ಸಾರಾಂಶ
ಬ್ಯಾಡಗಿ: ಸಾಮಾಜಿಕ ನ್ಯಾಯ ಹಾಗೂ ಸರ್ವರಿಗೂ ಸಮಬಾಳು ಸಮಪಾಲು ಎಂಬ ಕಾಂಗ್ರೆಸ್ ತತ್ವ ಸಿದ್ಧಾಂತಕ್ಕೆ ಮತ್ತೆ ರಾಜ್ಯದ ಜನತೆ ಆಶೀರ್ವದಿಸಿದ್ದಾರೆ. ಇದು ಕಾಂಗ್ರೆಸ್ ಗೆಲುವಲ್ಲ ಬದಲಾಗಿ ರಾಜ್ಯದ ಜನತೆಯ ಗೆಲುವು ಎಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಹಳೆ ಪುರಸಭೆ ಎದುರು ಕಾಂಗ್ರೆಸ್ ಕಾರ್ಯಕರ್ತರ ಜೊತೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ನಂತರ ಅವರು ಮಾತನಾಡಿದರು.ಸುಳ್ಳುಗಳನ್ನೆ ಹೇಳುತ್ತಾ ಚುನಾವಣೆ ಗೆಲ್ಲಲು ಮುಂದಾಗಿದ್ದ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನಗಳನ್ನ ಟಿಕಿಸುತ್ತಾ, ಜನರಲ್ಲಿ ಕೋಮು ದ್ವೇಷ ಬೀಜ ಬಿತ್ತು ತ್ತಿದ್ದ ಬಿಜೆಪಿಗೆ ಮೂರು ಕ್ಷೇತ್ರಗಳಲ್ಲಿನ ಸೋಲು ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದೆ ಎಂದರು.ಸದಾ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿದೆ. ಯಾವತ್ತು ಎಂದು ಜನರ ಸಮಸ್ಯೆಗಳಿಗೆ ಸ್ಪಂದಿಸದ ಇಬ್ಬರು ಅಪ್ಪ ಮಕ್ಕಳ ಪಕ್ಷಕ್ಕೆ ಜನರು ಈ ಬಾರಿ ಸ್ಪಂದಿಸದೆ ದೂರ ಉಳಿದು ತಕ್ಕ ಪಾಠ ಕಲಿಸಿದ್ದಾರೆ. ಈ ಗೆಲವು ಮುಂಬರುವ ಎಲ್ಲ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ದಾನಪ್ಪ ಚೂರಿ, ಭಾಷಾಸಾಬ ದೊಡ್ಡಮನಿ, ಮಹ್ಮದ್ ರಫೀಕ್ ಮುದಗಲ್, ಮಜಿದ ಮುಲ್ಲಾ, ರಾಜೇಸಾಬ ಕಳ್ಯಾಳ, ಗಿರೀಶ ಇಂಡಿಮಠ, ಮುನಾಫ್ ಎರೆಶಿಮಿ, ಚನಬಸಪ್ಪ ಹುಲ್ಲತ್ತಿ, ರಮೇಶ ಸುತ್ತಕೋಟಿ, ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.