ಮನುಷ್ಯನಲ್ಲಿ ಛಲವಿದ್ದಲ್ಲಿ ಸಾಧನೆ ಮಾರ್ಗ ಸುಲಭ: ಯೋಧ ದುರ್ಗಪ್ಪ

| Published : Feb 11 2024, 01:47 AM IST

ಮನುಷ್ಯನಲ್ಲಿ ಛಲವಿದ್ದಲ್ಲಿ ಸಾಧನೆ ಮಾರ್ಗ ಸುಲಭ: ಯೋಧ ದುರ್ಗಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಲ್ಲಿ ಅವಿರತ ಶ್ರಮ ಅಗತ್ಯ. ಮನುಷ್ಯನಲ್ಲಿ ಛಲ ಎಂಬುದಿದ್ದರೆ ಸಾಧನೆ ಸುಲಭವಾಗಲಿದೆ. ಭಾರತೀಯ ಸೇನೆಯಲ್ಲಿ ವಿವಿಧ ವಿಭಾಗಗಳಿದ್ದು, ವಿಭಾಗನುಸಾರ, ವಿಷಯನುಸಾರ ಸೇನೆಯಲ್ಲಿ ಹುದ್ದೆ ಪಡೆಯಬಹುದಾಗಿದೆ.

ಕನ್ನಡಪ್ರಭ ವಾರ್ತೆ ಶಹಾಪುರ

ಛಲವಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಏಕಾಗ್ರತೆ, ನಿಷ್ಠೆ, ಶ್ರದ್ಧೆ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡಾಗ ಗುರಿ ತಲುಪಲು ಸಾಧ್ಯ ಎಂದು ಭಾರತೀಯ ಸೇನೆ ಬಿಎಸ್‌ಎಫ್ ಯೋಧ ದುರ್ಗಪ್ಪ ಸಗರ ಹೇಳಿದರು.

ನಗರದ ಶ್ರೀಸಾಯಿರಾಮ ಪಿಯು ಸೈನ್ಸ್ ಕಾಲೇಜಿನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಅವಿರತ ಶ್ರಮ ಅಗತ್ಯ. ಮನುಷ್ಯನಲ್ಲಿ ಛಲ ಎಂಬುದಿದ್ದರೆ ಸಾಧನೆ ಸುಲಭವಾಗಲಿದೆ. ಭಾರತೀಯ ಸೇನೆಯಲ್ಲಿ ವಿವಿಧ ವಿಭಾಗಗಳಿದ್ದು, ವಿಭಾಗನುಸಾರ, ವಿಷಯನುಸಾರ ಸೇನೆಯಲ್ಲಿ ಹುದ್ದೆ ಪಡೆಯಬಹುದಾಗಿದೆ. ಸೈನಿಕರು ಎಂದ ತಕ್ಷಣ ಯುದ್ಧಭೂಮಿಗೆ ಹೋಗಬೇಕು. ಸಾವು-ನೋವುಗಳ ಮಧ್ಯೆಯೇ ಜೀವನ ಅಂದುಕೊಳ್ಳಬೇಡಿ. ಭಾರತದ ರಕ್ಷಣೆಗೆ ಸೈನಿಕರು ಪಣತೊಟ್ಟು ನಿಂತಿರುತ್ತಾರೆ. ದೇಶದ ರಕ್ಷಣೆ ನಮ್ಮ ಭಾರತೀಯ ಸೇನೆಯ ಜವಾಬ್ದಾರಿ. ಅದು ನಮ್ಮಗಳ ಕರ್ತವ್ಯ ಎಂದರು.

ಪ್ರತಿಯೊಬ್ಬರಲ್ಲೂ ದೇಶ ಭಕ್ತಿ ಇರಬೇಕು. ಪ್ರಸ್ತುತ ಸೇನೆಯಲ್ಲಿ ಹಲವಾರು ಸೌಲಭ್ಯಗಳಿವೆ. ನಾವು ಮೊದಲಿಗೆ ಸೇರ್ಪಡೆಗೊಂಡಾಗ ಸೌಲಭ್ಯಗಳು ಅಷ್ಟಿರಲಿಲ್ಲ. ಇದೀಗ ನಮ್ಮ ಸೇನೆ ಸಾಕಷ್ಟು ಮೂಲ ಸೌಲಭ್ಯ ಹೊಂದಿದೆ. ಎಲ್ಲಾ ರೀತಿಯಲ್ಲೂ ಸುಸಜ್ಜಿತವಾಗಿ ಬೆಳೆದು ನಿಂತಿದೆ. ನೀವು ಬಯಸಿದ್ದಲ್ಲಿ ಸೇನೆಯಲ್ಲಿ ವೈದ್ಯರಾಗಿ, ಇಂಜಿನೀಯರಾಗಿ, ಸೈನಿಕರಿಗೆ ಶಕ್ತಿ ತುಂಬುವ ಹಲವಾರು ಹುದ್ದೆಗಳಿವೆ. ಆಯಾ ವಿಭಾಗಗಳಲ್ಲೂ ಕೆಲಸ ಮಾಡುವ ಮೂಲಕ ದೇಶಪ್ರೇಮ ಪಡೆಯಬಹುದು ಎಂದರು.

ಈ ಸಂದರ್ಭದಲ್ಲಿ ದೇಶ ಭಕ್ತಿ ಗೀತೆ ಹಾಡುವ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದರು. ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಸಿ.ಪಾಟೀಲ್ ಉದ್ಘಾಟಿಸಿದರು. ಪ್ರಾಚಾರ್ಯ ಎಂ.ಪಿ. ಸಾಸನೂರ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ಪಾಟೀಲ್ ಸೇರಿ ಉಪನ್ಯಾಸಕ ವೃಂದದವರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.