ಚಿಕ್ಕಮಗಳೂರುಸಂಕಲ್ಪಿತ ಕೋಟಿ ರುದ್ರ ಹೋಮದ ಅಂಗವಾಗಿ ಹಿರೇಮಗಳೂರಿನ ಪಂಚವಟಿ ಕುಟಿರದಲ್ಲಿ ಶ್ರೀ ರುದ್ರಪಾರಾಯಣ ಬಳಗ ದಿಂದ ಕಳೆದ 11 ದಿನಗಳ ಕಾಲ ನಡೆದ ಅತಿರುದ್ರ ಪಾರಾಯಣ ಜಪಯಜ್ಞ ರುದ್ರ ಹೋಮದೊಂದಿಗೆ ಭಾನುವಾರ ಸಂಪನ್ನಗೊಂಡಿತು.

- 11 ದಿನಗಳ ಕಾಲ ನಡೆದ ಅತಿರುದ್ರ ಪಾರಾಯಣ ಜಪಯಜ್ಞ ರುದ್ರ ಹೋಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಂಕಲ್ಪಿತ ಕೋಟಿ ರುದ್ರ ಹೋಮದ ಅಂಗವಾಗಿ ಹಿರೇಮಗಳೂರಿನ ಪಂಚವಟಿ ಕುಟಿರದಲ್ಲಿ ಶ್ರೀ ರುದ್ರಪಾರಾಯಣ ಬಳಗ ದಿಂದ ಕಳೆದ 11 ದಿನಗಳ ಕಾಲ ನಡೆದ ಅತಿರುದ್ರ ಪಾರಾಯಣ ಜಪಯಜ್ಞ ರುದ್ರ ಹೋಮದೊಂದಿಗೆ ಭಾನುವಾರ ಸಂಪನ್ನಗೊಂಡಿತು.

ಹೊಸದುರ್ಗದ ಶ್ರೀ ಶ್ರೀಕಾಂತಾನಂದ ಸರಸ್ವತಿ ಭಗವಾನ್, ಹಿರಿಯೂರಿನ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಶಿವಮೊಗ್ಗ ಶ್ರೀ ರಾಮಕೃಷ್ಣಾಶ್ರಮದ ಶ್ರೀ ವಿನಯಾನಂದ ಸ್ವಾಮೀಜಿ, ಹಿರಿಯೂರಿನ ಶ್ರೀ ಸ್ವಪ್ರಭಾನಂದ ಸ್ವಾಮೀಜಿ ಸಮ್ಮುಖದಲ್ಲಿ ಬೆಳಿಗ್ಗೆ ಭಕ್ತರಿಂದ ಸಾಮೂಹಿಕ ರುದ್ರ ಪಾರಾಯಣ, ರುದ್ರ ಹೋಮದ ಪೂರ್ಣಹುತಿ ಜರುಗಿತು.ಭಕ್ತರಿಂದ ವಿಶೇಷ ಭಜನೆ, ನಾಮ ಸಂಕೀರ್ತನೆ ನಡೆದವು, ಈ ವೇಳೆ ಆಶೀರ್ವಚನ ನೀಡಿದ ಶ್ರೀಕಾಂತಾನಂದ ಸರಸ್ವತಿ ಮಹಾರಾಜ್ ಲೋಕ ಕಲ್ಯಾಣಾರ್ಥವಾಗಿ 2030 ರಲ್ಲಿ ಕೋಟಿ ರುದ್ರ ಮಹಾ ಯಾಗ ನಡೆಸಲು ಸಂಕಲ್ಪಿಸಿದ್ದು ಅದರ ಅಂಗವಾಗಿ ಈಗಾಗಲೇ 65 ಲಕ್ಷ ರುದ್ರ ಪಾರಾಯಣ ಮಾಡಲಾಗಿದೆ. ಇನ್ನೂ 35 ಲಕ್ಷ ಪಾರಾಯಣ ಬಾಕಿ ಇದ್ದು, ರಾಜ್ಯದ ವಿವಿಧ ಊರುಗಳಲ್ಲಿ ಒಂದು ಕೋಟಿಗೂ ಅಧಿಕ ಸಂಖ್ಯೆಯಲ್ಲಿ ರುದ್ರ ಪಾರಾಯಣ ಜರುಗಲಿದೆ ಎಂದು ತಿಳಿಸಿದರು.ರುದ್ರ ಹೋಮದ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ, ಸಾಹಿತಿ, ಡಾ. ಜ್ಯೋತಿಶಂಕರ್ ಪರಬ್ರಹ್ಮನಾಗಿ ನಿಂತು ಜಗತ್ತಿನ ಎಲ್ಲವನ್ನೂ ನಡೆಸುವವನು ರುದ್ರನು, ಶಿವನು ಮಂಗಳವನ್ನುಂಟು ಮಾಡುತ್ತಾನೆ ಎಂದು ಹೇಳಿದರು.ಹಿರಿಯೂರಿನ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಶಿವಮೊಗ್ಗ ರಾಮಕೃಷ್ಣಾಶ್ರಮದ ಶ್ರೀ ವಿನಯಾನಂದ ಸ್ವಾಮೀಜಿ, ಹಿರಿಯೂರಿನ ಶ್ರೀ ಸ್ವಪ್ರಭಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.ಕಾರ್ಯಕ್ರಮದ ಆಯೋಜಕ ರುದ್ರ ಪಾರಾಯಣ ಬಳಗದ ಮುಖ್ಯಸ್ಥ ಗೋಪಿನಾಥ್ ಮಾತನಾಡಿ, ಕಳೆದ 11 ದಿನಗಳಲ್ಲಿ 17,351 ರುದ್ರ ಪಾರಾಯಣ ಮಾಡಲಾಗಿದೆ ಎಂದು ತಿಳಿಸಿದರು. ಅತಿರುದ್ರ ಪಾರಾಯಣ ಜಪ ಯಜ್ಞಕ್ಕೆ ತಮ್ಮೊಂದಿಗೆ ಕೈಜೋಡಿಸಿ ಸಹಕರಿಸಿದವರಿಗೆ ಅದರ ಯಶಸ್ಸಿಗೆ ದುಡಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಸಮಾರೋಪ ಸಮಾರಂಭದ ಆರಂಭಕ್ಕೆ ಮುನ್ನ ವಿಪ್ರರಿಂದ ವೇದಘೋಷ ನಡೆಯಿತು, ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು, ಚಿಕ್ಕಮಗಳೂರು, ಹಾಸನ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಊರುಗಳಿಂದ ಆಗಮಿಸಿದ್ದ ಭಕ್ತರು ಕಳೆದ 11 ದಿನಗಳ ಕಾಲ ತ್ರಿಕಾಲದಲ್ಲೂ ನಿರಂತರವಾಗಿ ರುದ್ರ ಪಾರಾಯಣ ಮಾಡಿದರು.ಸಾಹಿತಿ ಡಾ, ಬೆಳವಾಡಿ ಮಂಜುನಾಥ್, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ನಾಯಕ್ ಸಚ್ಚಿದಾನಂದ ಉಪಸ್ಥಿತರಿದ್ದರು. 28 ಕೆಸಿಕೆಎಂ 1ಸಂಕಲ್ಪಿತ ಕೋಟಿ ರುದ್ರ ಹೋಮದ ಅಂಗವಾಗಿ ಹಿರೇಮಗಳೂರಿನ ಪಂಚವಟಿ ಕುಟಿರದಲ್ಲಿ ಅತಿರುದ್ರ ಪಾರಾಯಣ ಜಪ ಯಜ್ಞ ರುದ್ರ ಹೋಮದ ಕೊನೆಯ ದಿನವಾದ ಭಾನುವಾರ ಸಮಾರೋಪ ಸಮಾರಂಭ ನಡೆಯಿತು.