ಸಾರಾಂಶ
ದೊಡ್ಡಬಳ್ಳಾಪುರ: ತಾಲೂಕಿನ ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಶ್ರೀ ರಾಜರಾಜೇಶ್ವರಿ ಕನ್ನಡ ಯುವಕರ ಸಂಘ ರಜತ ಮಹೋತ್ಸವ ಆಚರಣೆ ಮಾಡುತ್ತಿರುವುದು ವಿಶೇಷ ಸಂದರ್ಭ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ ಹೇಳಿದರು.
ದೊಡ್ಡಬಳ್ಳಾಪುರ: ತಾಲೂಕಿನ ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಶ್ರೀ ರಾಜರಾಜೇಶ್ವರಿ ಕನ್ನಡ ಯುವಕರ ಸಂಘ ರಜತ ಮಹೋತ್ಸವ ಆಚರಣೆ ಮಾಡುತ್ತಿರುವುದು ವಿಶೇಷ ಸಂದರ್ಭ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ ಹೇಳಿದರು.
ನಗರದ ಗಂಗಾಧರಪುರ-ರೋಜಿಪುರದಲ್ಲಿ ನಡೆದ ಶ್ರೀ ರಾಜರಾಜೇಶ್ವರಿ ಕನ್ನಡ ಯುವಕರ ಸಂಘ 25ನೇ ವಾರ್ಷಿಕೋತ್ಸವ ಹಾಗೂ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೋಡಿ ಗ್ರಾಮದಲ್ಲಿ ನಿರಂತರವಾಗಿ ಕನ್ನಡ ನಾಡಿನ ಸೇವೆಗೆ ಸದಾಕಾಲವೂ ಈ ಸಂಘ ಟೊಂಕ ಕಟ್ಟಿನಿಂತು ಎಲ್ಲಾ ಹೋರಾಟಗಳಲ್ಲಿ ಭಾಗಿಯಾಗುವ ಮೂಲಕ ಭಾಷಾ ಅನನ್ಯತೆಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.ಕನ್ನಡ ಪಕ್ಷದ ಹಿರಿಯ ಮುಖಂಡ ಸಂಜೀವ್ ನಾಯ್ಕ್ ಮಾತನಾಡಿ, ಕರ್ನಾಟಕ ಏಕೀಕರಣಗೊಂಡು ಹಲವು ದಶಕಗಳು ಸಂದಿವೆ. ಆದರೂ ಭಾಷಾ ಬಲಿಷ್ಠತೆಯನ್ನ ಸಾಧಿಸುವಲ್ಲಿ ವಿಫಲವಾಗಿರುವುದು ದುರದೃಷ್ಟಕರ ಸಂಗತಿ. ಲೋಕಸಭೆಗೆ ಆಯ್ಕೆಯಾದ ನಮ್ಮ ಸಂಸದರಿಗೆ ಕನ್ನಡ ಭಾಷೆಯ ಬಗ್ಗೆ ಯಾವುದೇ ಕಾಳಜಿ ಇಲ್ಲದಿರುವುದು ಶೋಚನೀಯ ಸ್ಥಿತಿಗೆ ಕಾರಣ. ಸ್ಥಳೀಯ ಪಕ್ಷಗಳು ಪ್ರಬಲಗೊಂಡಾಗ ಮಾತ್ರ ಕನ್ನಡದ ಪ್ರಜ್ಞೆ ಜಾಗೃತಗೊಳ್ಳುತ್ತದೆ ಎಂದರು.
ಸಂಘದ ಅಧ್ಯಕ್ಷ ಆರ್.ಕೆಂಪರಾಜು, ಸಂಘದ ರಜತಪಥದ ಮಹತ್ವದ ಘಟ್ಟಗಳನ್ನು ವಿವರಿಸಿದರು. ಕನ್ನಡ ಪರ ಹಿರಿಯ ಹೋರಾಟಗಾರ ಸಾ.ಲ.ಕಮಲನಾಥ್ ಧ್ವಜಾರೋಹಣ ನೇರವೇರಿಸಿದರು. ಟಿಎಪಿಸಿಎಂಸಿ ಮಾಜಿ ಅಧ್ಯಕ್ಷ ಅಂಜನಗೌಡ, ಹಿರಿಯ ಕಲಾವಿದ ಆಂಜಿನಪ್ಪ, ಕಸಬಾ ವಿಎಸ್ಎಸ್ ಎನ್ ಉಪಾಧ್ಯಕ್ಷ ರಾಜಣ್ಣ, ಸ್ಥಳೀಯ ಮುಖಂಡರಾದ ಎನ್.ನಂದಕುಮಾರ್, ಮುನಿಪಾಪಯ್ಯ, ಸಂಘದ ಪದಾಧಿಕಾರಿಗಳಾದ ಎನ್.ನಾರಾಯಣಸ್ವಾಮಿ, ಶಿವು ಗ್ಯಾಸ್, ಕೆ.ಸತೀಶ್, ಆರ್.ಶ್ರೀನಿವಾಸ್, ಚಂದ್ರು ,ದೇವರಾಜು, ಶ್ರೀನಿವಾಸ್.ಡಿ,ಮಹೇಶ್. ಎಂ ಸೇರಿದಂತೆ ಸಂಘದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.6ಕೆಡಿಬಿಪಿ3-
ದೊಡ್ಡಬಳ್ಳಾಪುರದ ಗಂಗಾಧರಪುರ-ರೋಜಿಪುರದಲ್ಲಿ ಆಯೋಜಿಸಿದ್ದ ಸಂಘದ ರಜತ ಮಹೋತ್ಸವ, ಕರ್ನಾಟಕ ರಾಜ್ಯೋತ್ಸವ, ನಗರದೇವತೆ ಉತ್ಸವಕ್ಕೆ ಚಾಲನೆ ನೀಡಲಾಯಿತು.