ಸಾರಾಂಶ
- ಸಂವಿಧಾನದ ಜಾಗೃತಿ ಜಾಥಾ: ಚಿಕ್ಕಮಗಳೂರಿನಲ್ಲಿ ವಾಕಥಾನ್
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಂವಿಧಾನದ ಆಶಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಜಾಗೃತಿ ಜಾಥಾದ ಉದ್ದೇಶ ಎಂದು ಜಿಲ್ಲಾಧಿಕಾರಿ ಸಿ.ಎನ್ ಮೀನಾ ನಾಗರಾಜ್ ಹೇಳಿದರು. ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥ ಪ್ರಯುಕ್ತ ಬುಧವಾರ ನಡೆದ ವಾಕಥಾನ್‌ನಲ್ಲಿ ಎಂ.ಜಿ.ರಸ್ತೆಯಲ್ಲಿ ನಗರಸಭೆ ಪೌರ ಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಹನುಮಂತಪ್ಪ ವೃತ್ತದ ಮಾನವ ಸರಪಳಿ ಸಂದರ್ಭದಲ್ಲಿ ಮಾತನಾಡಿ, ಆರೋಗ್ಯ, ಶಿಕ್ಷಣ , ಸಂವಿಧಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆಎಂದರು.ಕ್ಯಾಂಡಲ್ ಜಾಥಾ, ಫ್ಲಾಗಥಾನ್, ಗಿಡ ನೆಡುವುದು, ಆಟೋ ಮತ್ತು ಸೈಕಲ್‌ನಲ್ಲಿ ತೃತಿಯ ಲಿಂಗಿಗಳಿಗೆ ಸಂವಿಧಾನ ಮತ್ತು ಸಮಾನತೆ ಕುರಿತು ವಿಚಾರ ಸಂಕೀರ್ಣ, ರಕ್ತದಾನ ಶಿಬಿರ, ಪೌರ ಸಂವಿಧಾನ, ಗೋಡೆ ಬರಹ, ರಂಗೋಲಿ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಗಾಳಿಪಟ ಮತ್ತು ಬಲೂನ್, ಆಹಾರ ಮೇಳದಂತಹ ವಿವಿಧ ರೀತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇಡೀ ದಿನ ಹಲವು ಕಾರ್ಯಕ್ರಮಗಳು ಜನರಲ್ಲಿ ಕ್ರಿಯಾತ್ಮಕ ಚಟುವಟಿಕೆ ತುಂಬಲಿವೆ ಎಂದರು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಮಾತನಾಡಿ, ಪೌರ ಕಾರ್ಮಿಕರಲ್ಲಿ ಸಂವಿಧಾನ ಜಾಗೃತಿ ಜಾಥಾದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜೊತೆಗೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.ಪ್ರತಿದಿನ ರಸ್ತೆ, ಚರಂಡಿ, ನಗರ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರ ಕಾಯಕಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಎಲ್ಲಾ ನೌಕರರಿಗೆ ಅಭಿನಂದಿಸಿದರು.
ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಸಂವಿಧಾನದ ಬಗ್ಗೆ ಎಲ್ಲಾ ವಾರ್ಡ್‌ಗಳಲ್ಲಿಯೂ ಜಾಗೃತಿ ಮೂಡಿಸುವಂತಾಗಲಿ ಎಂದು ಹಾರೈಸಿದರು.ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಡಾ.ಯೋಗೀಶ್, ನಗರಸಭೆ ಆಯುಕ್ತ ಬಸವರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ನಾಗರತ್ನ, ಜಲಜೀವನ್ ಮಿಷನ್ ಯೋಜನೆ ಅಧಿಕಾರಿ ವಿನಾಯಕ್, ವಾಕಥಾನ್‌ನಲ್ಲಿ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಶಾಲಾಕಾಲೇಜು ವಿದ್ಯಾರ್ಥಿಗಳು, ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.
21 ಕೆಸಿಕೆಎಂ 6ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಬುಧವಾರ ವಾಕಥಾನ್ ನಡೆಯಿತು.