ಹಳೇಬೀಡಿನ ಕೆಪಿಎಸ್ ಶಾಲೆಯಲ್ಲಿ ಮೂರು ವಿಭಾಗಗಳು ಪ್ರಾಥಮಿಕ, ಪ್ರೌಢಶಾಲಾ ಮತ್ತು ಕಾಲೇಜು ವಿಭಾಗದಲ್ಲಿ ಒಳ್ಳೆಯ ಬೋಧಕ ವರ್ಗದವರು ಒಳ್ಳೆಯ ಫಲಿತಾಂಶ ನೀಡಿ ಜಿಲ್ಲೆಗೆ ಮಾದರಿಯಾಗಿರುವ ಶಾಲೆ. ಸರ್ಕಾರಿ ಶಾಲೆಯನ್ನು ನಮ್ಮ ಜನತೆ ಉಳಿಸಬೇಕು ಬೆಳೆಸಬೇಕು. ಖಾಸಗಿ ಶಾಲೆಯಲ್ಲಿ ಯಾವ ರೀತಿ ಬೋಧನಾ, ಶಿಸ್ತು, ಸಮಯ ಪಾಲನೆಗೆ ಹೆಚ್ಚಿನ ರೀತಿಯಲ್ಲಿ ಆದ್ಯತೆ ನೀಡಿ ಬೋಧನೆ ಕ್ರಮ ನುರಿತ ಶಿಕ್ಷಕರು ನಮ್ಮಲ್ಲಿ ಇದ್ದಾರೆ. ಹಾಗಾಗಿ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಿ ಎಂದು ತಿಳಿಸಿದರು.ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದೆ ನೂತನ ಕಟ್ಟಡ, ವಿಶಾಲವಾದ ಮೈದಾನ, ಒಳ್ಳೆಯ ಫಲಿತಾಂಶ ನೀಡಿರುವುದು ನಮ್ಮ ಸರ್ಕಾರಿ ಶಾಲೆ ಎಂದು ಕೆಪಿಎಸ್ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಬಿ. ಎಸ್. ಸೋಮಶೇಖರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದೆ ನೂತನ ಕಟ್ಟಡ, ವಿಶಾಲವಾದ ಮೈದಾನ, ಒಳ್ಳೆಯ ಫಲಿತಾಂಶ ನೀಡಿರುವುದು ನಮ್ಮ ಸರ್ಕಾರಿ ಶಾಲೆ ಎಂದು ಕೆಪಿಎಸ್ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಬಿ. ಎಸ್. ಸೋಮಶೇಖರ್‌ ತಿಳಿಸಿದರು.

ಇಲ್ಲಿನ ಹೃದಯ ಭಾಗದಲ್ಲಿ ಇರುವ ಕೆಪಿಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಪ್ರಾರಂಭೋತ್ಸವ, ದಾಖಲಾತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಹಳೇಬೀಡಿನ ಕೆಪಿಎಸ್ ಶಾಲೆಯಲ್ಲಿ ಮೂರು ವಿಭಾಗಗಳು ಪ್ರಾಥಮಿಕ, ಪ್ರೌಢಶಾಲಾ ಮತ್ತು ಕಾಲೇಜು ವಿಭಾಗದಲ್ಲಿ ಒಳ್ಳೆಯ ಬೋಧಕ ವರ್ಗದವರು ಒಳ್ಳೆಯ ಫಲಿತಾಂಶ ನೀಡಿ ಜಿಲ್ಲೆಗೆ ಮಾದರಿಯಾಗಿರುವ ಶಾಲೆ. ಸರ್ಕಾರಿ ಶಾಲೆಯನ್ನು ನಮ್ಮ ಜನತೆ ಉಳಿಸಬೇಕು ಬೆಳೆಸಬೇಕು. ಖಾಸಗಿ ಶಾಲೆಯಲ್ಲಿ ಯಾವ ರೀತಿ ಬೋಧನಾ, ಶಿಸ್ತು, ಸಮಯ ಪಾಲನೆಗೆ ಹೆಚ್ಚಿನ ರೀತಿಯಲ್ಲಿ ಆದ್ಯತೆ ನೀಡಿ ಬೋಧನೆ ಕ್ರಮ ನುರಿತ ಶಿಕ್ಷಕರು ನಮ್ಮಲ್ಲಿ ಇದ್ದಾರೆ. ಹಾಗಾಗಿ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಿ ಎಂದು ತಿಳಿಸಿದರು.

ಪ್ರಾಸ್ತಾವಿಕ ನುಡಿಯನ್ನು ಸಹ ಶಿಕ್ಷಕ ಮಲ್ಲಿಕಾರ್ಜುನ ಮಾತನಾಡುತ್ತಾ ಸರ್ಕಾರ ಆದೇಶ ಮೇರೆಗೆ ಎಲ್‌ಕೆಜಿ, ಯುಕೆಜಿಗೆ ನಮ್ಮ ಶಾಲೆಗೆ ೫೦ ಮಕ್ಕಳು ದಾಖಲಾತಿಯಾಗಿದೆ. ಏಳನೇ ತರಗತಿಯಲ್ಲಿ ಜಿಲ್ಲೆಗೆ ಅತ್ಯುತ್ತಮ ಫಲಿತಾಂಶ ನೀಡಿದ್ದು, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಪ್ರತ್ಯೇಕವಾಗಿ ಬೋಧಕರು ಕೆಲಸ ಮಾಡುತ್ತಿದ್ದಾರೆ ಹಾಗೂ ನೂತನವಾದ ಕೊಠಡಿಗಳು ಮತ್ತು ವಿಶಾಲವಾದ ಮೈದಾನ ಹೊಂದಿದೆ. ಸರ್ಕಾರಿ ಶಾಲೆಯನ್ನು ಬೆಳೆಸುವುದು ಉಳಿಸುವುದು ನಮ್ಮ ಸ್ಥಳೀಯ ನಾಗರಿಕರ ಬದ್ಧತೆಯಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುಪಾಕ್ಷ ಮಾತನಾಡುತ್ತಾ, ಈ ಶಾಲೆಗೆ ನಮ್ಮ ಪಂಚಾಯ್ತಿ ವತಿಯಿಂದ ಹಲವಾರು ಸಾಮಗ್ರಿಗಳನ್ನು ನೀಡಿದ್ದೇವೆ. ಪ್ರತಿ ವರ್ಷವು ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುತ್ತ ಬಂದಿದ್ದೇವೆ. ಒಳ್ಳೆಯ ಫಲಿತಾಂಶ ಬಂದಿರುವುದಕ್ಕೆ ತುಂಬಾ ಸಂತೋಷ ವಿಚಾರ. ಅದರಲ್ಲೂ ಹೈಸ್ಕೂಲ್ ವಿಭಾಗದಲ್ಲಿ ೬೨೫ಕ್ಕೆ ೬೦೧ ಮತ್ತು ೬೦೨ ಬಂದಿರುವುದು ತುಂಬ ಸಂತೋಷವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ವಿನುತ ಹಾಗೂ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ದಾಕ್ಷಾಯಣಮ್ಮ, ಸಹ ಶಿಕ್ಷಕರು ಹಾಗೂ ಪೋಷಕ ವರ್ಗದವರು ಹಾಜರಿದ್ದರು.