ಹುಟ್ಟುವಾಗ ವಿಶ್ವ ಮಾನವನಾಗಿಯೇ ಹುಟ್ಟಿದ ಮಗುವನ್ನು ನಾವು ದೇಶ ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿಗಳಿಂದ ಸಂಕುಚಿತ ವ್ಯಕ್ತಿಯಾನ್ನಾಗಿ ಮಾಡಲಾಗುತ್ತಿದೆ. ಅವುಗಳಿಂದ ಪಾರಾಗಿ ಅವನನ್ನು ಬುದ್ದನಾಗಿ ಪರಿವರ್ತಿಸುವುದು ಶಿಕ್ಷಕರ ಜವಾಬ್ದಾರಿಯಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿಶ್ವ ಸಾಹಿತ್ಯಕ್ಕೆ ಶ್ರೀರಾಮಾಯಾಣ ದರ್ಶನಂ ಮಹಾ ಕಾವ್ಯವನ್ನು ಕಾಣಿಕೆಯಾಗಿ ನೀಡಿದ ಕುವೆಂಪು ಕವಿ ಶ್ರೇಷ್ಠರಾಗಿದ್ದು, ಇವರನ್ನು ಪಡೆದ ಕನ್ನಡ ನಾಡಿನ ಜನರೇ ಧನ್ಯರು ಎಂದು ಸಾಹಿತಿ ಡಾ.ಕೃಷ್ಣೇಗೌಡ ಹುಸ್ಕೂರು ತಿಳಿಸಿದರು.

ತಾಲೂಕಿನ ನಲ್ಲಿಗೆರೆ ಗ್ರಾಮದಲ್ಲಿ ರಾಷ್ಟ್ರಕವಿ ಕುವೇಂಪು ಜನ್ಮ ದಿನಾಚರಣೆ ಹಾಗೂ ವಿಶ್ವ ಮಾನವ ಜಯಂತಿ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡಿನ ಹೆಮ್ಮೆಯ ಕವಿ, ವಿಶ್ವ ಮಾನವ ತತ್ವದ ಪ್ರತಿಪಾದಕರು. ಶ್ರೇಷ್ಠ ಸಾಹಿತ್ಯದಿಂದ ಕನ್ನಡ ಭಾಷೆಗೆ ಹೊಸ ದಿಕ್ಕನ್ನು ತಂದುಕೊಟ್ಟ ದಿವ್ಯ ಚೇತನರಾಗಿದ್ದಾರೆ ಎಂದರು.

ಹುಟ್ಟುವಾಗ ವಿಶ್ವ ಮಾನವನಾಗಿಯೇ ಹುಟ್ಟಿದ ಮಗುವನ್ನು ನಾವು ದೇಶ ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿಗಳಿಂದ ಸಂಕುಚಿತ ವ್ಯಕ್ತಿಯಾನ್ನಾಗಿ ಮಾಡಲಾಗುತ್ತಿದೆ. ಅವುಗಳಿಂದ ಪಾರಾಗಿ ಅವನನ್ನು ಬುದ್ದನಾಗಿ ಪರಿವರ್ತಿಸುವುದು ಶಿಕ್ಷಕರ ಜವಾಬ್ದಾರಿಯಗಿದೆ ಎಂದರು.

ವಿದ್ಯೆ ಪಡೆದ ಪ್ರಪಂಚದ ಮಕ್ಕಳು ಅನಿಕೇತನರಾಗಬೇಕು, ಲೋಕ ಉಳಿಸಿ, ಬಾಳಿ ಬದುಕಬೇಕಾದರೇ ಮನುಜಮತ ವಿಶ್ವಪಥ, ಸರ್ವೊದಯ, ಸಮನ್ವಯ ಈ ಪಂಚಮಂತ್ರ ಎಲ್ಲಾರಿಗೂ ಮುಂದಿನ ದೃಷ್ಠಿಯಾಗಬೇಕಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿ, ಇಂದಿನ ಯುವ ಪೀಳಿಗೆ ಕುವೇಂಪು ಸಾಹಿತ್ಯವನ್ನು ಓದುವ ಅಗತ್ಯವಿದೆ. ಕುವೆಂಪು ಜಗದ ಕವಿ ಯುಗದ ಕವಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಬಸವರಾಜು ವಹಿಸಿ ಮಾತನಾಡಿದರು.

ತಾಲೂಕು ಆಡಳಿತದಿಂದ ಕುವೆಂಪು ಜನ್ಮದಿನಾಚರಣೆ

ಶ್ರೀರಂಗಪಟ್ಟಣ: ತಾಲೂಕು ಆಡಳಿತದಿಂದ ವಿಶ್ವಮಾನವ ಕುವೆಂಪು ದಿನವನ್ನು ಆಚರಿಸಲಾಯಿತು.

ಗ್ರೇಡ್ 2 ತಹಸೀಲ್ದಾರ್ ಸಂತೋಷ್ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕುವೆಂಪು ಕುರಿತು ಮಾತನಾಡಿದರು.

ಈ ವೇಳೆ ಉಪ ತಹಸೀಲ್ದಾರ್ ನಾಗೇಶ್, ಕಸಾಪ ಅಧ್ಯಕ್ಷ ಸಿದ್ದಲಿಂಗು, ಕೃಷ್ಣಪ್ಪ, ಕರವೇ ಸ್ವಾಮೀಗೌಡ, ಚಂದಗಾಲು ಶಂಕರ್, ಮಹೇಶ್, ಕೆ.ಟಿರಂಗಯ್ಯ, ದಲಿತ ಸಂಘಟನೆಯ ಕೆ.ಶೆಟ್ಟಹಳ್ಳಿ ಸುರೇಶ್, ಎಜಾಜ್ ಪಾಷ, ಶ್ರೀನಿಮಿಷಾಂಬ ದೇವಾಲಯ ಇಒ ಮಹೇಶ್, ಆರೋಗ್ಯ ಶಿಕ್ಷಣಾಧಿಕಾರಿ ಬೆನ್ನೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.