ಸಾರಾಂಶ
ಜೆಡಿಎಸ್ ನೊಂದವರು ಮತ್ತು ಹಿಂದುಳಿದವರ ಪರವಾಗಿ ಚಿಂತಿಸುವ ಸಿದ್ದಾಂತ ಹೊಂದಿದ್ದು, ಇದನ್ನು ಅರಿತಿರುವ ಮತದಾರರು ನಮಗೆ ಬೆಂಬಲ ನೀಡುತ್ತಿದ್ದು
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಕ್ಷೇತ್ರಾದ್ಯಂತ ಜೆಡಿಎಸ್ ಪರವಾಗಿ ಅಲೆ ಎದ್ದಿದ್ದು, ಮುಂಬರುವ ಎಲ್ಲ ಚುನಾವಣೆಗಳಲ್ಲಿಯೂ ಪಕ್ಷ ಜಯಭೇರಿ ಬಾರಿಸಲಿದೆ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹೇಳಿದರು.ಸಾಲಿಗ್ರಾಮ ತಾಲೂಕಿನ ಚಿಕ್ಕ ಹನಸೋಗೆ ಗ್ರಾಮದ ಯಶೋದಮ್ಮ ತಿಮ್ಮೇಗೌಡ ಕಲ್ಯಾಣ ಮಂಟಪದಲ್ಲಿ ಚನ್ನಂಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎಸ್. ನಟರಾಜು ಮತ್ತು ಹಾರಂಗಿ ನೀರು ಬಳಕೆದಾರರ ಮಹಾಮಂಡಳದ ನೂತನ ನಿರ್ದೇಶಕ ತಿಮ್ಮೇಗೌಡ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಜೆಡಿಎಸ್ ನೊಂದವರು ಮತ್ತು ಹಿಂದುಳಿದವರ ಪರವಾಗಿ ಚಿಂತಿಸುವ ಸಿದ್ದಾಂತ ಹೊಂದಿದ್ದು, ಇದನ್ನು ಅರಿತಿರುವ ಮತದಾರರು ನಮಗೆ ಬೆಂಬಲ ನೀಡುತ್ತಿದ್ದು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದರ ಸದುಪಯೋಗ ಪಡಿಸಿಕೊಂಡು ಸಂಘಟನೆ ಮಾಡಬೇಕೆಂದು ಅವರು ಸಲಹೆ ನೀಡಿದರು.ಎರಡು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವರು ಆಗಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಮೊದಲ ಬಾರಿಗೆ ಕ್ಷೇತ್ರದ ಮತದಾರ ಪ್ರಭುಗಳು ಅತಿ ಹೆಚ್ಚು ಬಹುಮತ ನೀಡಿದ್ದು, ಇದಕ್ಕೆ ಪಕ್ಷದ ಪರವಾಗಿ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ತಾಲೂಕು ಆಶ್ರಯ ಸಮಿತಿ ಮಾಜಿ ಸದಸ್ಯ ಹೊಸೂರು ಬಿ. ರಮೇಶ್ ಮಾತನಾಡಿದರು.ಹಾರಂಗಿ ಮಹಾ ಮಂಡಳದ ನಿರ್ದೇಶಕ ತಿಮ್ಮೇಗೌಡ ಮತ್ತು ಚನ್ನಂಗೆರೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ವೈ.ಎಸ್. ನಟರಾಜು ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್, ದಲಿತ ಮುಖಂಡ ಹನಸೋಗೆ ನಾಗರಾಜು, ಕೆ.ಆರ್. ನಗರ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಕುಮಾರ್, ಸಾಲಿಗ್ರಾಮ ತಾಲೂಕು, ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಎಸ್.ಆರ್. ಮಧುಚಂದ್ರ, ಚನ್ನಂಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಎನ್. ನಾರಾಯಣಗೌಡ, ಹನಸೋಗೆ ಗ್ರಾಪಂ ಅಧ್ಯಕ್ಷ ಹರೀಶ್, ಮಾಜಿ ಅಧ್ಯಕ್ಷ ಎಚ್.ಟಿ. ರಾಜೇಶ್, ಚನ್ನಂಗೆರೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಿ. ವೈ. ಅಭಿಲಾಷ್, ಮುಖಂಡಾದ ಡಿ.ಆರ್. ರಮೇಶ್, ಸುರೇಶ್, ನಿವೃತ್ತ ಉಪನ್ಯಾಸಕ ಪಾಂಡು, ನಿವೃತ್ತ ಶಿಕ್ಷಕರಾದ, ತಿಮ್ಮೇಗೌಡ, ರಾಮೇಗೌಡ, ಮೋಹನ್ ಇದ್ದರು.