ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮಳೆ ಹೆಚ್ಚಿಗೆ ಸುರಿತಿದೆ, ಎಲ್ಲೆಂದರಲ್ಲಿ ಕಸ, ಕೊಳಚೆ ಸೇಖರಣೆಯಾಗುತ್ತಿದೆ, ಎಲ್ಲವನ್ನು ಸ್ವಚ್ಛಗೊಳಿಸಿ ನಗರ ನೈರ್ಮಲ್ಯ ಕಾಪಾಡುವಲ್ಲಿ ಮುತುವರ್ಜಿ ತೋರದಿದ್ರೆ ಶಿಸ್ತ್ರ ಕ್ರಮ ನಿಶ್ಚಿತ ಎಂದು ಪಾಲಿಕೆಯ ಸಿಬ್ಬಂದಿಗೆ ಶಾಸಕ ಅಲ್ಲಂಪ್ರಭು ಪಾಟೀಲ್ ಮಾತಿನ ಬಿಸಿ ಮುಟ್ಟಿಸಿದ್ದಾರೆ.ಡೆಂಘೀ ಸೇರಿದಂತೆ ಸಾಂಕ್ರಾಮಿಕ ರೋಗಬಾಧೆಯ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು, ನೈರ್ಮಲ್ಯ ನಿರೀಕ್ಷಕರ ಸಭೆ ನಡೆಸಿದ ಶಾಸಕರು, ಇನ್ನಾದ್ರು ಕೆಲ್ಸ ಮಾಡ್ರಿ, ನಿಮ್ಮ ಸಂಸಾರ, ಮಕ್ಕಳೆಲ್ಲರು ಕಲಬುರಗಿಯೊಳ್ಗ ಇದ್ದಾರಲ್ಲೋ, ನೀವು ಹೋದಲ್ಲೆಲ್ಲಾ ಕಸ, ಕೊಳಚೆ ಕಂಡ್ರ ಸ್ವಚ್ಛತೆಗೆ ಮುಂದಾಗ್ರಿ, ಎಲ್ಲಾನು ನಾವೇ ಹಳಬೇಕಾ ನಿಮಗೆ ಎಂದು ತರಾಟೆಗೆ ತೆಗೆದುಕೊಂಡರು.
ಡೆಂಘೀ ಡಂಗುರ ಸಾರುತ್ತಿದೆ. ಸೊಳ್ಳೆಕಾಟ ಹೆಚ್ಚುತ್ತಿದೆ. ಮಳೆ ಸುರಿಯುತ್ತಿದೆ. ಹೆಚ್ಚಿನ ಮಲೆ ಇರೋದರಿಂದ ರೋಗಗಳು ಸಾಲುಸಾಲು ಸವಾಲು ಹಾಕುತ್ತಿವೆ. ಹೀಗಿರುವಾಗ ನಿಮ್ಮಿಂದ ಹೆಚ್ಚಿನ ಕೆಲಸ ನಬೇಕು. ಅದನ್ನೆಲ್ಲ ಬಿಟ್ಟು ಎಂಡಿನಂತೆ ಮಲಗಿದರೆ ಹೇಗೆಂದು ಗುಡುಗಿದರು.ಸಿಬ್ಬಂದಿ ಕೆಲಸ ಮಾಡದೆ ಮೈಗಳ್ಳರಾದರೆ ಸಹಿಸಲಾಗದು, ವಾದೊಳಗೆ ಕಲಬುರಗಿ ಸ್ವಚ್ಛತೆಗೆ ಕೆಲಸಗಲಾಗಬೇಕು, ಕುಳಿ ತುಂಬಬೇಕು, ರಸ್ತೆಗಳು ಸ್ವಚ್ಚವಾಗಬೇಕು, ಇವೆಲ್ಲ ಕೆಲಸಗಳು ವಾರದೊಳಗೆ ಆಗದೆ ಹೋದಲ್ಲಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಪಾಲಿಕೆ ಆಯುಕ್ತ ಭುವನೇಶ ಪಾಟೀಲರಿಗೆ ಶಾಸಕರು ಸೂಚಿಸಿದರು.
ಪಾಲಿಕೆಯ ಅಧಿಕಾರಿ, ಸಿಬ್ಬಂದಿ ಸಂಘಟಿತರಾಗಿ ಯುದ್ದೋಪಾದಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದ ಆಯುಕ್ತರು, ನಾವೇ ಎಲ್ಲವನ್ನು ಹೇಳಬೇಕಾ? ನಿಮ್ಮ ಕೆಲಸ ನಿಮಗೆ ಗೊತ್ತಿಲ್ಲವೆ? ಎಂದು ಪ್ರಶ್ನಿಸಿದರಲ್ಲದೆ ನೈರ್ಮಲ್ಯ ನಿರೀಕ್ಷಕರು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಇಲ್ಲದೆ ಹೋದಲ್ಲಿ ಇದುವರೆಗೂ ಕಣ್ಣು ಸನ್ನೆಯಿಂದ ಬೆದರಿಸಲಾಗುತ್ತಿತ್ತು. ಈಗ ಪೇಪರ್ ಮೇಲೆ ಕ್ರಮ ನಿಶ್ಚಿತ. ಇಂತಹ ಕ್ರಮಕ್ಕೆ ಅನಿವಾರ್ಯ ಮಾಡಬಾರದು ಎಂದರು.ಪರಿಸರ ಇಂಜಿನಿಯರ್‌ಗಳು, ಸ್ಯಾನಿಟರಿ ಇನ್ಸಪೆಕ್ಟರ್‌ಗಳು ಒಂದಾಗಿ ಯೋಜನೆ ರೂಪಿಸಿ ಡೆಂಗೀ ಬಗ್ಗೆ ಜಾಗೃತಿ ಮೂಡಿಸಿರಿ. ನೀರು ನಿಲ್ಲದಂತೆ ಕಕ್ರಮ ಕೈಗೊಳ್ಳಿ, ಕರಪತ್ರ ಮುದ್ರಿಸಿ ಜನತೆಗೆ ತಿಳಿಸಿರಿ ಎಂದು ಸಲಹೆ ನೀಡಿದರು.
ನೀವು ಹೊರಗ ಏನಂದ ಅಂತ ನೋಡ್ತೀರೋ ಇಲ್ಲ್ರೊ?: ನೀವು ಮನಿ ಬಿಟ್ಟು ಹೊರಗ ಕಾಲಿಟ್ಟಾಗ ನಿಮ್ಮ ಕೆಲಸ ವ್ಯಾಪ್ತಿಯೊಳ್ಗ ಏನದ ಅಂತ ನೋಡ್ತೀರೋ ಇಲ್ಲೋ? ಕಣ್ಣು ಮಚ್ಚಿಕೊಂಡೇ ಹೋಗ್ತೀರಾ ನಿಮ್ಮ ಕೆಲಸದ ವೈಖರಿ ಹೀಗೆ ಸಾಗಿದರೆ ಕ್ರಮ ನಿಶ್ಚಿತ. ಕೆಲಸ ಬ್ಯಾಡಂತ ಬಂದ್ರ ಹೊರಗ ಹೋಗ್ರಿ, ನಮಗ ಇಂತಹ ಸುತ್ತು ಸಿಬ್ಬಂದಿ ಬೇಡವೆಂದು ಶಾಸಕರು ಸಭೆಯಲ್ಲೇ ಗರಂ ಆಗಿ ವಾಗ್ದಾಳಿ ನಡೆಸಿದರು.ಜನರ ಆರೋಗ್ಯ, ನಗರ ನೈರ್ಮಲ್ಯ ರಕ್ಷಣೆ ಪಾಲಿಕೆಯ ಜವಾಬ್ದಾರಿಯಾಗಿದ್ದರೂ ಅದನ್ನೇ ನೀವು ಯಾರೂ ಸರಿಯಾಗಿ ನಿಭಾಯಿಸುತ್ತಿಲ್ಲ. ಹೀಗಾದ ಮೇಲೆ ನಿಮಗೇಕೆ ಇಲ್ಲಿ ಬೇರೇನೋ ಕೆಲಸ ಹೇಳಿ? ಎಇಇ, ಜೆಇ ಸೇರಿದಂತೆ ಅನೇಕರು ಇದ್ದೀರಿ. ಸಾಕಷ್ಟು ಸಿಬ್ಬಂದಿ, ಯಂತ್ರೋಪಕಣ ಇದ್ದರೂ ನಗರದಲ್ಲಿ ಬೇಕಾಬಿಟ್ಟಿ ಕುಳಿಗಳಿವೆ. ಕಸ, ಕೊಚ್ಚೆ ರಾಶಿಯಾಗುತ್ತಿದೆ. ಇದನ್ನೆಲ್ಲ ಗಮನಿಸೋರು ಯಾರು? ಎಂದರು.
ರಾಮ ಮಂದಿರ- ರೇಲ್ವೆ ಅಂಡರ್ ಪಾಸ್ ರಸ್ತೆ ಕಾಮಗಾರಿ ನನೆಗುದಿಗೆ: ರಾಮ ಮಂದಿರ ವೃತ್ತದಿಂದ ರೇಲ್ವೆ ಅಂಡರ್ ಬ್ರಿಡ್ಜ್ ವರೆಗಿನ ಎಂಜಿಎನ್‌ನಿವೈ ಅಡಿಯಲ್ಲಿ ಕೈಗಂಡ ವಿಭಜಕ ನಿರ್ಮಾಣ, ರಸ್ತೆ ಸುಧಾರಣೆ ಯೋಜನೆ ನೆನೆಗುದಿಗೆ ಬಿದ್ದಿದ್ದು ಜನ ತೊಂದರೆಯಲ್ಲಿದ್ದಾರೆ. ಇಲ್ಲಿ ಕೆಲಸಗಳು ಅರೆಬರೆ, ವಿಭಜಕ ಕೆಲಸಗಲೂ ಸರಿಯಾಗಿಲ್ಲ, ವಿದ್ಯುತ್ ದೀಪಗಳು ಇಲ್ಲ, ಮಲೆ ಬಂದರೆ ನೀರು ಆಚೀಚೆ ನಿಂತು ಜನರಿಗೆ ತೊಂದರೆ ಹ್ಚಿಚಿದೆ. ಇಂತಹ ಕೆಲಸ ಬೇಗ ಮುಗಿಸಲು ಏನು ತೊಂದರೆ ಎಂದು ಪ್ರಶ್ನಿಸಿದರು.ಪಾಲಿಕೆ ಆಯುಕ್ತ ಭುವನೇಶ ಪಾಟೀಲ್, ಅಭಿವೃದ್ಧಿ ಆಯುಕ್ತ ಆರ್ ಪಿ ಜಾಧವ್ ಈ ಬಗ್ಗೆ ಮಾತನಾಡುತ್ತ ಇಲ್ಲಿ ಕಾಮಗಾರಿ ಅರ್ಧಕ್ಕೆ ನಿಂತಿರೋದನ್ನ ಒಪ್ಪಿಕೊಂಡರಲ್ಲದೆ ಡಿವೈಡರ್ ಸರಿಪಡಿಸುವ ಕೆಲಸ ಸಾಗಿದೆ ಎಂದು ಶಸಾಕರಿಗೆ ಸಮಜಾಯಿಷಿ ಹೇಳಿ ವಿಷಾಂತರ ಮಾಡಿದರು. ರಸ್ತೆಯನ್ನೇ ಪಪುನಃ ನಿರ್ಮಿಸುವ ಅಗತ್ಯ ಒತ್ತಿ ಹೇಳುತ್ತ ಈ ಕೆಲಸ ಬೇಗ ಆಗೋದಲ್ಲವೆಂದು ಅಭಿಪ್ರಾಯಪಟ್ಟರು.
ರಿಂಗ್ ರಸ್ತೆಯ ದೀಪಗಳ ನಿರ್ವಹಣೆ ಸರಿಯಾಗಿಲ್ಲದ ಸಂಗತಿಗಳೂ ಸಭೆಯಲ್ಲಿ ಚರ್ಚೆಗೆ ಬಂದಾಗ ಅಧಿಕಾರಿಗಳು ಪಾಲಿಕೆ ಅರ್ಧ, ಎಲ್ ಆ್ಯಂಡ್ ಟಿ ಅರ್ಧ ದೀಪಗಳ ನಿರ್ವಹಣೆ ಮಾಡುತ್ತಿದೆ ಎಂದು ಹೇಳುತ್ತ ಅಲ್ಲಿಯೂ ಸಮಜಾಯಿಷಿಯನ್ನ ನೀಡಿದರೆ ಹೊರತು ಸಮಸ್ಯೆಗೆ ಪರಿಹಾರ ಹುಡುಕುವ ಗೋಜಿಗೆ ಅಧಿಕಾರಿ, ಶಾಸಕರು ಇಬ್ಬರೂ ಹೋಗಲಿಲ್ಲ.ಶಾಸಕ ಅಲ್ಲಂಪ್ರಭು ಪಾಟೀಲ್ ಖಡಕ್ ಸೂಚನೆಗಳು
- ಡೆಂಘೀ ಸೇರಿದಂತೆ ಸಾಂಕ್ರಾಮಿಕ ರೋಗ ಬಾಧೆ ತಡೆಗೆ ಕಟ್ಟುನಿಟ್ಟು ಕ್ರಮ ಕೈಗೊಳ್ಳಿ- ವಾರದೊಳಗೆ ಕಸ- ಕೊಲಚೆ ನಗರದಲ್ಲಿ ಕಾಣದಂತೆ ಕ್ರಮಕ್ಕೆ ಮುಂದಾಗಿರಿ
- ನಗರದಲ್ಲಿನ ರಸ್ತೆಗಳ ಕುಳಿಗಳನ್ನು ಭರ್ತಿ ಮಾಡಲೇಬೇಕು, ಇಲ್ಲದೆ ಹೋದರೆ ಕ್ರಮ- ನೈರ್ಮಲ್ಯ ನಿರೀಕ್ಷಕರು ಕಣ್ಣುಗಳನ್ನು ತೆರೆದುಕೊಂಡು ಕೆಲಸ ಮಾಡಿರಿ, ಇಲ್ದೆ ಹೋದ್ರೆ ಕ್ರಮ