ಕಲೆ, ಸಾಹಿತ್ಯ ಸಂಗೀತಕ್ಕೆ ನಮ್ಮ ದೇಶ ತವರೂರು: ಉಮೇಶ ಮುದ್ನಾಳ

| Published : Jul 09 2024, 12:51 AM IST

ಸಾರಾಂಶ

ಕಲೆ, ಸಾಹಿತ್ಯ ಹಾಗೂ ಸಂಗೀತ ಶಾಸ್ತ್ರಕ್ಕೆ ನಮ್ಮ ದೇಶ ತವರೂರು. ಪ್ರಾಚೀನ ಕಾಲದ ಸಂಗೀತ ಹಾಗೂ ನೃತ್ಯಗಳು ಭಾರತೀಯರ ಬದುಕಿನ ಪ್ರತಿಬಿಂಬವಾಗಿ ರೂಪ ಪಡೆದು ನಮ್ಮ ನಾಗರಿಕತೆಯನ್ನು ಶ್ರೀಮಂತ ಗೊಳಿಸಿವೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಕಲೆ, ಸಾಹಿತ್ಯ ಹಾಗೂ ಸಂಗೀತ ಶಾಸ್ತ್ರಕ್ಕೆ ನಮ್ಮ ದೇಶ ತವರೂರು. ಪ್ರಾಚೀನ ಕಾಲದ ಸಂಗೀತ ಹಾಗೂ ನೃತ್ಯಗಳು ಭಾರತೀಯರ ಬದುಕಿನ ಪ್ರತಿಬಿಂಬವಾಗಿ ರೂಪ ಪಡೆದು ನಮ್ಮ ನಾಗರಿಕತೆಯನ್ನು ಶ್ರೀಮಂತ ಗೊಳಿಸಿವೆ ಎಂದು ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ, ಮುದ್ನಾಳ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಗಾನಯೋಗಿ ಸಾಂಸ್ಕೃತಿಕ ಸಂಗೀತ ಕಲಾ ಸಂಘ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಜಂಟಿಯಾಗಿ ಆಯೋಜಿಸಿದ್ದ ಸಂಗೀತ ಹಾಗೂ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಜ್ಞಾನದ ಪ್ರಸಾರ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಪರಿಪೂರ್ಣ ಕಲಾ ಮಾಧ್ಯಮಕ್ಕೆ ಭಾರತ ವಿಶ್ವಕ್ಕೆ ತವರೂರು ಭರತನಾಟ್ಯ ಕಲೆಯನ್ನು ಹೆಚ್ಚು ಆಸಕ್ತಿಯಿಂದ ಕಲಿಯುವ ಮೂಲಕ ಜಿಲ್ಲೆಯ ಸಾಂಸ್ಕೃತಿಕ ಹಿರಿಮೆಯನ್ನು ಬೆಳೆಸುವಲ್ಲಿ ಸಾಂಸ್ಕೃತಿಕ ಸಂಘ, ಸಂಸ್ಥೆಗಳ ಜೊತೆಗೆ ಮಕ್ಕಳ, ಪಾಲಕ, ಪೋಷಕರು, ತರಬೇತಿದಾರರು ಮಹತ್ವದ ಪಾತ್ರ ನಿರ್ವಹಿಸಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವಿಥೇಶ್ ಕುಮಾರ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಬಹು ಸಂಸ್ಕೃತಿಯ ಪ್ರತೀಕವಾಗಿವೆ, ಮಕ್ಕಳಲ್ಲಿನ ಸೂಕ್ತ ಪ್ರತಿಭೆಯನ್ನು ಅನಾವರಣಗೊಳಿಸಲು ತಮ್ಮ ಗಾನಯೋಗಿ ಸಾಂಸ್ಕೃತಿಕ ಸಂಗೀತ ಕಲಾ ಸಂಘ(ರಿ) ಸಾಂಸ್ಕೃತಿಕ, ಸಂಗೀತ ಕಲಾ ಸಂಘ ಯಾದಗಿರಿ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದೆ ಎಂದು ಮಾಹಿತಿ ಒದಗಿಸಿದರು.

ಕಾರ್ಯಕ್ರಮದ ಅಂಗವಾಗಿ ಶರಣು ಕೊಲ್ಕುಂದ ರವರಿಂದ ವಚನ ಸಂಗೀತ,ಸ್ವಾತಿ ಶಾಹಾಪುರ ಹಾಗೂ ಕಲಾತಂಡ, ದವರಿಂದ ದಾಸವಾಣಿ, ಮತ್ತು ಸ್ವಾತಿ ಜಾಕ ಸಾನ್ವಿ ಕಿರಗಿ ರವರಿಂದ ಭರತನಾಟ್ಯ, ಎಂ.ಜೆ.ಡಾನ್ಸ್ ಹಾಗೂ ಫಿಟ್ನೆಸ್ ಅಕಾಡೆಮಿಯ ಮಕ್ಕಳಿಂದ ಜಾನಪದ ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು,

ವೇದಿಕೆಯಲ್ಲಿ ಶರಣಪ್ಪ ಹದನೂರ್, ಶಶಿ ಸುಪರ್ ಬಜಾರ್‌ನ ಮಾಲೀಕ ಮಲ್ಲಿಕಾರ್ಜುನ್ ಶಿರಗೋಳ, ಶ್ರೀರಕ್ಷಾ ಕಾಲೇಜಿನ ಕೃಷ್ಣಮೂರ್ತಿ ಕುಲಕರ್ಣಿ, ಯಾದಗಿರಿ ಟೈಮ್ಸ್ ಪತ್ರಿಕೆ ಸಂಪಾದಕ ವೈಜನಾಥ್ ಹಿರೇಮಠ, ಅಂಜಿನೇಯ ಬೆಳಗೇರಿ, ವೀರಣ್ಣ ಸೌಕಾರ ಕುಂಟೆಮರಿ, ಸಂಗೀತ ಶಿಕ್ಷಕರಾದ ಚಂದ್ರಶೇಖರ್ ಗೋಗಿ, ಶರಣಬಸವ ವಠಾರ, ಅಯ್ಯಣಗೌಡ ಆಲೂರು, ಯೋಗ ಶಿಕ್ಷಕರಾದ ಸೋಮನಾಥ ರೆಡ್ಡಿ ಕಣೇಕಲ್ ವೇದಿಕೆಯಲ್ಲಿ ಇದ್ದರು.

ನೂರಾರು ಸಂಖ್ಯೆಯಲ್ಲಿ ಸಂಗೀತ ಪ್ರೇಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಶರಣು ಕೋಲ್ಕುಂದ ಪ್ರಾರ್ಥಿಸಿದರು, ದುರ್ಗಪ್ಪ ಎಚ್ ಪೂಜಾರಿ ಸ್ವಾಗತಿಸಿದರು ಉಪನ್ಯಾಸಕ ಗುರು ಪ್ರಸಾದ್ ವೈದ್ಯ ನಿರೂಪಿಸಿ ವಂದಿಸಿದರು.