ದೇಶದ ರಕ್ಷಣಾ ಪಡೆಗೆ ತಂತ್ರಜ್ಞಾನದ ಬಲ-ಪ್ರೊ. ಶ್ವೇತಾ

| Published : Oct 29 2025, 01:15 AM IST

ಸಾರಾಂಶ

ದೇಶದ ರಕ್ಷಣಾ ಪಡೆಯು ತಂತ್ರಜ್ಞಾನದ ಬಲದಿಂದ ಹೆಚ್ಚು ಬಲಿಷ್ಠ ಹಾಗೂ ಸುರಕ್ಷಿತವಾಗಿದೆ ಎಂದು ವರೂರು ಎ.ಜಿ.ಎಂ. ಬಿಬಿಎ ಹಾಗೂ ಬಿಸಿಎ ಕಾಲೇಜು ಪ್ರಾಚಾರ್ಯರಾದ ಪ್ರೊ.ಶ್ವೇತಾ ಕೆ. ಕೋಣನವರ ಹೇಳಿದರು.

ಶಿಗ್ಗಾಂವಿ: ದೇಶದ ರಕ್ಷಣಾ ಪಡೆಯು ತಂತ್ರಜ್ಞಾನದ ಬಲದಿಂದ ಹೆಚ್ಚು ಬಲಿಷ್ಠ ಹಾಗೂ ಸುರಕ್ಷಿತವಾಗಿದೆ ಎಂದು ವರೂರು ಎ.ಜಿ.ಎಂ. ಬಿಬಿಎ ಹಾಗೂ ಬಿಸಿಎ ಕಾಲೇಜು ಪ್ರಾಚಾರ್ಯರಾದ ಪ್ರೊ.ಶ್ವೇತಾ ಕೆ. ಕೋಣನವರ ಹೇಳಿದರು.ತಮ್ಮ ಕಾಲೇಜು ವಿದ್ಯಾರ್ಥಿಗಳೊಂದಿಗೆ ತಾಲೂಕಿನ ತಿಮ್ಮಾಪುರದ ಎಂಎಸ್ ಸೈನ್ಸ್ ಅಂಡ್ ಟೆಕ್ನಾಲಾಜಿ ಪಾರ್ಕ್ ಗೆ ಶೈಕ್ಷಣಿಕ ಪ್ರವಾಸದ ಅಂಗವಾಗಿ ಮಂಗಳವಾರ ಭೇಟಿ ನೀಡಿದ ಬಳಿಕ ಮಾತನಾಡಿದರು.ಎರಡು ರಾಷ್ಟ್ರಗಳ ನಡುವೆ ನಡೆಯುವ ಯುದ್ದದ ಸಮಯದಲ್ಲಿ ತಂತ್ರಜ್ಞಾನದ (ರೋಬೋಟಿಕ್ಸ್ ) ನೆರವಿನಿಂದ ಸುರಕ್ಷಿತ ತಾಣಗಳನ್ನು ಗುರುತಿಸುವ ಮೂಲಕ ಸೈನಿಕರ ಜೀವವನ್ನು ರಕ್ಷಿಸಬಹುದು ಎಂಬುದನ್ನು ಪಾರ್ಕ್‌ನ ಗ್ಯಾಲರಿಯಲ್ಲಿ ವಿಶಿಷ್ಟವಾಗಿ ತೋರಿಸಲಾಗುತ್ತದೆ ಎಂದು ಪ್ರೊ.ಶ್ವೇತಾ ನುಡಿದರು.ದೈನಂದಿನ ಬದುಕಿನಲ್ಲಿ ತಂತ್ರಜ್ಞಾನ ಅನ್ವೇಷಣೆಗಳಾದ ವಿವಿಧ ಸೆನ್ಸಾರ್ಗಳು ಎಂಥ ಕೆಲಸ ಮಾಡುತ್ತವೆ ಎಂಬುದನ್ನು ಇನೋವೇಶನ್ ವಿಭಾಗದಲ್ಲಿ ಪರಿಚಯಿಸಲಾಗಿದ್ದು ವಿದ್ಯಾರ್ಥಿಗಳನ್ನು ತುಂಬಾ ಆಕರ್ಷಿಸುತ್ತದೆ ಎಂದು ತಿಳಿಸಿದರು.ಇಂಧನ ನವೀಕರಣ ಹಾಗೂ ಉತ್ಪಾದನೆ ಕುರಿತು ರಿನೇವೇಬಲ್ ಎನರ್ಜಿ ವಿಭಾಗದಲ್ಲಿ ಪ್ರಾತ್ಯಕ್ಷಿಕೆಗಳ ರೂಪದಲ್ಲಿ ಅನಾವರಣಗೊಳಿಸಲಾಗಿದೆ. ಅಲ್ಲದೇ ಮೊಬೈಲ್ ನೆರವಿನಿಂದ ಗೃಹೋಪಯೋಗಿ ಕೆಲಸಗಳನ್ನು ಹೇಗೆ ಮಾಡಬಹುದು ಎಂಬುದನ್ನು ಮೊಬೈಲ್ ಸಹಾಯದಿಂದ ಗಿಡಗಳಿಗೆ ನೀರುಣಿಸುವ ಪ್ರಾತ್ಯಕ್ಷಿಕೆಯು ವಿವರಿಸುತ್ತದೆ ಎಂದರು ಪ್ರೊ.ಶ್ವೇತಾ ಕೆ. ಕೊಣನವರ.

ಯಶೋಧಾ ಪಾಟೀಲ, ವಿಜಯಲಕ್ಷ್ಮಿ ಧನವೆ, ಡಾ.ವಾಣಿ, ಬಸಮ್ಮಾ ತೆಂಬದ, ಸಮೀರ ಬಳ್ಳಾರಿ ಹಾಗೂ ಅಷಮೀರಾ ವಿದ್ಯಾರ್ಥಿಗಳೊಂದಿಗಿದ್ದರು..