ಸಾರಾಂಶ
ಕಬ್ಬೂರ ಪಟ್ಟಣದಲ್ಲಿ ಭಾನುವಾರ ಸಂಜೆ ಎತ್ತುಗಳ ಮೆರವಣಿಗೆ ಎಲ್ಲರ ಮನ ಸೆಳೆಯಿತು. ಮೆರವಣಿಗೆಯ ವಿಶೇಷತೆಯೆಂದರೆ ಈ ಜೋಡೆತ್ತುಗಳು ಬರೋಬ್ಬರಿ ₹6 ಲಕ್ಷ 11 ಸಾವಿರಕ್ಕೆ ಮಾರಾಟವಾಗಿವೆ. ದಾಖಲೆ ಬೆಲೆಗೆ ಮಾರಾಟವಾಗಿದ್ದರಿಂದ ರೈತರು ಎತ್ತುಗಳನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ಕಬ್ಬೂರ
ಪಟ್ಟಣದಲ್ಲಿ ಭಾನುವಾರ ಸಂಜೆ ಎತ್ತುಗಳ ಮೆರವಣಿಗೆ ಎಲ್ಲರ ಮನ ಸೆಳೆಯಿತು. ಮೆರವಣಿಗೆಯ ವಿಶೇಷತೆಯೆಂದರೆ ಈ ಜೋಡೆತ್ತುಗಳು ಬರೋಬ್ಬರಿ ₹6 ಲಕ್ಷ 11 ಸಾವಿರಕ್ಕೆ ಮಾರಾಟವಾಗಿವೆ. ದಾಖಲೆ ಬೆಲೆಗೆ ಮಾರಾಟವಾಗಿದ್ದರಿಂದ ರೈತರು ಎತ್ತುಗಳನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.ಪಟ್ಟಣದ ಸಹದೇವ ಗುರಪ್ಪ ಚಿಮ್ಮಟ ಹಾಗೂ ಸಹೋದರರು ಸಾಕಿದ ಕಿಲಾರಿ ಎತ್ತುಗಳೇ ದಾಖಲೆ ಬೆಲೆಗೆ ಮಾರಟವಾದವು. ಈ ಎತ್ತುಗಳಲ್ಲಿ ಒಂದನ್ನು 1 ವರ್ಷ 6 ತಿಂಗಳು ಹಿಂದೆ ಬಬಲಾದಿಯ ಜಾತ್ರೆಯಲ್ಲಿ ₹80 ಸಾವಿರಕ್ಕೆ ತಂದಿದ್ದರೆ, ಇನ್ನೊಂದನ್ನು 3 ತಿಂಗಳು ಹಿಂದೆ ವಂಟಗೂಡಿಯ ರೈತರೊಬ್ಬರ ಬಳಿ ₹ 1 ಲಕ್ಷ 51 ಸಾವಿರಕ್ಕೆ ಅಂದರೆ ಜೊಡೆತ್ತುಗಳಿಗೆ ₹2. 31 ಸಾವಿರಕ್ಕೆ ಕೊಂಡಿದ್ದರು. ಮಹಾರಾಷ್ಟ್ರ ಪುಣೆಯ ರವೀಂದ್ರ ತಾತ್ಯಾ ಖಂಡ್ರೆ ಎಂಬುವವರು ಮನೆಗೆ ಬಂದು ಈ ಕಿಲಾರಿ ಎತ್ತುಗಳನ್ನು ₹6 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಾಟವಾಗಿವೆ. ಎತ್ತುಗಳು ಧಾರವಾಡ ಕೃಷಿ ಮೇಳ ಹಾಗೂ ನಾನಾ ಭಾಗಗಳಲ್ಲಿ ಜರುಗಿದ ಎತ್ತುಗಳ ಪ್ರದರ್ಶನಗಳಲ್ಲಿ ಪ್ರಶಸ್ತಿ ಪಡೆದಿದ್ದವು.