ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ನೋಡಲು ಛಾವಣಿ ಹತ್ತಿದ್ದವನಿಗೆ ಕರೆಂಟ್‌ ಶಾಕ್ : ಗಂಭೀರ ಗಾಯ

| Published : Aug 06 2024, 12:44 AM IST / Updated: Aug 06 2024, 10:30 AM IST

ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ನೋಡಲು ಛಾವಣಿ ಹತ್ತಿದ್ದವನಿಗೆ ಕರೆಂಟ್‌ ಶಾಕ್ : ಗಂಭೀರ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಜಿಲ್ಲೆಯಲ್ಲಿನ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸೋಮವಾರ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನೋಡಲು ಹೋಗಿ ಯುವಕನೋರ್ವ ವಿದ್ಯುತ್ ಸ್ಪರ್ಶಿಸಿ ಗಂಭೀರ ಗಾಯಗೊಂಡ ಘಟನೆ ಸಮೀಪದ ಜುಗೂಳ ಗ್ರಾಮದಲ್ಲಿ ನಡೆದಿದೆ.

 ಕಾಗವಾಡ :  ಬೆಳಗಾವಿ ಜಿಲ್ಲೆಯಲ್ಲಿನ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸೋಮವಾರ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನೋಡಲು ಹೋಗಿ ಯುವಕನೋರ್ವ ವಿದ್ಯುತ್ ಸ್ಪರ್ಶಿಸಿ ಗಂಭೀರ ಗಾಯಗೊಂಡ ಘಟನೆ ಸಮೀಪದ ಜುಗೂಳ ಗ್ರಾಮದಲ್ಲಿ ನಡೆದಿದೆ.

ಜುಗೂಳ ಗ್ರಾಮದ ಮಹೇಶ ಹುನ್ನರಗಿ(24) ಗಾಯಗೊಂಡ ಯುವಕ.

ಪ್ರವಾಹ ಬಾಧಿತ ಪ್ರದೇಶಗಳ ವೀಕ್ಷಿಸಣೆಗೆ ಸೋಮವಾರ ಜುಗೂಳ ಗ್ರಾಮಕ್ಕೆ ಸಿಎಂ ಆಗಮಿಸುತ್ತಿದ್ದರು. ಈ ವೇಳೆ ಅವರನ್ನು ನೋಡಲು ಮನೆಯ ಮೇಲ್ಛಾವಣಿ ಏರಿ ಕುಳಿತಿದ್ದ. ಈ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಶಾಕ್ ಹೊಡೆದು ಏಳು ಅಡಿ ಎತ್ತರದಿಂದ ಕುಸಿದು ಬಿದ್ದ. ತೀವ್ರವಾಗಿ ಅಸ್ವಸ್ಥವಾಗಿದ್ದ ಯುವಕ ಮಹೇಶನನ್ನು ಸ್ಥಳೀಯರು ತಕ್ಷಣವೇ ಅಂಬ್ಯುಲನ್ಸ್ ಕರೆಯಿಸಿ ಕಾಗವಾಡ ಆಸ್ಪತ್ರೆಗೆ ರವಾನಿಸಿದರು. ಮುಖ ಹಾಗೂ ಕೈಗೆ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಗೆ ಅಧಿಕಾರಿಗಳ ಭೇಟಿ:

ಕಾಗವಾಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಹಸೀಲ್ದಾರ ರಾಜೇಶ ಬುರ್ಲಿ, ತಾಲೂಕು ವೈದ್ಯಾಧಿಕಾರಿ ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ತಾ.ಪಂ. ಎಇಒ ವೀರಣ್ಣ ವಾಲಿ, ಸಿಡಿಒ ಸಂಜೀವಕುಮಾರ ಸದಲಗೆ, ಬಿಇಒ ಎಂ.ಆರ್. ಮುಂಜೆ, ಉಪತಹಶೀಲ್ದಾರ ಅಣ್ಣಾಸಾಬ ಕೋರೆ ಭೇಟ್ಟಿ ನೀಡಿ, ಯುವಕನ ಆರೋಗ್ಯ ವಿಚಾರಿಸಿದ್ದಾರೆ.

ವೇದಿಕೆ ಬಳಿ ನೂಕುನುಗ್ಗಲು:

ಜುಗೂಳ ಗ್ರಾಮದಲ್ಲಿ ಪ್ರವಾಹಪೀಡಿತ ಪ್ರದೇಶಗಳ ವೀಕ್ಷಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಗದಿತ ಕಾರ್ಯಕ್ರಮದ ವೇದಿಕೆಗೆ ಆಗಮಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಶಾಸಕರಾದ ರಾಜು ಕಾಗೆ, ಲಕ್ಷ್ಮಣ ಸವದಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ವೇದಿಕೆ ಮುಂಭಾಗದಲ್ಲಿ ಹಾಗೂ ವೇದಿಕೆ ಬಳಿ ಮುಖಂಡರು ಹಾಗೂ ಜನರಿಂದ ನೂಕುನುಗ್ಗಲು ಉಂಟಾಯಿತು. ಈ ಸಂದರ್ಭದಲ್ಲಿ ಹಲವರು ತೊಂದರೆಗೆ ಒಳಗಾದರು. ಆದರೂ ಸಹ, ನೂಕುನುಗ್ಗಲು ತಡೆಯಲು ಪೊಲೀಸರು ವಿಫಲರಾದರು.

ಪತ್ರಕರ್ತರನ್ನೂ ಬಿಡದ ಎಸ್ಪಿ

ವೇದಿಕೆ ಬಳಿ ಉಂಟಾದ ನೂಕುನುಗ್ಗಲನ್ನು ತಡೆಯಲು ಪೊಲೀಸರು ವಿಫಲರಾಗಿದ್ದು, ಒಂದೆಡೆಯಾದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಎಲ್ಲರನ್ನೂ ಹಿಂದಕ್ಕೆ ತಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರನ್ನೂ ಸಹ ವೇದಿಕೆಯತ್ತ ಹೋಗಲು ಬಿಡಲಿಲ್ಲ. ಪತ್ರಕರ್ತರು ಎಷ್ಟೇ ವಿನಂತಿಸಿದರೂ ವಾಗ್ವಾದಕ್ಕಿಳಿದು ಪತ್ರಕರ್ತರನ್ನು ಅವಮಾನಿಸಿದ ಘಟನೆ ನಡೆಯಿತು.

ಪೊಟೋಶಿರ್ಷಿಕೆ(5-ಕಾಗವಾಡ-01) ವಿದ್ಯುತ್ ತಗುಲಿ ಗಾಯಗೊಂಡ ಯುಕನನ್ನು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸುತ್ತಿರುವ ತಹಸೀಲ್ದಾರ್‌ ರಾಜೇಶ ಬುರ್ಲಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು.