ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಗಾಂಧಿ ಟೋಪಿ, ಖಾದಿ ಬಟ್ಟೆ ಧರಿಸುವುದು ಗಾಂಧಿ ಪಥದಲ್ಲಿ ನಡೆದಂತಲ್ಲ. ನಮ್ಮ ನಡೆ, ನುಡಿಯಲ್ಲಿ ನಾವುಗಳು ಗಾಂಧಿಯವರ ಸತ್ಯ, ಅಹಿಂಸಾ ತತ್ವವನ್ನು ಅಳವಡಿಸಿಕೊಂಡು, ಇತರರಿಗೆ ಮಾದರಿಯಾಗುವಂತೆ ಬದುಕಿದಾಗ ಮಾತ್ರ ದೇಶದಲ್ಲಿ ಶಾಂತಿ, ನೆಮ್ಮದಿ ಸಹಬಾಳ್ವೆ ಸಾಧ್ಯ ಎಂದು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.ನಗರದ ಬಾಲಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್, ತುಮಕೂರು, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್, ತುಮಕೂರು ವತಿಯಿಂದ ಆಯೋಜಿಸಿದ್ದ ಗಾಂಧಿ ಸ್ಮೃತಿ ಮತ್ತು ನವಜೀವನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಗಾಂಧೀಜಿಯವರು ಹೇಗೆ ನನ್ನ ಜೀವನವೇ ನನ್ನ ಸಂದೇಶ ಎಂದರೋ, ಹಾಗೆಯೇ ಜನರು ಅವರು ತತ್ವಾದರ್ಶಗಳಲ್ಲಿ ಶೇ 10 ರಷ್ಟನ್ನು ಪಾಲಿಸಿದರೆ, ರಾಮರಾಜ್ಯದ ಕನಸು ನನಸಾಗಲಿದೆ ಎಂದರು.ಎಸ್‌ಕೆಡಿಆರ್‌ಡಿಪಿ ಪರ್ಯಾಯ ಸರಕಾರವಾಗಿ ರಾಜ್ಯದಲ್ಲಿ ಕೆಲಸ ಮಾಡುತ್ತಿದೆ. ತುಮಕೂರು ಜಿಲ್ಲೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಶುದ್ದಕುಡಿಯುವ ನೀರಿನ ಘಟಕಗಳು, ಕೆರೆ ಹೂಳೆತ್ತುವುದು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಜರುಗಿವೆ. ಗಾಂಧೀಜಿಯವರ ಮಾರ್ಗದಲ್ಲಿ ನಡೆಯುತ್ತಿರುವ ಸರಕಾರೇತರ ಸಂಸ್ಥೆಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಂಚೂಣಿಯಲ್ಲಿದೆ. ಮದ್ಯವರ್ಜನ ಶಿಬಿರಗಳ ಮೂಲಕ ಮದ್ಯಪಾನ ನಿಮೂರ್ಲನೆಗೆ ಹಗರಲಿರುಳು ಶ್ರಮಿಸುತ್ತಿದೆ. ಇದಕ್ಕೆ ಬೆನ್ನೆಲುಬಾಗಿ ನಿಂತಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿರುವ ಡಾ.ವೀರೇಂದ್ರ ಹೆಗಡೆಅವರ ಸೇವೆ ಅನನ್ಯಎಂದು ಶಾಸಕ ಜಿ.ಬಿ. ಜೋತಿಗಣೇಶ್ ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ನಾಗಣ್ಣ ಮಾತನಾಡಿ, ಮಹಾತ್ಮಗಾಂಧಿ ಅವರ ಸತ್ಯ, ಅಹಿಂಸೆ ಎಂಬ ಪ್ರಬಲ ಆಸ್ತ್ರಗಳಿಗೆ ಇಂದಿಗೂ ದೇಶ, ವಿದೇಶಗಳಲ್ಲಿ ಮನ್ನಣೆಯಿದೆ. ವಿಶ್ವಸಂಸ್ಥೆ ಗಾಂಧೀಜಿಯವರ ಹುಟ್ಟು ಹಬ್ಬದ ದಿನವಾದ ಅಕ್ಟೋಬರ್ 2 ನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸುತ್ತಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಕೇಂದ್ರ ಸರಕಾರದ ಹಲವಾರು ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಆದೇ ರೀತಿ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಜನರಿಗೆ ಜಾಗೃತಿ ಮೂಡಿಸಿ, ಸರಕಾರ ನೀಡುವ ಗೃಹಲಕ್ಷ್ಮಿ, ಗೃಹ ಜೋತಿ,ವಿದ್ಯಾನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಸಮರ್ಪಕ ಬಳಕೆಗೆ ಸರಕಾರದೊಂದಿಗೆಕೈಜೋಡಿಸಬೇಕೆಂದು ಸಲಹೆ ನೀಡಿದರು.ಗಾಂಧಿ ಸ್ಮೃತಿಕುರಿತು ವಿಶೇಷ ಉಪನ್ಯಾಸ ನೀಡಿದ ತುಮಕೂರು ವಿವಿ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಪರುಶುರಾಮ್ ಕೆ. ರವರು, 2001 ರಿಂದ 2011 ರವರೆಗೆ ನಾನು ಸಹ ಎಸ್.ಕೆ.ಡಿ.ಆರ್.ಡಿಆರ್‌ನ ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗಾಂಧಿಯವರಅಶಯದಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ತಂಗನಹಳ್ಳಿ ಮಠದ ಶ್ರೀಬಸವಲಿಂಗಮಹಾ ಸ್ವಾಮೀಜಿ ಮಾತನಾಡಿ, ದೇಶದ ಬಗ್ಗೆ ಯುವಜನರಿಗೆ ಕಾಳಜಿ ಇಲ್ಲದಂತಾಗಿದೆ.ಬುದ್ದ, ಬಸವ, ಅಂಬೇಡ್ಕರ್, ಗಾಂಧಿ ಹಾದಿಯಲ್ಲಿ ನಡೆದರೇ ಮಾತ್ರ ದೇಶದಲ್ಲಿ ಶಾಂತಿ, ನಮ್ಮದಿ, ಸಹಬಾಳ್ವೆಯ ಜೀವನ ಸಾಧ್ಯ. ಸರ್ಕಾರ ಒಂದೆಡೆ ಮದ್ಯ ಮಾರಾಟಕ್ಕೆಉತ್ತೇಜನ ನೀಡಿದರೆ, ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಮದ್ಯವರ್ಜನೆಗೆ ಒತ್ತು ನೀಡುತ್ತಿದೆ. ಇದನ್ನು ಸರಕಾರಗಳು ಅರ್ಥ ಮಾಡಿಕೊಂಡು ಯೋಜನೆಗಳನ್ನು ರೂಪಿಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಕೆ.ಡಿ.ಆರ್.ಡಿಪಿಯ ತುಮಕೂರು ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಕಳೆದ 43 ವರ್ಷಗಳಲ್ಲಿ ಸುಮಾರು 6.50 ಲಕ್ಷ ಸ್ವ ಸಹಾಯ ಸಂಘಗಳನ್ನು ರಚಿಸಿ, 55 ಲಕ್ಷ ಸದಸ್ಯರನ್ನು ಮಾಡಿ, ಮೂರುವರೆ ಕೋಟಿ ಜನರಿಗೆ ಸಹಾಯ ಮಾಡಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ರಾಜ್ಯಾಧ್ಯಕ್ಷ ಅಮರನಾಥಶೆಟ್ಟಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದಿಂದ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿವೆ. ಅಸೂಯೆ ಬೇಡ. ಕೆಲವರ ಪಿತೂರಿಗೆ ಕ್ಷೇತ್ರವನ್ನು ಬಲಿಗೊಡಬೇಡಿ ಎಂದು ಕಿವಿ ಮಾತು ಹೇಳಿದರು.ಕಾರ್ಯಕ್ರಮಕ್ಕೂ ಮುನ್ನ ನಗರ ಟೌನಹಾಲ್ ವೃತ್ತದಿಂದ ನವಜೀವನ ಸದಸ್ಯ ಜಾಥಾ ಏರ್ಪಡಿಸಲಾಗಿತ್ತು. ಜಾಥಾಕ್ಕೆ ಶಾಸಕ ಜಿ.ಬಿ.ಜೋತಿ ಗಣೇಶ್ ಚಾಲನೆ ನೀಡಿದರು. ಮದ್ಯವರ್ಜನ ಶಿಬಿರಗಳ ಮೂಲಕ ಸಹಜಜೀವನಕ್ಕೆ ಮರಳಿದ ವ್ಯಕ್ತಿಗಳನ್ನು ಅಭಿನಂದಿಸಲಾಯಿತು.ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಎಸ್.ಸಿದ್ದರಾಮಣ್ಣ, ಜನಜಾಗೃತಿ ವೇದಿಕೆ ಟ್ರಸ್ಟ್ನಯೋಜನಾಧಿಕಾರಿ ತಿಮ್ಮಯ್ಯನಾಯ್ಕ್, ಜನಜಾಗೃತಿ ವೇದಿಕೆ ಟ್ರಸ್ಟ್ನ ಸದಸ್ಯರಾದ ಗಣೇಶ್ ಪ್ರಸಾದ್, ಆರ್. ಕಾಮರಾಜು, ಡಾ.ಸಂಜಯ್ ನಾಯಕ್, ಪ್ರೇಮ ಹೆಗಡೆ, ದಯಾನಂದ ಅರಿಯೂರು, ವಿಜಯ್ ಭಾಸ್ಕರ್, ತೇಜಸ್ ಕುಮಾರ್, ಲೋಕೇಶ್, ಬಸವರಾಜು, ಕುಮಾರ್, ಡಾ.ಪ್ರಕಾಶ್ ಪಾಲ್ತೆ, ಮಹಾವೀರಜೈನ್, ಲಕ್ಷ್ಮಣ್, ರಂಗಸ್ವಾಮಿ, ಆ.ನ.ಲಿಂಗಪ್ಪ, ಜಿ.ಆರ್.ಶಿವಕುಮಾರ್, ವೆಂಕಟೇಶಗೌಡರು, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.