ಪೊಲೀಸರು ಒತ್ತಡಕ್ಕೆ ಮಣಿದು ಕೆಲಸ ಮಾಡುವುದನ್ನು ನಿಲ್ಲಿಸಬೇಕು.
ಕನ್ನಡಪ್ರಭ ವಾರ್ತೆ ಮುಂಡಗೋಡ
ಪೊಲೀಸ ಇಲಾಖೆ ಶಾಸಕರು ಹಾಗೂ ಸರ್ಕಾರದ ಒತ್ತಡಕ್ಕೆ ಮಣಿದು ಕೆಲಸ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಬದಲಾಗಿ ಕಾನೂನು ಏನು ಹೇಳುತ್ತದೆ ಅದನ್ನು ಪಾಲಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರೆ ಸಮಾಜ ಪೊಲೀಸರನ್ನು ತಲೆಯ ಮೇಲಿಟ್ಟು ಮೆರವಣಿಗೆ ಮಾಡುತ್ತದೆ ಎಂದು ಶ್ರೀರಾಮ ಸೇನೆ ಸಂಚಾಲಕ ಪ್ರಮೋದ ಮುತಾಲಿಕ ಹೇಳಿದರು.ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಖಂಡಿಸಿ ವಿವಿಧ ಹಿಂದು ಪರ ಸಂಘಟನೆಗಳು ಗುರುವಾರ ನೀಡಿದ್ದ ಮುಂಡಗೋಡ ಬಂದ್ ಕರೆ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮತ ಬ್ಯಾಂಕ್ ರಾಜಕಾರಣ ಕಾಯ್ದೆ ಕಾನೂನುಗಳು ಹಳ್ಳ ಹಿಡಿದುಹೋಗುತ್ತಿವೆ ಎಂದರು.
ಸೇನೆಯಲ್ಲಿ ಅವಿರತ ಸೇವೆ ಸಲ್ಲಿಸಿದಂತ ಯೋಧರ ಕುಟುಂಬದಲ್ಲಿ ಇಂತಹ ಘಟನೆ ನಡೆದಿರುವುದು ಶೋಚನಿಯ ಸಂಗತಿ. ಪ್ರತಿಭಟನೆಯಲ್ಲಿ ಭಾಗವಹಿಸಬಾರದು ಎಂತಲೇ ನೊಂದ ಬಾಲಕಿಯ ಪಾಲಕರನ್ನು ಕಾರವಾರಕ್ಕೆ ಕರೆದೊಯ್ಯಲಾಗಿದೆ. ಇಂದು ನಾವು ಇಂತಹ ಮಾನಸಿಕತೆಯ ವಿರುದ್ದ ಹೋರಾಟ ಮಾಡಬೇಕಿದೆ.ಮುಸ್ಲಿಂ ಭಾಂದವರು ಕೇವಲ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಸಾಲದು. ಸಮಾಜದಲ್ಲಿ ಸಾಮರಸ್ಯ ಮೂಡಬೇಕಾದರೆ ಆರೋಪಿ ಇಸ್ಮಾಯಿಲಸಾಬ್ ಕುಟುಂಬದ ವಿರುದ್ದ ಮುಸ್ಲೀಂ ಸಮಾಜದಿಂದ ಬಹಿಷ್ಕಾರ ಹಾಗೂ ಪತ್ವಾ ಹೊರಡಿಸಬೇಕು. ಮುಸ್ಲಿಂ ವಕೀಲರಿಂದ ಆರೋಪಿಯ ಪರವಾಗಿ ಜಾಮೀನು ಅರ್ಜಿ ಹಾಗೂ ವಕಾಲತ್ತು ಮಾಡದಂತೆ ತಾಕೀತು ಮಾಡಬೇಕು ಒಂದಾನುವೇಳೆ ಆರೋಪಿ ಪರವಾಗಿ ವಕಾಲತ್ತು ಮಾಡಿದವರ ವಿರುದ್ದವೂ ಕೂಡ ಬಹಿಷ್ಕಾರ ಹಾಕಬೇಕು.
ಈ ಹಿಂದೆ ೨೭ ಬಾರಿ ಚಾಕು ಇರಿಸಿಕೊಂಡು ಹತ್ಯೆಯಾದ ಹುಬ್ಬಳ್ಳಿಯ ನೇಹಾ ಹಿರೇಮಠ ಪ್ರಕರಣದಲ್ಲಿ ಇಂದಿಗೂ ಕೂಡ ನ್ಯಾಯ ಸಿಕ್ಕಿಲ್ಲ. ಇದರಿಂದ ಕಾನೂನಿನ ಬಗ್ಗೆ ಬಯವಿಲ್ಲದಂತಾಗಿದೆ. ನೇಹಾ ಹಿರೇಮಠ ಹತ್ಯೆಯಾದಾಗ ಜಮಾತೆ ಇಸ್ಲಾಂನವರು ಆರೋಪಿ ಪರವಾಗಿ ವಕಾಲತ್ತು ಮಾಡುವುದದಿಲ್ಲ ಎಂದು ಹೇಳಿದ್ದರು. ಆದರೆ ಮುಸ್ಲೀಂ ವಕೀಲರಿಂದಲೇ ೫ ಬಾರಿ ಜಾಮೀನು ಅರ್ಜಿ ಹಾಕಿ ಪ್ರಕರಣವನ್ನು ನಡೆಸಲಾಗುತ್ತಿದೆ. ಇದೇ ಮನಸ್ಥಿತಿ ಮುಂದುವರೆಯಬಾರದು. ವಕೀಲರ ಸಂಘ ಈ ಬಗ್ಗೆ ಕಠೀಣ ನಿರ್ಣಯ ಕೈಗೊಳ್ಳಬೇಕು. ನ್ಯಾಯಾಲಯಗಳು ಕೂಡ ಇಂತಹ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ೬ ತಿಂಗಳೊಳಗಾಗಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದರು.