ಹಡಪದ ಸಮಾಜ ಮುಖ್ಯವಾಹಿನಿಗೆ ಬರಲು ಶಿಕ್ಷಣ, ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ಜಾಗೃತಿ ಮುಖ್ಯವಾಗಿದ್ದು, ಸಮಾಜದವರು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಹಡಪದ ಅಭಿವೃದ್ಧಿ ನಿಗಮದಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯ ಸಹಕಾರ ಕುರಿ ಮಹಾಮಂಡಳದ ಉಪಾಧ್ಯಕ್ಷ ಕಾಶಿನಾಥ ಹುಡೇದ ಹೇಳಿದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಹಡಪದ ಸಮಾಜ ಮುಖ್ಯವಾಹಿನಿಗೆ ಬರಲು ಶಿಕ್ಷಣ, ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ಜಾಗೃತಿ ಮುಖ್ಯವಾಗಿದ್ದು, ಸಮಾಜದವರು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಹಡಪದ ಅಭಿವೃದ್ಧಿ ನಿಗಮದಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯ ಸಹಕಾರ ಕುರಿ ಮಹಾಮಂಡಳದ ಉಪಾಧ್ಯಕ್ಷ, ಕಾಶಿನಾಥ ಹುಡೇದ ಹೇಳಿದರು.ಪಟ್ಟಣದ ಕಾಡರಕೊಪ್ಪ ರಸ್ತೆಯ ಹಡಪದ ಅಪ್ಪಣ ಸಮುದಾಯ ಭವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮೇಲು-ಕೀಳು, ಬಡವ ಬಲ್ಲಿದನೆಂಬ ಬೇಧಭಾವ ಇರುವ ಅಂದಿನ ದಿನಗಳಲ್ಲಿ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿ ಸರ್ವರೂ ಸಮಾನರು ಎಂದು ಸಾರಿದವರು ಹಡಪದ ಅಪ್ಪಣ್ಣನವರು. ನಿಮ್ಮ ಸಮಾಜದ ಜೊತೆಗೆ ಯಾವಾಗಲೂ ಇರುತ್ತೇನೆ. ಏನೇ ಸಮಸ್ಯೆ ಬಂದರೂ ನನ್ನ ಕೈಯಾದಷ್ಟು ಸಹಾಯ-ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಬಾಲಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಲ್ಲಾಸಾಬ ಯಾದವಾಡ ಮಾತನಾಡಿ, ಹಡಪದ ಸಮಾಜ ಶೈಕ್ಷಣಿಕ, ಸಾಮಾಜಿಕ ಆರ್ಥಿಕ ಪ್ರಗತಿ ಸಾಧಿಸಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು. ಹಡಪದ ಅಪ್ಪಣ್ಣನವರು ಶುದ್ಧ ಕಾಯಕ, ಪರಿಶುದ್ಧ ಜೀವನ ಪ್ರತಿಪಾದಿಸಿದ್ದರು ಎಂದು ಹೇಳಿದರು.ವಿಕಲಚೇತನ ಕ್ರೀಡಾಪಟು ಲೋಕಣ್ಣ ಪರಣ್ಣನವರು ಅವರು ಓಮನ್ ದೇಶದಲ್ಲಿ ನಡೆದ ವಿಶ್ವ ಸೇಲಿಂಗ್ ಇನ್‌ಕ್ಲೂಸಿವ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿ ೧೬ ನೇ ಸ್ಥಾನ ಗಳಿಸಿದ ಪ್ರಯುಕ್ತ ಹಡಪದ ಸಮಾಜದ ವತಿಯಿಂದ ವಿಶೇಷ ಸನ್ಮಾನಿಸಿ ಸತ್ಕರಿಸಲಾಯಿತು. ಮುಧೋಳ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿರ್ದೇಶಕರಾಗಿ ಆಯ್ಕೆಯಾದ ಮಾರುತಿ ರಂಗಣ್ಣವರ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಬಬಲಾದಿ, ಹಡಪದ ಸಮಾಜದ ರಾಜ್ಯ ಸಮಿತಿಯ ಜಿಲ್ಲಾ ಪ್ರತಿನಿಧಿ ಸದಾಶಿವ ನಾವ್ಹಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಚಂದ್ರಶೇಖರ ಸೊಲ್ಲಾಪುರ, ರವಿ ನಾವ್ಹಿ(ಹಡಪದ), ರಂಗಪ್ಪ ಹಡಪದ, ಕರಬಸಪ್ಪ ಹಡಪದ, ರಾಮಣ್ಣ ಹಡಪದ, ಪತ್ರೆಪ್ಪ ಹಡಪದ, ಮಂಜು ಹಡಪದ, ವಿಠ್ಠಲ ಹಡಪದ, ಶಿವು ಹಡಪದ, ಚಂದ್ರು ಹಡಪದ, ಅಭಿಷೇಕ ಹಡಪದ, ನಾಗರಾಜ ಸೊಲ್ಲಾಪುರ, ಉಮೇಶ ಕಾಗಿ, ಕಾಶಿನಾಥ ಹಡಪದ, ಭುಜಂಗ ಹಡಪದ, ಸಿದ್ದಪ್ಪ ಹಡಪದ ಇನ್ನಿತರರು ಇದ್ದರು.