ದೇವರಮನೆಯಲ್ಲಿ ಪ್ರವಾಸಿಗರಿಗೆ ಎಚ್ಚರಿಸಿದ ಪೊಲೀಸರು

| Published : Jul 09 2024, 12:51 AM IST

ಸಾರಾಂಶ

ಕೊಟ್ಟಿಗೆಹಾರ, ಬಣಕಲ್ ಸಮೀಪದ ಪ್ರವಾಸಿ ತಾಣ ದೇವರ ಮನೆಯಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಪೊಲೀಸರು ಗಸ್ತು ತಿರುಗಿ ಮೋಜು ಮಸ್ತಿ ಮಾಡುವ ಪ್ರವಾಸಿಗರಿಗೆ ದಂಡದ ಜೊತೆಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಕೊಟ್ಟಿಗೆಹಾರ

ಬಣಕಲ್ ಸಮೀಪದ ಪ್ರವಾಸಿ ತಾಣ ದೇವರ ಮನೆಯಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಪೊಲೀಸರು ಗಸ್ತು ತಿರುಗಿ ಮೋಜು ಮಸ್ತಿ ಮಾಡುವ ಪ್ರವಾಸಿಗರಿಗೆ ದಂಡದ ಜೊತೆಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ್ದ ಬಣಕಲ್‌ ಠಾಣೆಯ ಸಬ್ ಇನ್ ಸ್ಪೆಕ್ಟರ್ ಡಿ.ವಿ.ರೇಣುಕಾ ಮಾತನಾಡಿ, ದೇವರಮನೆ ಸ್ಥಳ ಭಕ್ತಿಯ ತಾಣವಾಗಿದ್ದು ಇಲ್ಲಿ ಶ್ರೀಕಾಲ ಭೈರವೇಶ್ವರ ದೇವಸ್ಥಾನವಿದೆ. ಇಲ್ಲಿ ನಿತ್ಯ ಪ್ರವಾಸಿಗರು ಮೋಜು ಮಸ್ತಿ ಮಾಡಿಯಿಂದ ಸಂಚಾರ ದಟ್ಟಣೆ ಮಾಡಿ ಜನರಿಗೆ ಕಿರಿಕಿರಿ ತರುವ ಸನ್ನಿವೇಶ ನಿರ್ಮಾಣವಾಗುತ್ತಿದೆ ಎಂದು ಹೇಳಿದ್ದಾರೆ.

ವಾರಾಂತ್ಯದಲ್ಲಿ ಅಲ್ಲದೇ ಈಗ ನಿತ್ಯದ ದಿನಗಳಲ್ಲೂ ಪ್ರವಾಸಿಗರು ಅದರಲ್ಲೂ ಯುವಕರು ಮದ್ಯಪಾನ ಮಾಡಿ ಕೂಗಾಡುವ ದೃಶ್ಯ ಕಂಡು ಬರುತ್ತಿದೆ. ಹಾಗಾಗಿ ಸೋಮವಾರ ಸಿಬ್ಬಂದಿಯೊಂದಿಗೆ ದೇವರಮನೆಗೆ ಭೇಟಿ ನೀಡಿ ಮದ್ಯಪಾನ ಮಾಡಿದ ಯುವಕರಿಗೆ ದಂಡ ವಿಧಿಸಿ ಎಚ್ಚರಿಸಲಾಗಿದೆ. ಪರಿಸರ ಕಲುಷಿತ ಮಾಡುವವರಿಗೆ ಕಡಿವಾಣ ಹಾಕಲಾಗುವುದು. ಪ್ರವಾಸಿಗರು ದೇವಸ್ಥಾನಕ್ಕೆ ಭೇಟಿ ಕೊಟ್ಟು ಪರಿಸರ ಅಸ್ವಾದನೆ ಮಾಡುವುದು ಒಳಿತು. ಹಾಗಂತ ಮೋಜು ಮಸ್ತಿಗೆ ಅವಕಾಶ ನೀಡುವುದಿಲ್ಲ. ಟ್ರಾಫಿಕ್ ಜಾಮ್ ಮಾಡಿ ಜನರಿಗೆ ತೊಂದರೆ ಕೊಡುವವರಿಗೂ ಲಾಠಿ ರುಚಿ ತೋರಿಸುತ್ತೇವೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಎಎಸ್ಐ ಟಿ.ಕೆ.ಶಶಿ, ಪೊಲೀಸ್ ಸಿಬ್ಬಂದಿ ಅಶೋಕ್, ವರ್ಷಿಣಿ ಇದ್ದರು. 8 ಕೆಸಿಕೆಎಂ 5ಮೂಡಿಗೆರೆ ತಾಲೂಕಿನ ದೇವರಮನೆ ತಾಣದಲ್ಲಿ ಮೋಜು, ಮಸ್ತಿ ಮಾಡುತ್ತಿದ್ದ ಯುವಕರಿಗೆ ಬಣಕಲ್‌ ಪೊಲೀಸ್‌ ಸಬ್‌ ಇನ್ಸ್‌ಸ್ಪೆಕ್ಟರ್‌ ರೇಣುಕಾ ಸೋಮವಾರ ದಂಡ ವಿಧಿಸಿದರು.