ಸಾರಾಂಶ
- ಸಂತ ಕವಿ ಸರ್ವಜ್ಞ ಜಯಂತಿಯಲ್ಲಿ ಸುಜಾತಾ ಶಿವಕುಮಾರ್
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜನರ ಆಡು ಭಾಷೆಯಲ್ಲೇ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಸಮಾಜ ಸುಧಾರಕ ಸರ್ವಜ್ಞ ಎಂದು ನಗರಸಭಾ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದ್ದಾರೆ.ಜಿಲ್ಲಾಡಳಿತದಿಂದ ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಸಂತ ಕವಿ ಸರ್ವಜ್ಞ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿ ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ ನೀಡಿದ ಶ್ರೇಷ್ಠ ವಚನಕಾರರಾಗಿ ೧೬ನೇ ಶತಮಾನದಲ್ಲಿ ವಿಶ್ವ ಮಾನವ ಸಂದೇಶ ಸಾರಿದ ಸಂತರಾಗಿದ್ದರೆಂದ ಅವರು ಯಾವುದೇ ಒಂದು ಜಾತಿಗೆ ಸೀಮಿತರಾಗದೆ ಸಮಾಜದಲ್ಲಿ ಎಲ್ಲ ವರ್ಗದ ಹಾಗೂ ಎಲ್ಲ ರಂಗ ಗಳಲ್ಲಿರುವ ಅಂಧಕಾರ ತೊಡೆದು ಹಾಕಲು ಶ್ರಮಿಸಿದ ಮಹಾನ್ ಚೇತನರಾಗಿದ್ದರು. ಅವರ ಆದರ್ಶಎಲ್ಲ ಕಾಲಕ್ಕೂ ಅನ್ವಯವಾಗಲಿದೆ ಎಂದರು.ಸಣ್ಣ ಸಣ್ಣ ಸಮುದಾಯಗಳು ಒಗ್ಗಟ್ಟಾಗಿ ಸರ್ಕಾರದ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಕುಂಬಾರ ಸಮಾಜ ತನ್ನ ವಂಶ ಪಾರಂಪರವಾಗಿ ಬಂದಿರುವ ಸಾಂಪ್ರದಾಯ ಕಲೆಗಳನ್ನು ಉಳಿಸಿ ಬಳಸಿಕೊಂಡು ಹೋಗಬೇಕು ಎಂದು ಹೇಳಿದರು.ಉಪ ತಹಸೀಲ್ದಾರ್ ರಾಮರಾವ್ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿ ಸರ್ವಜ್ಞರ ಹೆಸರೇ ಸೂಚಿಸಿದಂತೆ ತಮ್ಮ ವಚನಗಳ ಮೂಲಕ ಸಮಾಜ ದಲ್ಲಿನ ಮೌಢ್ಯ ತೆಗೆದು ಹಾಕಲು ಹಾಗೂ ತ್ರಿಪದಿಗಳ ಮೂಲಕ ಜಾಗೃತಿ ಮೂಡಿಸಿದ್ದ ಮಹಾನ್ ಸಂತ, ಸರ್ವಜ್ಞನ ಕವಿಯಾಗಿ ಪ್ರಸಿದ್ದರು ಎಂದರು.ವೇದಮೂರ್ತಿ ಅವರು ಸಂತ ಕವಿ ಸರ್ವಜ್ಞರ ಕುರಿತು ಉಪನ್ಯಾಸ ನೀಡಿದರು. ಕುಂಬಾರ ಸಮಾಜದ ಮುಖಂಡರಾದ ಎಂ. ಬಿ. ಅಶೋಕ್ ಕುಮಾರ್, ಕೆ.ಎಂ. ಗಂಗಾಧರ್, ಪರಮೇಶ್, ಜಯ ಪ್ರಕಾಶ್, ಏಕಾಂತ್ ರಾಮು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ. ರಮೇಶ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.