ಸಾರಾಂಶ
ದಾವಣಗೆರೆ: ಪೂರ್ವ ವಲಯದ ಪೊಲೀಸ್ ತಂಡಗಳು ಹಾಗೂ ದಾವಣಗೆರೆ ವರದಿಗಾರರ ತಂಡವನ್ನು ಒಳಗೊಂಡಂತೆ ಜನವರಿ ತಿಂಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವುದಾಗಿ ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ, ಪೊಲೀಸ್ ತಂಡದ ನಾಯಕ ಡಾ.ರಮೇಶ ಬಾನೋಟ್ ತಿಳಿಸಿದರು.
ದಾವಣಗೆರೆ: ಪೂರ್ವ ವಲಯದ ಪೊಲೀಸ್ ತಂಡಗಳು ಹಾಗೂ ದಾವಣಗೆರೆ ವರದಿಗಾರರ ತಂಡವನ್ನು ಒಳಗೊಂಡಂತೆ ಜನವರಿ ತಿಂಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವುದಾಗಿ ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ, ಪೊಲೀಸ್ ತಂಡದ ನಾಯಕ ಡಾ.ರಮೇಶ ಬಾನೋಟ್ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಶನಿವಾರ ಜಿಲ್ಲಾ ವರದಿಗಾರರ ಕೂಟ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಮಧ್ಯೆ ನಡೆದ ಪಂದ್ಯದಲ್ಲಿ ವಿಜೇತ ಪೊಲೀಸ್ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಪೊಲೀಸ್ ಮತ್ತು ಮಾಧ್ಯಮದವರ ಮಧ್ಯೆ ಉತ್ತಮ ಬಾಂಧವ್ಯ ಮೂಡಿಸುವ ನಿಟ್ಟಿನಲ್ಲಿ ಕ್ರೀಡೆಗಳು ಸಹಕಾರಿ ಎಂದರು.ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮಾತನಾಡಿದರು. ವರದಿಗಾರರ ಕೂಟದ ಸಂಸ್ಥಾಪಕ ಅಧ್ಯಕ್ಷರಾದ ಕೆ.ಏಕಾಂತಪ್ಪ, ಹಾಲಿ ಅಧ್ಯಕ್ಷ, ಕನ್ನಡಪ್ರಭದ ನಾಗರಾಜ ಎಸ್.ಬಡದಾಳ್, ನಿಕಟ ಪೂರ್ವ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಬ್ಬೂರು, ಬಸವರಾಜ ದೊಡ್ಮನಿ, ಸಿದ್ದಯ್ಯ ಹಿರೇಮಠ, ಸುವರ್ಣ ನ್ಯೂಸ್‌ನ ಡಾ.ಸಿ.ವರದರಾಜ ಸೇರಿದಂತೆ ಕೂಟದ ಪದಾಧಿಕಾರಿಗಳು, ಸದಸ್ಯರು ಇದ್ದರು.