ಕಚೇರಿಗೆ ನುಗ್ಗಿ ಪಿಡಿಒ ಮೇಲೆ ಹಲ್ಲೆ

| Published : Dec 07 2024, 12:30 AM IST

ಕಚೇರಿಗೆ ನುಗ್ಗಿ ಪಿಡಿಒ ಮೇಲೆ ಹಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‍ಪೇಟೆ: ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಗ್ರಾಪಂಗೆ ನುಗ್ಗಿದ್ದ ನಾಲ್ವರ ತಂಡ ಪಿಡಿಒ ಹಾಗೂ ಸಿಬ್ಬಂದಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ತ್ಯಾಮಗೊಂಡ್ಲು ಹೋಬಳಿ ಕುಲುವನಹಳ್ಳಿ ಗ್ರಾಪಂ ಕಚೇರಿಯಲ್ಲಿ ನಡೆದಿದೆ.

ದಾಬಸ್‍ಪೇಟೆ: ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಗ್ರಾಪಂಗೆ ನುಗ್ಗಿದ್ದ ನಾಲ್ವರ ತಂಡ ಪಿಡಿಒ ಹಾಗೂ ಸಿಬ್ಬಂದಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ತ್ಯಾಮಗೊಂಡ್ಲು ಹೋಬಳಿ ಕುಲುವನಹಳ್ಳಿ ಗ್ರಾಪಂ ಕಚೇರಿಯಲ್ಲಿ ನಡೆದಿದೆ.

ಪಿಡಿಒ ಮೋಹನ್‍ಕುಮಾರ್ ಹಲ್ಲೆಗೊಳಗಾದವರು. ಗೋವೆನಹಳ್ಳಿ ನಿವಾಸಿಗಳಾದ ಯುವರಾಜು, ಮಹಾಲಕ್ಷ್ಮಿ, ತಿಮ್ಮಯ್ಯ, ಮಹಿಮಕ್ಕ ಹಲ್ಲೆ ನಡೆಸಿದ ಆರೋಪಿಗಳು. ಪಿಡಿಒ ಮೋಹನ್‌ಕುಮಾರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಾಲಕ್ಷ್ಮಿ ಕುಲುವನಹಳ್ಳಿ ಗ್ರಾಪಂನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು. 6 ತಿಂಗಳ ಹಿಂದೆ ಈಕೆಯನ್ನು ಅಮಾನತು ಮಾಡಲಾಗಿತ್ತು. ಈ ವಿಚಾರ ಕುರಿತ ತನಿಖೆಯಲ್ಲಿ ಡಿ.6ರಂದು ಮಹಾಲಕ್ಷ್ಮಿ ವಿಚಾರವಾಗಿ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಕ್ಷಿಗಳ ವಿಚಾರಣೆ ನಡೆಯಬೇಕಿತ್ತು. ಇದನ್ನರಿತ ಕೆಲ ರಾಜಕೀಯ ಮುಖಂಡರ ಪ್ರಭಾವದಿಂದ ಮಹಾಲಕ್ಷ್ಮಿ ಆಕೆಯ ತಮ್ಮ ಯುವರಾಜು, ತಂದೆ ತಿಮ್ಮಯ್ಯ, ತಾಯಿ ಮಹಿಮಕ್ಕ ಕಚೇರಿಗೆ ಮನವಿ ನೀಡುವ ನೆಪದಲ್ಲಿ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಿಡಿಒ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದು, ಬಿಡಿಸಲು ಹೋದ ಸಿಬ್ಬಂದಿ ಮೇಲೂ ಹಲ್ಲೆ ಮಾಡಿದ್ದಾರೆ. ಯುವರಾಜನನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪಿಡಿಒ ಅವರಿಗೆ ಕುತ್ತಿಗೆ ಹಾಗೂ ಸೊಂಟಕ್ಕೆ ಹೆಚ್ಚು ಗಾಯವಾದ ಹಿನ್ನೆಲೆಯಲ್ಲಿ ಹೆಚಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ.

ಇಂದು ಪ್ರತಿಭಟನೆ: ಪಿಡಿಒ ಮೇಲೆ ಹಲ್ಲೆ ಖಂಡಿಸಿ ಸರ್ಕಾರಿ ನೌಕರರ ಸಂಘ ಹಾಗೂ ಪಿಡಿಒಗಳು ಡಿ.7ರಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ತಾಪಂ ಇಒ ಲಕ್ಷ್ಮೀನಾರಾಯಣ್, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ನಾಗರತ್ನಮ್ಮ, ನಿರ್ದೇಶಕರು ಆಸ್ಪತ್ರೆಗೆ ಭೇಟಿ ನೀಡಿ ಪಿಡಿಒಗೆ ಧೈರ್ಯ ಹೇಳಿ ಹಲ್ಲೆಯನ್ನು ಖಂಡಿಸಿದ್ದಾರೆ.

ಪೋಟೋ 6 : ಪಿಡಿಒ ಮೋಹನ್‍ಕುಮಾರ್ ಮೇಲೆ ಹಲ್ಲೆ ಮಾಡುತ್ತಿರುವ ಆರೋಪಿಗಳು

ಪೋಟೋ 7 :

ಆರೋಪಿ ಯುವರಾಜು.

ಪೋಟೋ 8 :

ಆರೋಪಿ ಮಹಾಲಕ್ಷ್ಮಿ

ಪೋಟೋ 9 :

ಪಿಡಿಒ ಮೋಹನ್ ಕುಮಾರ್

ಪೋಟೋ 10 :

ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿರುವ ತಾಪಂ ಇಒ ಲಕ್ಷ್ಮೀನಾರಾಯಣ್.