ಸಾರಾಂಶ
ತಾಲೂಕು ಆಹಾರ ವಿತರಕರ ಮತ್ತು ಅಧಿಕಾರಿಗಳ ಸಭೆ
ಕನ್ನಡಪ್ರಭ ವಾರ್ತೆ, ತರೀಕೆರೆನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಪಂಚ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಉತ್ತಮ ಆಡಳಿತಕ್ಕೆ ನಾಂದಿ ಹಾಡಿದೆ ಎಂದು ಪಂಚ ಯೋಜನೆಗಳ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ರಮೇಶ್ ಗೋವಿಂದೇಗೌಡ ತಿಳಿಸಿದರು.ತಾಪಂ ಸಭಾಂಗಣದಲ್ಲಿ ಕರೆಯಲಾದ ತಾಲೂಕು ಆಹಾರ ವಿತರಕರ ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಸಹಕಾರ ನೀಡದ ಕಾರಣ ಪಡಿತರ ದಾರರಿಗೆ ಅಕ್ಕಿ ಬದಲು ಅವರ ಖಾತೆಗೆ ಪ್ರತಿ ತಿಂಗಳು ಹಣ ಜಮಾ ಮಾಡಲಾಗುತ್ತಿತ್ತು. ಪ್ರಸ್ತುತ ಕೇಂದ್ರ ಸರ್ಕಾರದ ಸಹಕಾರದಿಂದ ಪ್ರತಿ ಫಲಾನುಭಗಳಿಗೆ 15 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಏಪ್ರಿಲ್ ನಂತರ ಮಾಮೂಲಿಯಂತೆ ಫಲಾನುಭವಿಗಳಿಗೆ 10 ಕೆಜಿ ವಿತರಸಲಾಗುವುದು ಎಂದು ತಿಳಿಸಿದರು.
ಪಡಿತರ ಆಹಾರ ವಿತರಣೆಯಲ್ಲಿ ಕೆಲವು ಪಡಿತರ ಅಂಗಡಿ ಮಾಲೀಕರು ಫಲಾನುಭವಿಗಳಿಗೆ ಸರಿಯಾಗಿ ಅಕ್ಕಿ ವಿತರಿಸುತ್ತಿಲ್ಲ ಎಂಬ ದೂರಿನ ಹಿನ್ನೆಲೆ ತಾಲೂಕು ಪಡಿತರ ವಿತರಕರ ಸಭೆ ಕರೆದು ಯಾವುದೇ ರೀತಿ ಲೋಪವಾಗ ದಂತೆ ಫಲಾನುಭವಿ ಗಳಿಗೆ ಅಕ್ಕಿ ವಿತರಿಸಲು ಸೂಚಿಸಲಾಯಿತು ಎಂದು ಹೇಳಿದರು. ಫಲಾನುಭವಿಗಳು ಉಚಿತ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದ್ದು ಒಂದು ವೇಳೆ ಮಾರಾಟ ಮಾಡಿದ ಬಗ್ಗೆ ಮಾಹಿತಿ ದೊರೆತಲ್ಲಿ ಅಂತಹ ಪಡಿತರದಾರರ ಕಾರ್ಡನ್ನು ರದ್ದುಪಡಿಸಲು ಸೂಚಿಸಲಾಗುವುದು, ಪಲಾನುಭವಿಗಳು ಉಚಿತ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಬಾರದಾಗಿ ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿ ಗಳ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು..ಈ ಸಂದರ್ಭದಲ್ಲಿ ಆಹಾರ ಇಲಾಖೆ ಸಿರಸ್ತೆದಾರ್ ಜಗದೀಶ್, ಗ್ಯಾರೆಂಟಿ ಸಮಿತಿ ಸದಸ್ಯರಾದ ಮೆಹಬೂಬ್, ಶ್ರೀಧರ್ ಸಂತೋಷ್ ಕುಮಾರ್, ಸಂತೋಷ್ ನಾಯ್ಕ, ಹರೀಶ್ ಕುಮಾರ್, ಮುಂಡ್ರೆ ಜ್ಞಾನಮೂರ್ತಿ, ಮಣಿಕಂಠ, ದೇವರಾಜ್, ಮಾಲತೇಶ್ ಭಾಗವಹಿಸಿದ್ದರು
21ಕೆಟಿಆರ್.ಕೆ.1ಃತರೀಕೆರೆಯಲ್ಲಿ ನಡೆದ ತಾಲೂಕು ಆಹಾರ ವಿತರಕರ ಮತ್ತು ಅಧಿಕಾರಿಗಳ ಸಭೆಯಲ್ಲಿ ಪಂಚ ಯೋಜನೆಗಳ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ರಮೇಶ್ ಗೋವಿಂದೇಗೌಡ ಮಾತನಾಡಿದರು. ಆಹಾರ ಇಲಾಖೆ ಸಿರಸ್ತೇದಾರ್ ಜಗದೀಶ್, ಗ್ಯಾರೆಂಟಿ ಸಮಿತಿ ಸದಸ್ಯ ಮೆಹಬೂಬ್ ಮತ್ತಿತರರು ಇದ್ದರು.