದಿನ ಸೋಮವಾರ ಈ ಸಂಖ್ಯೆ ಸ್ವಲ್ಪಮಟ್ಟಿಗೆ ಇಳಿಮುಖವಾಗಿತ್ತು.ಕಳೆದ ಒಂದು ವಾರದಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ಬೆಟ್ಟದಲ್ಲಿ ಸಣ್ಣದಾಗಿ ನಿರಂತರವಾಗಿ ನೀರು ಹರಿಯುತ್ತಿದೆ. ಥಂಡಿ ಗಾಳಿ, ದಟ್ಟ ಮೋಡ, ಕಾಲಿಟ್ಟರೆ ಜಾರುವ ಮಣ್ಣು ಇಂತಹ ಪ್ರತಿಕೂಲ ಹವಮಾನದಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆ ನಿರೀಕ್ಷೆಗೂ ಮೀರಿ ಭಕ್ತರು ಬೆಟ್ಟ ಏರಿದ್ದಾರೆ.
ಬೆಟ್ಟ ಹತ್ತಿ, ಇಳಿಯುವಾಗ ಯಾವುದೇ ರೀತಿ ಅವಘಡ ಸಂಭವಿಸದಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಬೆಟ್ಟದ ತುದಿವರೆಗೆ ಬ್ಯಾರಿಕೇಡ್ ನಿರ್ಮಿಸಿತ್ತು. ಅದನ್ನು ಹಿಡಿದು ಹತ್ತಲು ಹಾಗೂ ಇಳಿಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದರ ಜತೆಗೆ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕದಳ ಹಾಗೂ ಸ್ವಯಂ ಸೇವಕರನ್ನು ನಿಯೋಜನೆ ಮಾಡಲಾಗಿತ್ತು. ಅಲ್ಲಲ್ಲಿ ಹಗ್ಗದ ಸಹಾಯದಿಂದಲೂ ಹತ್ತಿ ಇಳಿಯುವ ವ್ಯವಸ್ಥೆ ಮಾಡಲಾಗಿತ್ತು.ಸೋಮವಾರ ಬೆಟ್ಟ ಹತ್ತುವ ವೇಳೆಯಲ್ಲಿ ಯುವತಿಯೋಬ್ಬಳು ಅಸ್ವಸ್ಥಗೊಂಡರೆ. ವ್ಯಕ್ತಿಯೋಬ್ಬರಿಗೆ ಕಾಲು ಜಾರಿ ಪೆಟ್ಟಾಗಿತ್ತು. ಇವರನ್ನು ಸ್ಥಳದಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಟ್ರೆಚ್ಚರ್ ಸಹಾಯದಿಂದ ಬೆಟ್ಟದಿಂದ ಕೆಳಗೆ ಕರೆ ತಂದು ಅಲ್ಲೆ ಇದ್ದ ಅಂಬುಲೆನ್ಸ್‌ನಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು.ಸಂಪ್ರದಾಯ: ಬರಿ ಗಾಲಿನಲ್ಲಿ ಬೆಟ್ಟ ಏರುವುದು, ಹರಕೆ ತೀರಿಸಲು ಸೌದೆ ಹೊರೆಯೊಂದಿಗೆ ಬೆಟ್ಟ ಹತ್ತುವುದು ದೇವಿರಮ್ಮ ಭಕ್ತರು ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಬೆಟ್ಟ ಏರುವ ಭಕ್ತರು, ಸೋಮವಾರ ಮನೆ ಮುಂಭಾಗದಲ್ಲಿ ಗೋವಿನ ಸಗಣಿಯಲ್ಲಿ ಬೆನಕನನ್ನು ಸಿದ್ಧಪಡಿಸಿ ಮನೆ ಮುಂದೆ ರಂಗೋಲಿ ಇಟ್ಟು ಸಂಜೆ ವೇಳೆಗೆ ಪೂಜೆ ಸಲ್ಲಿಸುತ್ತಾರೆ. ದೇವಿರಮ್ಮ ಬೆಟ್ಟದಲ್ಲಿ ಸಂಜೆ ಕಾಣುವ ದೀಪ ನೋಡಿ ಮನೆಯಿಂದಲೇ ಆರತಿ ಎತ್ತಿ ನಮಸ್ಕರಿಸುತ್ತಾರೆ. ಎಳ್ಳಿನ ದೀಪ ಸಿದ್ಧಪಡಿಸಿ ನಂತರದಲ್ಲಿ ಎಳ್ಳನ್ನು ಮನೆ ಮಂದಿಗೆ ಹಂಚುತ್ತಾರೆ. 20 ಕೆಸಿಕೆಎಂ 5ದೇವಿರಮ್ಮ ಬೆಟ್ಟ ಹತ್ತುವ ವೇಳೆಯಲ್ಲಿ ಅಸ್ವಸ್ಥರಾದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಟ್ರಕ್ಚರ್ ಸಹಾಯದಿಂದ ಕೆಳಗೆ ಕರೆ ತಂದರು.
-- 20 ಕೆಸಿಕೆಎಂ 6ದೇವಿರಮ್ಮ ಬೆಟ್ಟವನ್ನು ಸೋಮವಾರ ಕಂಡು ಬಂದ ಭಕ್ತ ಸಮೂಹ.