ರಾಜ್ಯ ಸರ್ಕಾರ ಚಾಮರಾಜನಗರ ಜಿಲ್ಲೆ ಮಾತ್ರವಲ್ಲ ರಾಜ್ಯಾದ್ಯಂತ ಸಾಕಷ್ಟು ರೀತಿಯಲ್ಲಿ ಜನಪರ, ರೈತಪರವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದರೂ ಸಹಾ ಇದನ್ನ ಸಹಿಸದ ವಿಪಕ್ಷಗಳು ಸರ್ಕಾರ ಟೀಕಿಸುವ ಚಿಲ್ಲರೆ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಚಾಮರಾಜನಗರ ಉಸ್ತುವಾರಿ ಸಚಿವ ವೆಂಕಟೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ರಾಜ್ಯ ಸರ್ಕಾರ ಚಾಮರಾಜನಗರ ಜಿಲ್ಲೆ ಮಾತ್ರವಲ್ಲ ರಾಜ್ಯಾದ್ಯಂತ ಸಾಕಷ್ಟು ರೀತಿಯಲ್ಲಿ ಜನಪರ, ರೈತಪರವಾಗಿಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದರೂ ಸಹಾ ಇದನ್ನ ಸಹಿಸದ ವಿಪಕ್ಷಗಳು ಸರ್ಕಾರ ಟೀಕಿಸುವ ಚಿಲ್ಲರೆ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಚಾಮರಾಜನಗರ ಉಸ್ತುವಾರಿ ಸಚಿವ ವೆಂಕಟೇಶ್ ಹೇಳಿದರು.
ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಚಿಲಕವಾಡಿ ಗ್ರಾಮದಲ್ಲಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿ, ಸಿದ್ದರಾಮಯ್ಯ ನೇತೖತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ರಾಜ್ಯದ ಅಭಿವೃದ್ಧಿಗೆ ಗ್ಯಾರಂಟಿ ಅನುಷ್ಠಾನದ ಜೊತೆ ಸ್ಪಂದಿಸುತ್ತಿದೆ. ಆದರೆ ಬಿಜೆಪಿ, ಜೆಡಿಎಸ್ ನವರು ಅಭಿವೃದ್ಧಿ ಕೆಲಸ ಆಗುತ್ತಿಲ್ಲ, ಕಾಂಗ್ರೆಸ್ ಸರ್ಕಾರ ಪಾಪರ್ ಸರ್ಕಾರ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ.ನಮ್ಮ ಸಣ್ಣ ತಪ್ಪನ್ನೆ ದೊಡ್ಡ ತಪ್ಪು ಎಂಬಂತೆ ಬಿಂಬಿಸಿ ಅಪಪ್ರಚಾರದಲ್ಲಿ ತೊಡಗಿದ್ದಾರೆ, ವಿಪಕ್ಷನಾಯಕ ಅಶೋಕ್ ಅವರು ವಿವೇಚನ ಇಲ್ಲದೆ ಸರ್ಕಾರದ ವಿರುದ್ದ ತಪ್ಪು ಸಂದೇಶ ರವಾನಿಸುತ್ತಿದ್ದಾರೆ , ನಮ್ಮ ಸರ್ಕಾರ ಟೀಕಿಸುವುದನ್ನ ಬಿಟ್ಟು ಬೇರೆ ಕೆಲಸ ಇಲ್ಲವಾಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರ ಟೀಕಿಸುವ ವಿಪಕ್ಷದವರು ರಾಜ್ಯದ ಜನರ ಹಿತ ಕಾಯುವಲ್ಲಿ ಧ್ವನಿ ತೆಗೆದು ರಾಜ್ಯದ ಜೊತೆ ಸ್ಪಂದಿಸುವಂತೆ ಮನವಿ ಮಾಡಲಿ, ರಾಜ್ಯದ ರೈತರ ಹಿತ ಕಾಯಲಿ, ಅದನ್ನ ಬಿಟ್ಟು ರೈತರ ಸಮಸ್ಯೆ ನಮಗೆ ಬೇಕಿಲ್ಲ ಎಂಬ ರೀತಿ ಉಡಾಫೆಯಾಗಿ ವತಿ೯ಸುತ್ತಾ ನಮ್ಮನ್ನು ಟೀಕಿಸುವ ಚಿಲ್ಲರೆ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ಬಿಜೆಪಿಯವರಿಗೆ ಅಧಿಕಾರ ದಾಹ ಹೆಚ್ಚಿದೆ. ಈ ಹಿನ್ನೆಲೆ ನಮ್ಮ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ, ನಾವು ರೈತರ ಸಮಸ್ಯೆಗೆ ಸ್ಪಂದಿಸಿ ಜೋಳ ಖರೀದಿಗೆ ಮುಂದಾಗಿದ್ದೆವೆ, ಈಕುರಿತು ಮುಖ್ಯಮಂತ್ರಿಗಳೆ ಖುದ್ದು ಅಸಕ್ತಿ ವಹಿಸಿದ್ದು ಕೆ ಎಂ ಎಫ್ ನಿಂದಲೇ151 ಸಾವಿರ ಮೆಟ್ರಿಕ್ ಟನ್ ಜೋಳ ಖರೀದಿಗೆ ಮುಂದಾಗಿದ್ದಾರೆ, ಆದರೆ ಈವಿಚಾರದಲ್ಲಿ ಕೇಂದ್ರ ಸರ್ಕಾರ
ಮೆಧು ದೋರಣೆ ತಾಳಿದೆ, ವಾಸ್ತವ ವಿಚಾರ ಗಮನಕ್ಕೆ ತರುವಲ್ಲಿ ಸಂಸದರೂ ಸಹಾ ಮೌನ ತಾಳಿದ್ದಾರೆ, ಆದರೆ ನಮ್ಮಸರ್ಕಾರದ ವಿರುದ್ದ ತಪ್ಪು ಸಂದೇಶ ಬಿತ್ತುವ ಕೆಲಸದಲ್ಲಿ ನಿರತರಾಗಿದ್ದಾರೆ, ಅವರಿಗೆ ಜನರ ಹಿತ ಕಾಯುವುದಕ್ಕಿಂತ ನಮ್ಮನ್ನು ಟೀಕಿಸುವುದೆ ದೊಡ್ಡ ಕೆಲಸವಾಗಿದೆ ಎಂದರು ಜಿಲ್ಲಾಸ್ಪತ್ರೆ ಜಾಗ ಮಂಜೂರು, ಶಾಸಕರ ಪರಿಶ್ರಮ:
ಚಾ.ನಗರ ಜಿಲ್ಲೆ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿ ಹಿಂದೆ ಇತ್ತು, ಆದರೆ ಇಲ್ಲಿವರೆವಿಗೂ ಬಂದ ಸರ್ಕಾರಗಳು, ಶಾಸಕರು, ಸಚಿವರುಗಳು ಈ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಸ್ಪಂದಿಸಿದ್ದಾರೆ, ಅದೇ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಸಹಾ ರೈತಪರ, ಹಾಗೂ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ. ಈಗಾಗಲೇ ಮಹದೇಶ್ವರ ಬೆಟ್ಟದ ಸಂಪುಟ ಸಭೆಯಲ್ಲಿ ಜಿಲ್ಲೆಯ ವಿವಿಧ ಯೋಜನೆಗಳಿಗೆ 3200 ಕೋಟಿ ಮಂಜೂರು ಮಾಡಿದ್ದು ಸಾಕಷ್ಟು ಯೋಜನೆಗಳು ಪ್ರಾರಂಭವಾಗುತ್ತಿದೆ, ಇನ್ನ ಕೆಲವು ಪ್ರಗತಿಯಲ್ಲಿವೆ, ಈ ಪೈಕಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣವೂ ಸಹಾ ಒಂದು. ಕೊಳ್ಳೇಗಾಲ ಶಾಸಕ ಎ ಆರ್ ಕೖಷ್ಣಮೂರ್ತಿ ಅವರ ಜನಪರ ಕಾಳಜಿಯಿಂದಾಗಿ ಈ ಆಸ್ಪತ್ರೆ ಕಟ್ಟಡಕ್ಕೆ ನಾನು ರೇಷ್ಮೆ ಇಲಾಖೆಯ 5 ಎಕರೆ ಜಾಗ ಮಂಜೂರು ಮಾಡಿದ್ದೇನೆ. ನನಗೆ ನೂರು ಬಾರಿ ಕರೆ ಮಾಡುವ ಮೂಲಕ ಶಾಸಕರು ಹಿಡಿದ ಕೆಲಸ ಮಾಡಿಸಿಕೊಂಡಿದ್ದಾರೆ, ಕೖಷ್ಣಮೂರ್ತಿ ಅವರು ಅಭಿವೃದ್ಧಿ ಕೆಲಸಗಳಲ್ಲಿ ಸದಾ ಮುಂದಿದ್ದಾರೆ ಎಂದರು. ಚಿಲಕವಾಡಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಸಿದ್ದರಾಮಯ್ಯ ಅವರು ಈಹಿಂದೆ ಮುಖ್ಯಮಂತ್ರಿಗಳಾಗಿದ್ದ ವೇಳೆ ಪ್ರಾರಂಭವಾಗಿದ್ದು ಈಗ ಅವರೇ ಸಿಎಂ ಆಗಿರುವ ಈವೇಳೆ ಬಾಲಕರ ವಿದ್ಯಾರ್ಥಿ ನಿಲಯ ಪ್ರಾರಂಭಿಸಲಾಗಿದೆ. ಇಲ್ಲಿ 304 ವಿದ್ಯಾರ್ಥಿಗಳಿದ್ದು ಹೆಣ್ಣು ಮಕ್ಕಳಿಗೂ ಹಾಸ್ಟೆಲ್ ನಿಮಾ೯ಣಕ್ಕೆ ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಿ ಕ್ರಮವಹಿಸಲಾಗುವುದು, ಇಲ್ಲಿನ ಅತಿಥಿ ಉಪನ್ಯಾಸಕರ ಸಮಸ್ಯೆ ನಿವಾರಣೆಗೆ ಕ್ರಮವಹಿಸಲಾಗುವುದು, ಶಾಸಕ ಎ. ಆರ್. ಕೃಷ್ಣಮೂರ್ತಿ ಅವರ ಪರಿಶ್ರಮದಿಂದ ಇಲ್ಲಿ ಸುಂದರವಾದ ವಿದ್ಯಾರ್ಥಿ ನಿಲಯ ಪ್ರಾರಂಭವಾಗಿದೆ ಎಂದರು.ನಾನು ಹಳ್ಳಿಯಲ್ಲೆ ಹುಟ್ಟಿ ಬೆಳೆದವನು, ಈ ಹಿನ್ನೆಲೆ ನನಗೆ ಗ್ರಾಮಾಂತರ ಪ್ರದೇಶಗಳ ಸಮಸ್ಯೆಗಳ ಬಗ್ಗೆ ಅರಿವಿದೆ. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲೂ ಸಹಾ ಹೆಣ್ಣು ಮಕ್ಕಳಿಗೆ ಸಿಗಬೇಕಾದ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುವೆ ಎಂದರು.ಈ ವೇಳೆ ಶಾಸಕ ಎ ಆರ್ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಉಪವಿಭಾಗಾಧಿಕಾರಿ ದೀಲೀಪ್ ಕುಮಾರ್ ಮೀನಾ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ,ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಹೊಂಗನೂರು ಚಂದ್ರು, ತಾಲೂಕು ಅಧ್ಯಕ್ಷ ಕುಂತೂರು ರಾಜೇಂದ್ರ, ಕಿನಕಹಳ್ಳಿ ಪ್ರಭುಪ್ರಸಾದ್, ಗ್ರಾಪಂ ಅಧ್ಯಕ್ಷೆ ಗಂಗಾಮಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಇನ್ನಿತರಿದ್ದರು