ಗರ್ಭಿಣಿಯರು, ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನೀಗಿಸಲು ಪೋಷಣ ಅಭಿಯಾನ ಸಹಕಾರಿ

| Published : Oct 06 2025, 01:01 AM IST

ಗರ್ಭಿಣಿಯರು, ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನೀಗಿಸಲು ಪೋಷಣ ಅಭಿಯಾನ ಸಹಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಪೋಷಣ ಅಭಿಯಾನ ಕಾರ್ಯಕ್ರಮವನ್ನು ೨೦೧೮ರಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರು ಚಾಲನೆ ನೀಡಿದರು. ಹದಿಹರೆಯ ಹುಡುಗಿಯರು, ಗರ್ಭಿಣಿಯರು, ತಾಯಂದಿರು, ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಣೇಶ ಲಿಂಗನಗೌಡ್ರ ಹೇಳಿದರು.

ಶಿಗ್ಗಾಂವಿ: ಪೋಷಣ ಅಭಿಯಾನ ಕಾರ್ಯಕ್ರಮವನ್ನು ೨೦೧೮ರಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರು ಚಾಲನೆ ನೀಡಿದರು. ಹದಿಹರೆಯ ಹುಡುಗಿಯರು, ಗರ್ಭಿಣಿಯರು, ತಾಯಂದಿರು, ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಣೇಶ ಲಿಂಗನಗೌಡ್ರ ಹೇಳಿದರು.ತಾಲೂಕಿನ ಬಂಕಾಪೂರ ಪಟ್ಟಣದ ಫಕೀರೇಶ್ವರ ಸಭಾ ಭವನದಲ್ಲಿ, ಶಿಶು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ನಡೆದ, ತಾಲೂಕು ಮಟ್ಟದ ಫೋಷಣ ಅಭಿಯಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಗರ್ಭಿಣಿ ಮಹಿಳೆಯರು ಸಮಯಕ್ಕೆ ಸರಿಯಾಗಿ ಊಟ, ಉಪಾಹಾರ, ಹಾಲು, ಹಣ್ಣು, ತರಕಾರಿ ಸೇವಿಸುವುದರ ಮೂಲಕ ಉತ್ತಮ ಆರೋಗ್ಯವಂತ ಮಕ್ಕಳ ಜನನಕ್ಕೆ ಕಾರಣರಾಗಬೇಕು ಎಂದು ಹೇಳಿದರು.

ಜಿಲ್ಲಾ ನಿರೂಪಣಾಧಿಕಾರಿ ಶೈಲಜಾ ಕುರಹಟ್ಟಿ ಮಾತನಾಡಿ, ಸದೃಢ ಸಮಾಜ ನಿರ್ಮಾಣಕ್ಕೆ ಆರೋಗ್ಯಯುತ ಮಕ್ಕಳ ಜನನದ ಅವಶ್ಯಕತೆ ಇದೆ. ತಾಯಿಯ ಎದೆಹಾಲು ಮಗುವಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲಿದೆ. ಸರ್ಕಾರ ಗರ್ಭೀಣಿ ಹಾಗೂ ಜನಿಸಿದ ಮಗುವಿನ ಆರೋಗ್ಯದ ಹಿತದೃಷ್ಟಿಯಿಂದ ಗರ್ಭಾವಸ್ಥೆ ಮೊದಲು, ಗರ್ಭಧರಿಸಿದಾಗಿನಿಂದ ಹೇರಿಗೆ ಆಗುವವರೆಗೆ ಹೆರಿಗೆ ಯಾದ ನಂತರವೂ ಮಗುವಿನ ಆರೋಗ್ಯಕ್ಕಾಗಿ ಉಚಿತ ತಪಾಸಣೆ ಔಷಧೋಪಚಾರ ನೀಡಲಾಗುತ್ತಿದೆ. ಬೆಳೆಯು ಮಕ್ಕಳಿಗೆ ಪೌಷ್ಟಿಕ ಆಹಾರ, ಆಹಾರ ಧಾನ್ಯವನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಇದರ ಸದುಪಯೋಗವನ್ನು ಗರ್ಭಿಣಿ ಹಾಗೂ ತಾಯಂದಿರು ಪಡೆದುಕೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ, ಮಕ್ಕಳಿಗೆ ಅನ್ನ ಪ್ರಾಸನ, ತೊಟ್ಟಿಲೋತ್ಸವ ಕಾರ್ಯಕ್ರಮ ಮಾಡಲಾಯಿತು. ಸಭೆಯ ನಂತರ ವಿವಿಧ ಭಕ್ಷ್ಯ ಭೋಜನವನ್ನು ಸವಿದು ಸಂಭ್ರಮಿಸಲಾಯಿತು.

ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಅಂಗನವಾಡಿ ಮೇಲ್ವಿಚಾರಕಿಯರಾದ ಸುಜಾತಾ ಜವಳಗೇರಿ, ವಿಜಯಲಕ್ಷ್ಮಿ ಅರಳಿ, ರಜನಿ, ಪುರಸಭೆ ಸದಸ್ಯರಾದ ನಾಸೀರಹಮ್ಮದ ಹಲ್ಡೆವಾಲೆ, ಮಂಜಪ್ಪ ತಳವಾರ, ಗೀತಾ ದೇಸಾಯಿ, ಗೀತಾ ಹಳವಳ್ಳಿ, ರಾಜು ಬಡ್ಡಿ, ರಮೇಶ ಸಿದ್ದುನವರ, ಸುರೇಶ ಕುರಗೋಡಿ, ಅಂಗನವಾಡಿ ಶಿಕ್ಷಕಿಯರಾದ ಎಸ್.ಎನ್. ರಾಟಿ, ಶಿಲ್ಪಾ ಮುರಿಗೆಣ್ಣವರ, ಮಂಜುಳಾ ಭಜಂತ್ರಿ, ರಾಣಿ ಬೇಂದ್ರೆ, ಗೌರಮ್ಮ ದೊಡ್ಡಮನಿ, ಲತಾ ಬನ್ನಿಕೊಪ್ಪ, ರೇಣುಕಾ ಅರಳಿ ಸೇರಿದಂತೆ ತಾಲೂಕಿನ ಅಂಗನವಾಡಿ ಶಿಕ್ಷಕಿ, ಸಹಾಯಕಿಯರು ಉಪಸ್ಥಿತರಿದ್ದರು.

ಮಾತೃ ಹೃದಯ ವೈಶಾಲ್ಯತೆ ಹೊಂದಿದ ಇಲಾಖೆ ಯಾವುದಾದರೂ ಇದ್ದರೆ, ಅದು ಶಿಶು ಅಭಿವೃದ್ಧಿ ಇಲಾಖೆಯಾಗಿದೆ. ಮಕ್ಕಳ ಲಾಲನೆ, ಪೋಷಣೆಗೆ ಅಂಗನವಾಡಿ ಶಿಕ್ಷಕಿ, ಸಹಾಯಕಿಯರ ಸೇವೆ ಸ್ಮರಣೀಯ ಸೇವೆಯಾಗಿದೆ ಎಂದು ಪುರಸಭೆ ಉಪಾಧ್ಯಕ್ಷ ಆಂಜನೇಯ ಗುಡಗೇರಿ ಹೇಳಿದರು.