ನಾಡಿನ ಜನ ಖರ್ಗೆಯವರ ಎಂದೂ ಮರೆಯರು: ಬಾಬುರಾವ್‌ ಕಾಡ್ಲೂರ

| Published : Jul 22 2025, 12:01 AM IST

ಸಾರಾಂಶ

ಎಐಸಿಸಿ ಅಧ್ಯಕ್ಷರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂವಿಧಾನದ ಕಲಂ 371 (ಜೆ) ಜಾರಿಗೊಳಿಸಿದ್ದಕ್ಕಾಗಿ ಈ ನಾಡಿನ ಜನರು ಎಂದಿಗೂ ಮರೆಯಲಾರರು ಎಂದು ಹುಲಿಗೆಪ್ಪ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಾಬುರಾವ್ ಕಾಡ್ಲೂರ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರದ ಹುಲಿಗೆಪ್ಪ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ 83ನೇ ಜನ್ಮ ದಿನಾಚರಣೆ ಅಂಗವಾಗಿ ಕೇಕ್ ಕತ್ತರಿಸಿ, ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರತಿ ವರ್ಷ ಸಾವಿರಾರು ಎಂಬಿಬಿಎಸ್, ಎಂಜಿನಿಯರಿಂಗ್, ಫಾರ್ಮಸಿ ಸೇರಿದಂತೆ ವೃತ್ತಿಪರ ಶಿಕ್ಷಣ ಹಾಗೂ ಉನ್ನತ ಶಿಕ್ಷಣದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಮೀಸಲಾತಿ ಸಿಗುತ್ತಿದೆ. ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಹಣದ ಹೊಳೆಯನ್ನೇ ಹರಿಸುತ್ತಿದೆ. ಇದೆಲ್ಲದರ ಶ್ರೇಯ ನಿಸ್ಸಂದೇಹವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೇ ಸಲ್ಲಬೇಕು ಎಂದು ಹೇಳಿದರು.

ಹುಲಿಗೆಪ್ಪ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ್ ಕಾಡ್ಲೂರ್, ಆನಂದ್ ಕಾಡ್ಲೂರ್, ಡಾ.ಸರ್ವೋದಯ ಶಿವಪುತ್ರ, ಸುರೇಶ್ ಮಡ್ಡಿ, ತಿಮ್ಮಣ್ಣ ನಾಯಕ್, ಉಚ್ಚಪ್ಪಾ, ಯಂಕಪ್ಪಾ ತಡಿಬಿಡಿ, ಪ್ರಧಾನಿ ತೋಟದ್, ಗೌತಮ್ ಕಾಡ್ಲೂರ್, ಶಂಕರ್ ಬಾಬು ಕಾಡ್ಲೂರ್, ಮಲ್ಲಪ್ಪಾ, ಬಸವರಾಜ್ ಸೇರಿದಂತೆ ಇತರರು ಇದ್ದರು.