ಮಹಾನಗರ ಪಾಲಿಕೆ ನೌಕರರ ಪ್ರತಿಭಟನೆ 3ನೆಯ ದಿನಕ್ಕೆ

| Published : Jul 11 2025, 12:32 AM IST

ಸಾರಾಂಶ

ಹು-ಧಾ ಮಹಾನಗರ ಪಾಲಿಕೆ ನೌಕರರು ರಜೆ ಸಹಿತ ನಡೆಸುತ್ತಿರುವ ಪ್ರತಿಭಟನೆ 3ನೇ ದಿನಕ್ಕೆ ಕಾಲಿರಿಸಿದೆ. ಮುಷ್ಕರ ನಿರತ ಪಾಲಿಕೆ ನೌಕರರು ಬೆಳಗ್ಗೆ ಪಾಲಿಕೆ ಆವರಣದಲ್ಲಿ ಸೇರಿ, ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನೌಕರರು ಒತ್ತಾಯಿಸಿದರು.

ಹುಬ್ಬಳ್ಳಿ: 7ನೇ ವೇತನ ಆಯೋಗದ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಪಾಲಿಕೆ ನೌಕರರ ಸಂಘ ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ಹು-ಧಾ ಪಾಲಿಕೆ ನೌಕರರು ನಡೆಸುತ್ತಿರುವ ಪ್ರತಿಭಟನೆ ಮೂರನೆಯ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಪ್ರತಿಭಟನೆಗೆ ನಗರದ ಜೈ ಭೀಮ ಯುವಶಕ್ತಿ ಸೇನಾ ಬೆಂಬಲ ವ್ಯಕ್ತಪಡಿಸಿದೆ.

ಯುವಶಕ್ತಿ ಸೇನಾದ ಜಿಲ್ಲಾ ಅಧ್ಯಕ್ಷ ಹರೀಶ ಎಂ. ಗುಂಟ್ರಾಳ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಅಲ್ಲದೆ, ಕೂಡಲೇ ಪಾಲಿಕೆ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸೇನಾದ ಉಪಾಧ್ಯಕ್ಷ ಸುನೀಲ ಕುರ್ಡೇಕರ್, ಮುಖಂಡರಾದ ಪ್ರಕಾಶ ಬಳ್ಳಾರಿ, ಸತೀಶ ಮಿಶ್ರಿಕೋಟಿ, ರಮೇಶ ಹಿರೇಮನಿ, ದಿವಾನ್ ಸಾಬ್ ನದಾಫ್‌, ಹೇಮಂತ ತೇರದಾಳ, ಮಂಜು ಉಪ್ಪಾರ್, ಮುಜಾರ್ ಬಹದ್ದೂರ್, ಅಜರ್ ಮುಲ್ಲಾ, ತಾಲೂಕು ಅಧ್ಯಕ್ಷ, ಬಸವರಾಜ್ ಆದಾಪುರ, ಉಪಾಧ್ಯಕ್ಷ ಮಲ್ಲಿಕಾರ್ಜುನ್ ಬನ್ಸೋಡೆ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಜವಳಗಿ, ಸಹ ಕಾರ್ಯದರ್ಶಿ ಶಿವರಾಜ್ ಗೋಡೆ, ಖಜಾಂಚಿ ಸಂತೋಷ್ ಲಮಾಣಿ ಸೇರಿದಂತೆ ಅನೇಕರು ಇದ್ದರು.

3ನೇ ದಿನಕ್ಕೆ ಪ್ರತಿಭಟನೆ: ಹು-ಧಾ ಮಹಾನಗರ ಪಾಲಿಕೆ ನೌಕರರು ರಜೆ ಸಹಿತ ನಡೆಸುತ್ತಿರುವ ಪ್ರತಿಭಟನೆ 3ನೇ ದಿನಕ್ಕೆ ಕಾಲಿರಿಸಿದೆ. ಮುಷ್ಕರ ನಿರತ ಪಾಲಿಕೆ ನೌಕರರು ಬೆಳಗ್ಗೆ ಪಾಲಿಕೆ ಆವರಣದಲ್ಲಿ ಸೇರಿ, ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನೌಕರರು ಒತ್ತಾಯಿಸಿದರು. ಪಾಲಿಕೆ ನೌಕರರು ಪ್ರತಿಭಟನೆ ನಡೆಸುತ್ತಿರುವುದರಿಂದ ಪಾಲಿಕೆಯಲ್ಲಿ ವಿವಿಧ ಕೆಲಸಗಳಿಗೆ ಆಗಮಿಸುತ್ತಿದ್ದ ಸಾರ್ವಜನಿಕರು ತಮ್ಮ ಕೆಲಸ ಆಗದೇ ಹಾಗೆ ಮರಳುತ್ತಿದ್ದ ದೃಶ್ಯ ಕಂಡು ಬಂತು.

ಪ್ರತಿಭಟನೆಯಲ್ಲಿ ಪ್ರಸಾದ ಪೆರೂರ, ಅಶೋಕ ಹಲಗಿ, ಪಿ.ಬಿ. ಶಿವಳ್ಳಿ, ಸಿ.ಎಂ. ಬೆಳದಡಿ, ಸಿ..ಎಸ್. ಜಾಬೀನ್, ಶ್ರೀಧರ ಸಣ್ಣಗೌಡರ, ರಾಜು ಕೊಲಗೊಂಡ, ಬಸವರಾಜ ಗುಡಿಹಾಳ, ಜಗದೀಶ ಗುಡ್ಡದಕೇರಿ, ಮಹಾಂತೇಶ ಹಲಕುರ್ಕಿ ಸೇರಿದಂತೆ ಎಲ್ಲ ನೌಕರರು ಪಾಲ್ಗೊಂಡಿದ್ದರು.